ಬೆಂಗಳೂರು: ಸಂಸದ ಶ್ರೀನಿವಾಸ್ ಪ್ರಸಾದ್ ವಿರುದ್ಧ ಬಿಜೆಪಿ ಎಂಎಲ್ಸಿ ಹೆಚ್ ವಿಶ್ವನಾಥ್ ಅವರೊಬ್ಬ ಅಲೆಮಾರಿಗಳ ರಾಜ ಎಂಬುದಾಗಿ ಹೇಳಿದ್ದರು. ಇದಕ್ಕೆ ತಿರುಗೇಟಿ ನೀಡಿದ್ದಂತ ಅವರು, ಹುಣಸೂರು ಬೈ ಎಲೆಕ್ಷನ್ ವೇಳೆಯಲ್ಲಿ ಬಿಜೆಪಿ ನೀಡಿದ್ದಂತ 15 ಕೋಟಿಯಲ್ಲಿ 10 ಕೋಟಿ ಅವರ ಜೇಬಿಗೆ ಇಳಿಬಿಟ್ಟಿದ್ದರು ಎಂಬುದಾಗಿ ಸಂಸದ ಶ್ರೀನಿವಾಸ್ ಪ್ರಸಾದ್ ಹೊಸ ಬಾಂಬ್ ಸಿಡಿಸಿದ್ದರು. ಈ ಹೇಳಿಕೆಯ ಕುರಿತಂತೆ ತನಿಖೆ ನಡೆಸುವಂತೆ ಸಂಸದ ಶ್ರೀನಿವಾಸ್ ಪ್ರಸಾದ್ ವಿರುದ್ಧ ಕಾಂಗ್ರೆಸ್ ಲೋಕಾಯುಕ್ತಕ್ಕೆ ದೂರು ನೀಡಿದೆ.
‘ನೇಕಾರ’ರಿಗೆ ಭರ್ಜರಿ ಗುಡ್ ನ್ಯೂಸ್: ‘2 ಲಕ್ಷ’ದವರೆಗೆ ‘ಶೂನ್ಯ ಬಡ್ಡಿದರ’ದಲ್ಲಿ ಸಾಲ – ಸಿಎಂ ಬೊಮ್ಮಾಯಿ ಘೋಷಣೆ
ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಂತ ಸಂಸದ ಶ್ರೀನಿವಾಸ್ ಪ್ರಸಾದ್, ಹೆಚ್ ವಿಶ್ವನಾಥ್ ಅವರದ್ದು ಕೀಟಲೆ ಮಾಡುವುದೇ ಗುಣವಾಗಿದೆ. ಜೆಡಿಎಸ್ ನಲ್ಲಿ ಇರೋದಕ್ಕೆ ಆಗುತ್ತಿಲ್ಲ ಎಂಬುದಾಗಿ ನನ್ನ ಬಳಿ ಹೇಳಿಕೊಂಡಿದ್ದರು. ಇದಕ್ಕೆ ಯಡಿಯೂರಪ್ಪ ಅವರ ಹತ್ತಿರ ಮಾತನಾಡು ಎಂದಿದ್ದೆ. ಆಗ ಅವರೇ ಮುಂಬೈಗೆ ಶಾಸಕರನ್ನು ಕೆರೆದುಕೊಂಡು ಹೋಗಿದ್ದರು ಎಂದು ಹೇಳಿದ್ದರು. ಅಲ್ಲದೇ ಹುಣಸೂರು ಬೈ ಎಲೆಕ್ಷನ್ ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದಾಗ 15 ಕೋಟಿ ನೀಡಲಾಗಿತ್ತು. ಅದರಲ್ಲಿ 10 ಕೋಟಿ ಅವರ ಜೇಬಿಗೆ ಇಳಿಬಿಟ್ಟಿದ್ದಾರೆ ಎಂದು ಆರೋಪಿಸಿದ್ದರು.
‘ಪೌರಾಡಳಿತ ಇಲಾಖೆ’ಯ ‘ಹೊರಗುತ್ತಿಗೆ ನೌಕರ’ರಿಗೆ ಗುಡ್ ನ್ಯೂಸ್: ಶೀಘ್ರವೇ ‘ನೇರ ವೇತನ ಪಾವತಿ ವ್ಯವಸ್ಥೆ’ ಜಾರಿ
ಹೀಗೆ ಸಂಸದ ಶ್ರೀನಿವಾಸ ಪ್ರಸಾದ್ ಪ್ರಸ್ತಾಪಿಸಿದಂತ ಕೋಟಿ ಕೋಟಿ ಹಣದ ವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ದೂರಿನಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ವಿರುದ್ಧ ದೂರು ದಾಖಲಿಸಿಕೊಂಡು ಹಣ ವಹಿವಾಟಿನ ಬಗ್ಗೆ ತನಿಖೆ ನಡೆಸುವಂತೆ ಕೋರಲಾಗಿದೆ.