ಬೆಂಗಳೂರು: ಕೆಲ ದಿನಗಳ ಹಿಂದೆ ಮೈಸೂರು-ಬೆಂಗಳೂರು ಹೆದ್ದಾರಿಯ ( Mysuru – Bengaluru Highway ) ರಾಮನಗರದ ಬಳಿಯಲ್ಲಿ ಕೆ ಎಸ್ ಆರ್ ಟಿಸಿ ಬಸ್ ( KSRTC Bus ) ಅಂಡರ್ ಪಾಸ್ ನಲ್ಲಿ ಮುಳುಗಿದ ಸುದ್ದಿ ನೋಡಿರುತ್ತೀರಿ. ನೀವು ಓದಿರುತ್ತೀರಿ. ಈ ವೇಳೆ ತುರ್ತು ನಿರ್ಗಮದ ಭಾಗಿಲಿನ ಮೂಲಕ ರಕ್ಷಿಸಿದವರು ಆ ಬಸ್ ಚಾಲಕ ಹಾಗೂ ನಿರ್ವಾಹಕರು. ಅಷ್ಟೇ ನಾ ಅಂತ ಹುಬ್ಬೇರಿಸಬೇಡಿ. ಆ ಇಬ್ಬರಿಗೂ ಚಾಲಕ, ನಿರ್ವಾಹಕರಿಗೆ ( KSRTC Driver and Conductor ) ಈಜು ಬರ್ತಾ ಇರಲಿಲ್ಲ. ಆ ಬಗ್ಗೆ ಮುಂದೆ ಓದಿ..
ಕಂಡು ಕೇಳರಿಯದ ಮಹಾ ಮಳೆಗೆ ಊರಿಗೆ ಊರೇ ನೀರಿನಲ್ಲಿ ಮುಳುಗುತ್ತಿದ್ದು, ಹೆದ್ದಾರಿಗಳೆಲ್ಲಾ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತ, ಈ ರಕ್ಕಸ ಮಳೆಯಲ್ಲಿ ಸಾರಿಗೆ ಬಸ್ಸುಗಳನ್ನು ಚಾಲನೆ ಮಾಡುವ ದೊಡ್ಡ ಸವಾಲು ಕೆ ಎಸ್ ಆರ್ ಟಿ ಸಿಯ ಚಾಲನಾ ಸಿಬ್ಬಂದಿಗಳದ್ದಾಗಿದೆ.
ಈ ನಡುವೆಯೂ ದಿನಾಂಕ: 29.08.2022 ರಂದು ರಾಮನಗರ ಮೈಸೂರು – ಬೆಂಗಳೂರು ಹೆದ್ದಾರಿ ಅಕ್ಷರಶಃ ನೀರಿನಿಂದ ಮುಳುಗಿತ್ತು. ವಾಹನ ಸಂಖ್ಯೆ ಕೆಎ42-ಎಫ್0502 ಅನುಸೂಚಿ ಸಂಖ್ಯೆ-117 (ಉರಗಹಳ್ಳಿ – ರಾಮನಗರ) ಮಾರ್ಗದಲ್ಲಿ ಚಾಲನೆಯಲ್ಲಿದ್ದಾಗ, ರಾಮನಗರ ರೈಲ್ವೇ ಬ್ರಿಡ್ಜ್ ಅಂಡರ್ ಪಾಸ್ ನಲ್ಲಿ ಬರುತ್ತಿದ್ದ ಬಸ್ಸು ಮಳೆ ನೀರಿಗೆ ಸಿಲುಕಿ ಮುಳುಗಡೆಯಾಗಿತ್ತು. ಸ್ವಲ್ಪ ಮುಂದೆ ಇದೇ ಮಾರ್ಗದಲ್ಲಿ ಮತ್ತೊಂದು ಖಾಸಗಿ ವಾಹನ ಕೆಟ್ಟು ನಿಂತಿದ್ದರಿಂದ ಬಸ್ಸನ್ನು ಮುಂದೆ ಚಲಾಯಿಸಲು ಸಾಧ್ಯವಾಗಲೇ ಇಲ್ಲ.
