ಬೆಂಗಳೂರು: ನಗರದಲ್ಲಿನ ವೋಟರ್ ಐಡಿ ಪರಿಷ್ಕರಣೆ ಅಕ್ರಮ ಪ್ರಕರಣ ಸಂಬಂಧ, ಈಗಾಗಲೇ ರಾಜ್ಯ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಪಕ್ಷದಿಂದ ತನಿಖೆಗಾಗಿ ದೂರು ಸಲ್ಲಿಸಲಾಗಿತ್ತು. ಈ ಬೆನ್ನಲ್ಲೇ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡೋದಕ್ಕೆ ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.
ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು, ಬೆಂಗಳೂರಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಪ್ರಕರಣ ಸಂಬಂಧ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲು ನಿರ್ಧರಿಸಲಾಗಿದೆ. ಕೇಂದ್ರ ಚುನಾವಣಾ ಚುನಾವಣಾ ಆಯೋಗದ ಮುಖ್ಯಸ್ಥರ ಭೇಟಿಗೆ ಸಮಯವನ್ನು ಕೇಳಿದ್ದೇವೆ ಎಂದರು.
‘ಪಡಿತರ ಚೀಟಿದಾರ’ರಿಗೆ ಬಿಗ್ ಶಾಕ್ ; ಕೇಂದ್ರ ಸರ್ಕಾರ ಮಹತ್ವದ ಘೋಷಣೆ, ಆ ಎಲ್ಲ ‘ಕಾರ್ಡ್’ ರದ್ದು
ವೋಟರ್ ಐಡಿ ಹಗರಣ ಸಂಬಂಧ ಎಲ್ಲಾ ದಾಖಲೆ ನಮ್ಮ ಬಳಿಯಲ್ಲಿ ಇದೆ. ಹಗರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎನ್ನುವಂತ ದಾಖಲೆಗಳೂ ಇದ್ದಾವೆ. ಸಚಿವರು, ಶಾಸಕರು, ಪೋನ್ ನಲ್ಲಿ ಮಾತನಾಡಿರುವ ದಾಖಲೆ ಇದೆ ಎಂಬುದಾಗಿ ತಿಳಿಸಿದರು.