ನವದೆಹಲಿ: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತ ಒಟ್ಟು 22 ಚಿನ್ನದ ಪದಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. 2022 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ( Commonwealth Games 2022 ) ಭಾರತವು 61 ಪದಕಗಳನ್ನು ಗೆದ್ದಿದೆ ಮತ್ತು ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.
11 ದಿನಗಳ ಕಾಲ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದಂತ ಕಾಮನ್ ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಕ್ರೀಡಾ ಪಟುಗಳು ಭರ್ಜರಿ ಪ್ರದರ್ಶನ ನೀಡುವ ಮೂಲಕ, ದೇಶಕ್ಕೆ ಪದಕಗಳ ಸರಮಾಲೆಯನ್ನೇ ತಂದಿದ್ದಾರೆ. ಈ ಬಾರಿಯ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಯಲ್ಲಿ ಭಾರತಕ್ಕೆ 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕಗಳು ಬಂದಿದೆ.
BIG NEWS: ಡಿಕೆ ಶಿವಕುಮಾರ್ ಹುಲಿಯಾದ್ರೇ, ಮಾಜಿ ಸಿಎಂ ಸಿದ್ಧರಾಮಯ್ಯ ತೊಡೆ ತಟ್ಟಿ ಬರೋ ಸಿಂಹ – ಹಾಸ್ಯನಟ ಸಾಧು ಕೋಕಿಲ
ಅಂದಹಾಗೇ ಇಂದು ಕಾಮನ್ ವೆಲ್ತ್ ಗೇಮ್ಸ್ ನ ( Common wealth Games 2022 ) ಭಾರತ-ಆಸ್ಟ್ರೇಲಿಯಾ ಪುರಷರ ಹಾಕಿ ಫೈನಲ್ ( Men’s Hockey ) ಪಂದ್ಯದಲ್ಲಿ ಭಾರತ ತಂಡವು 0-7 ಅಂತರದಲ್ಲಿ ಆಷ್ಟ್ರೇಲಿಯಾ ವಿರುದ್ಧ ಸೋಲು ಕಂಡು, ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳುವಂತೆ ಆಗಿದೆ. ಈ ಮೂಲಕ ಭಾರತಕ್ಕೆ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮತ್ತೊಂದು ಪದಕವನ್ನು ಹಾಕಿ ತಂಡ ತಂದು ಕೊಟ್ಟಿದೆ.
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಆಸ್ಟ್ರೇಲಿಯಾ 7-0 ಅಂತರದಿಂದ ಭಾರತವನ್ನು ಸೋಲಿಸಿ ಸತತ 7ನೇ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಈ ಹಾಕಿ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಸೋತಂತ ಭಾರತದ ಹಾಕಿ ತಂಡ ಬೆಳ್ಳಿ ಪದಕವನ್ನು ಗೆದ್ದಿದೆ.
#CommonwealthGames2022 | India wins Silver in Men's Hockey finals with Australia pic.twitter.com/6u16UAwxoY
— ANI (@ANI) August 8, 2022
ಕಾಮನ್ ವೆಲ್ತ್ ಗೇಮ್ಸ್2022ರ ( Common wealth Games 2022 ) ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳ ಬಂಗಾರದ ಬೇಟೆ ಮುಂದುವರೆದಿದೆ. ಇದೀಗ ಟೇಬಲ್ ಟೆನಿಸ್ ನಲ್ಲಿ ಪುರುಷರ ಸಿಂಗಲ್ಸ್ ಫೈನಲ್ಸ್ ನಲ್ಲಿ ಅಚಂತಾ ಶರತ್ ಕಮಲ್ ಅವರು ( Achanta Sharath Kamal ) ಚಿನ್ನವನ್ನು ಗೆದ್ದಿದ್ದಾರೆ.
ಕಾಮನ್ ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಸಾತ್ವಿಕ್ ಸಾಯಿ ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಬ್ಯಾಡ್ಮಿಂಟನ್ ನಲ್ಲಿ ಪುರುಷರ ಡಬಲ್ಸ್ ನಲ್ಲಿ ಫೈನಲ್ ನಲ್ಲಿ ಚಿನ್ನ ( Satwik Sai Raj Rankireddy and Chirag Shetty win Gold ) ಗೆದ್ದಿದ್ದಾರೆ. ಈ ಮೂಲಕ ಭಾರತಕ್ಕೆ 21ನೇ ಚಿನ್ನವನ್ನು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬಂದಂತೆ ಆಗಿದೆ.
ಕಾಮನ್ ವೆಲ್ತ್ ಗೇಮ್ಸ್2022ರ ( Common wealth Games 2022 ) ಇಂದಿನ ಪಂದ್ಯಾವಳಿಯಲ್ಲಿ ಟೇಬಲ್ ಟೆನಿಸ್ ನ ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಜ್ಞಾನಶೇಖರನ್ ಸತ್ಯನ್ ( Gnanasekaran Sathiyan wins bronze ) ಅವರು ಕಂಚಿನ ಪದಕ ಗೆದ್ದಿದ್ದಾರೆ.