ಈ ಸಂದರ್ಭದಲ್ಲಿ, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬಗ್ಗೆ ಚಿಂತೆಗೊಳಗಾದಂತ ರಾಮನಗರ ಡಿಪೋ ಕೆ ಎಸ್ ಆರ್ ಟಿ ಸಿ ಬಸ್ ಚಾಲಕ ಕಂ ನಿರ್ವಾಹಕರಾದಂತ ಲಿಂಗರಾಜು ಹಾಗೂ ವೆಂಕಟೇಶ್ ಬ್ರಿಡ್ಜ್ ಸಮೀಪದಲ್ಲಿ ಹುಡುಕಾಡಿ ಏಣಿಯನ್ನು ತಂದಿದ್ದಾರೆ. ಆ ಏಣಿಯನ್ನು ತುರ್ತು ನಿರ್ಗಮನದ ಬಾಗಿಲಿನ ಬಳಿಗೆಹಾಕಿ ಬಸ್ಸಿನಲ್ಲಿದ್ದಂತ ಪ್ರಯಾಣಿಕರನ್ನು ಒಬ್ಬೊಬ್ಬರನ್ನಾಗಿ ಹೊರಗೆ ಇಳಿಸಿದ್ದಾರೆ.
ಬೆಂಗಳೂರಿಗರೇ ಮನೆಯಿಂದ ಹೊರ ಬರೋ ಮುನ್ನಾ ಎಚ್ಚರ: ಮುಂದಿನ 3 ಗಂಟೆ ಭಾರಿ ಮಳೆ | Bengaluru Rain
ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿದ್ದಂತ ಪ್ರಯಾಣಿಕರನ್ನು ಎದೆ ಮಟ್ಟದ ನೀರಿನಲ್ಲಿ ನಿಂತು ಸುರಕ್ಷಿತವಾಗಿ ಇಳಿಸಿದಂತ ಚಾಲಕ ಕಂ ನಿರ್ವಾಹಕ ಲಿಂಗರಾಜು ಹಾಗೂ ವೆಂಕಟೇಶ್ ಕ್ಷಣ ಕ್ಷಣಕ್ಕೂ ಬ್ರಿಡ್ಜ್ ಕೆಳಗೆ ನೀರು ಏರಿಕೆಯಾಗುತ್ತಿದ್ದರೂ ಎದೆಗುಂದಿಲ್ಲ. ಎಲ್ಲಾ ಪ್ರಯಾಣಿಕರನ್ನು ಬಸ್ಸಿನಿಂದ ಇಳಿಸಿ, ಸುರಕ್ಷಿತ ಸ್ಥಳಕ್ಕೆ ತಲುಪಿದ ನಂತ್ರ, ಸ್ಥಳೀಯರ ನೆರವಿನಿಂದ ನೀರಿನಿಂದ ಹೊರ ಬಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಈ ವೇಳೆಯಲ್ಲಿ ಪ್ರಯಾಣಿಕರೊಬ್ಬರು ನೀರು ಏರಿಕೆಯಾಗಿ, ಎದೆಮಟ್ಟದವರೆಗೆ ಬರ್ತಾ ಇದ್ದರು ನಿಮಗೆ ಭಯವಾಗಲಿಲ್ಲವೇ.? ಈಜು ಬರ್ತಾ ಇತ್ತಾ ಎಂಬುದಾಗಿ ಪ್ರಶ್ನಿಸಿದಾಗ ಲಿಂಗರಾಜು ಮತ್ತು ವೆಂಕಟೇಶ್ ತಮಗಿಬ್ಬರಿಗೂ ಈಜು ಬರೋದಿಲ್ಲ ಎಂಬುದಾಗಿ ಹೇಳಿದ್ದನ್ನು ಕೇಳಿ ಕ್ಷಣಕಾಲ ಶಾಕ್ ಆಗಿದ್ದಾರೆ. ಕೊಂಚ ಎಚ್ಚುಕಮ್ಮಿಯಾಗಿದ್ದರೂ ಪ್ರಯಾಣಿಕರು ಸುರಕ್ಷಿತವಾಗಿದ್ದರೂ ಚಾಲಕ, ನಿರ್ವಾಹಕರು ನೀರು ಪಾಲಾಗುತ್ತಿದ್ದನ್ನು ನನೆದು ಅವರ ಕೆಲಸಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿಯೂ ವೈರಲ್ ಆಗಿ, ಕೆ ಎಸ್ ಆರ್ ಟಿ ಸಿಯ ಲಿಂಗರಾಜು ಹಾಗೂ ವೆಂಕಟೇಶ್ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬಂದಿತ್ತು.
