ಬೆಂಗಳೂರು : ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆದಂತಹ ಬಿ.ದಯಾನಂದ ಅವರು ಪೊಲೀಸ್ ಸಿಬ್ಬಂದಿಗಳಿಗೆ ಇಂದು ಖಡಕ್ ವಾರ್ನಿಂಗ್ ನೀಡಿದ ಪ್ರಸಂಗ ನಡೆಯಿತು. ಪೊಲೀಸ್ ಸಿಬ್ಬಂದಿಗಳಿಗೆ ದಯಾನಂದ ಅವರು ಯಾವ ಕಾರಣಕ್ಕಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಕೊಳ್ಳಲು ಮುಂದೆ ಈ ಸುದ್ದಿ ಓದಿ
ಇಂದು ಪೊಲೀಸ್ ಸಿಬ್ಬಂದಿಗಳಿಗೆ ಕಮಿಷನರ್ ಬಿ.ದಯಾನಂದ್ ವರ್ಗಾವಣೆ ವಿಚಾರವಾಗಿ ಪೊಲೀಸ್ ಸಿಬ್ಬಂದಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಮಾಸಿಕ ಸೇವಾ ಕವಾಯಿತು ಕಾರ್ಯಕ್ರಮದಲ್ಲಿ ವಾರ್ನ್ ನೀಡಿದ್ದಾರೆ. ಆಡುಗೋಡಿ ಸಿ ಎ ಆರ್ ಮೈದಾನದಲ್ಲಿ ಈ ಒಂದು ಕಾರ್ಯಕ್ರಮ ನಡೆದಿತ್ತು.
ವರ್ಗಾವಣೆ ವಿಚಾರವಾಗಿ ಸಾಕಷ್ಟು ಸಿಬ್ಬಂದಿ ಕಚೇರಿಗೆ ಬರುತ್ತಿದ್ದಾರೆ. ಸರಿಯಾದ ಸಮಯದಲ್ಲಿ ನಾವೇ ವರ್ಗಾವಣೆ ಮಾಡುತ್ತೇವೆ.ಪ್ರತಿದಿನ ಸಿಬ್ಬಂದಿ ಬರುವುದರಿಂದ ಇದೇ ಕೆಲಸವಾಗಿ ಬಿಡುತ್ತದೆ. ಇದನ್ನು ಪೊಲೀಸ್ ಸಿಬ್ಬಂದಿಗಳು ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪೊಲೀಸ್ ಸಿಬ್ಬಂದಿಗಳಿಗೆ ಕಮಿಷನರ್ ಬಿ.ದಯಾನಂದ್ ಎಚ್ಚರಿಕೆ ನೀಡಿದ್ದಾರೆ.