ಕಾಮನ್ ವೆಲ್ತ್ ಗೇಮ್ಸ್2022ರಲ್ಲಿ ( Common wealth Games 2022 ) ಭಾರತದ ಪದಕದ ಬೇಟೆ ಮುಂದುವರೆದಿದೆ. ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ( Lakshya Sen ) 19-21, 21-9, 21-16ರಲ್ಲಿ ಮಲೇಷ್ಯಾದ ಎನ್ಜಿ ತ್ಸೆ ಯಾಂಗ್ ಅವರನ್ನು ಸೋಲಿಸಿ ಚಿನ್ನ ಗೆದ್ದಿದ್ದಾರೆ. ಈ ಗೆಲುವಿನೊಂದಿಗೆ ಭಾರತ ತನ್ನ 20ನೇ ಚಿನ್ನದ ಪದಕವನ್ನು ದಾಖಲಿಸಿದೆ.
ಈ ಮೊದಲು ಭಾರತದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಪಿ.ವಿ ಸಿಂಧು ಅವರು ಸ್ವರ್ಣ ಪದಕ ಗೆದ್ದಿದ್ದರು. ಈ ಮೂಲಕ ಐತಿಹಾಸಿಕ ದಾಖಲೆಯನ್ನು ಬರೆದಿದ್ದರು. ಈ ಬೆನ್ನಲ್ಲೇ ಇದೀಗ ಕಾಮನ್ ವೆಲ್ತ್ ಗೇಮ್ಸ್ ನ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಭಾರತದ ಲಕ್ಷ್ಯ ಸೇನ್ ( India’s Lakshya Sen won gold ) ಮಲೇಷ್ಯಾದ ಎದುರಾಳಿ ಕ್ರೀಡಾಪಟುವನ್ನು ಸೋಲಿಸಿ ಬಂಗಾರವನ್ನು ಗೆದ್ದಿದಾರೆ.
#BreakingNews | India wins another Gold medal at #Badminton
In a turbulent final, #LakshyaSen beats the Malaysia's Tze Yong Ng 2-1 ! #CommonwealthGames2022#Cheer4India#India4CWG2022 pic.twitter.com/m8nApWFaQH
— DD News (@DDNewslive) August 8, 2022
ಈ ಬೆನ್ನಲ್ಲೇ ಕಾಮನ್ ವೆಲ್ತ್ ಗೇಮ್ಸ್2022ರ ಇಂದಿನ ಪಂದ್ಯಾವಳಿಯಲ್ಲಿ ಟೇಬಲ್ ಟೆನಿಸ್ ನ ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಜ್ಞಾನಶೇಖರನ್ ಸತ್ಯನ್ ಅವರು ಕಂಚಿನ ಪದಕ ಗೆದ್ದಿದ್ದಾರೆ.
GOES THE DISTANCE! 🏓@sathiyantt clinches the BRONZE🥉 following a Dramatic victory over Drinkhall of England in the Table Tennis MS Bronze Medal match.
Our Indian champ won the match 4-3 (11-9 11-3 11-5 8-11 9-11 10-12 11-9) 🇮🇳
SPECTACULAR SATHIYAN!#Cheer4India pic.twitter.com/SqU5WuWv01
— SAI Media (@Media_SAI) August 8, 2022
ಕಾಮನ್ ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಸಾತ್ವಿಕ್ ಸಾಯಿ ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಬ್ಯಾಡ್ಮಿಂಟನ್ ನಲ್ಲಿ ಪುರುಷರ ಡಬಲ್ಸ್ ನಲ್ಲಿ ಫೈನಲ್ ನಲ್ಲಿ ಚಿನ್ನ ಗೆದ್ದಿದ್ದಾರೆ. ಈ ಮೂಲಕ ಭಾರತಕ್ಕೆ 21ನೇ ಚಿನ್ನವನ್ನು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬಂದಂತೆ ಆಗಿದೆ.
#CommonwealthGames2022 | India's Satwik Sai Raj Rankireddy and Chirag Shetty win Gold in finals in men's double in Badminton pic.twitter.com/AJEui5Egal
— ANI (@ANI) August 8, 2022
ಇದೀಗ ಟೇಬಲ್ ಟೆನಿಸ್ ನಲ್ಲಿ ಪುರುಷರ ಸಿಂಗಲ್ಸ್ ಫೈನಲ್ಸ್ ನಲ್ಲಿ ಅಚಂತಾ ಶರತ್ ಕಮಲ್ ಗೆ ಚಿನ್ನವನ್ನು ಗೆದ್ದಿದ್ದಾರೆ.
🥇KAMAL KA KAMAAL🔥@sharathkamal1 🏓wins against Liam (ENG) (4-1) (11-13, 11-7, 11-2, 11-6, 11-8) in the #TableTennis Men's Singles event at the #CommonwealthGames2022
With this win, Sharath Kamal has bagged an overall 7🥇 medals at the CWG in different categories🤩 pic.twitter.com/OC3vBo47iS
— SAI Media (@Media_SAI) August 8, 2022
ಒಟ್ಟಾರೆಯಾಗಿ ಕಾಮನ್ ವೆಲ್ತ್ ಗೇಮ್ಸ್ 2022ರ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.