ಈ ವಿಷಯವನ್ನು ತಿಳಿದಂತ ಕೆ ಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರಾದಂತ ವಿ ಅನ್ಬುಕುಮಾರ್ ( KSRTC MD V Anbhukumar ) ಇಂದು ಚಾಲಕ ಕಂ ನಿರ್ವಾಹಕ ಲಿಂಗರಾಜು ಹಾಗೂ ವೆಂಕಟೇಶ್ ಅವರನ್ನು ಕೇಂದ್ರ ಕಚೇರಿಗೆ ಆತ್ಮೀಯವಾಗಿ ಬರಮಾಡಿಕೊಂಡು, ಶಾಲು ಒದಿಸಿ, ಸನ್ಮಾನಿಸಿ, ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿದರು.
ಈ ವೇಳೆ ಮಾತನಾಡಿದಂತ ಅವರು, ಈಜು ಬರದ ನಾವಿಬ್ಬರೂ, ಬಸ್ಸಿನಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಉಳಿಸಲು ಕಷ್ಟಪಟ್ಟಿದ್ದೇವೆ. ಅದೇ ರೀತಿ ಪ್ರಯಾಣಿಕರು ಕೂಡ ನಮ್ಮನ್ನು ಉಳಿಸಿದರು. ಈ ಸಂದರ್ಭದಲ್ಲಿ ತಮ್ಮ ಮೊಬೈಲ್ ಫೋನ್ಗಳು ಕೂಡ ನೀರು ತುಂಬಿ ಹಾಳಾಯಿತು. ಯಾವ ಅಧಿಕಾರಿಗಳನ್ನು ಸಂರ್ಪಕಿಸಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ನಮಗೆ ಆ ಸಮಯದಲ್ಲಿ ನಮ್ಮ ಪ್ರಯಾಣಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಬೇಕೆಂಬುದು ಮಾತ್ರ ಉದ್ದೇಶವಾಗಿತ್ತೆಂದು ತಿಳಿಸಿದರು.
ಈ ಮಾತನ್ನು ಕೇಳಿದ ವ್ಯವಸ್ಥಾಪಕ ನಿರ್ದೇಶಕರಾದ ವಿ.ಅನ್ಬುಕುಮಾರ್ ಅವರು ಚಾಲಕರನ್ನು ಮನತುಂಬಿ ಹಾರೈಸಿ, ತಮ್ಮ ಈ ಉತ್ಕೃಷ್ಟ ಕಾರ್ಯತತ್ಪರತೆ ಇತರರಿಗೆ ಮಾದರಿ ಹಾಗೂ ಸ್ಫೂರ್ತಿದಾಯಕವಾಗಿದೆ. ದೇವರು ತಮಗೆ ಮತ್ತು ತಮ್ಮ ಪರಿವಾರದವರಿಗೆ ಒಳ್ಳೆಯದು ಮಾಡಲಿ ಎಂದರು.
ಈ ಸಮಯದಲ್ಲಿ ಸಿಬ್ಬಂದಿಗಳ ಮೊಬೈಲ್ ಹಾಳಾಗಿದ್ದಕ್ಕೆ, ಇಬ್ಬರಿಗೂ ಒಂದೊಂದು ಸ್ಮಾರ್ಟ್ ಮೊಬೈಲ್ ಫೋನ್ ಅನ್ನು ( Smart Phone ) ನಿಗಮದ ವತಿಯಿಂದ ಉಡುಗೊರೆಯಾಗಿ ನೀಡಿ, ಇವರ ಮಾನವೀಯ ನೆಲೆಯಲ್ಲಿನ ಸೇವಾ ಮನೋಭಾವವು ನಿಜಕ್ಕೂ ಅನನ್ಯ, ಅನುಕರಣೀಯವೆಂದು ಬಣ್ಣಿಸಿ, ಚಾಲನಾ ಸಿಬ್ಬಂದಿಗಳ ಕಾರ್ಯವನ್ನು ಪ್ರಶಂಸಿಸಿ, ಅಭಿನಂದನಾ ಪತ್ರವನ್ನು ನೀಡಿ ಶ್ಲಾಘಿಸಿದರು.
ವರದಿ: ವಸಂತ ಬಿ ಈಶ್ವರಗೆರೆ