Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದೇಶಾದ್ಯಂತ ವರುಣನ ಆರ್ಭಟಕ್ಕೆ ಮುನ್ಸೂಚನೆ: ಈ ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆ, ಹವಾಮಾನ ಇಲಾಖೆಯಿಂದ ಹೈ ಅಲರ್ಟ್ ಘೋಷಣೆ!

ಉತ್ತರ ಪ್ರದೇಶದಲ್ಲಿ ವರುಣನ ಅಟ್ಟಹಾಸ: ಭೀಕರ ಮಳೆ, ಬಿರುಗಾಳಿಗೆ 100ಕ್ಕೂ ಹೆಚ್ಚು ಬಲಿ; ಪ್ರಯಾಗ್‌ರಾಜ್‌ನಲ್ಲೇ 21 ಸಾವು!

ಇಎಲ್‌ಎಎಸ್‌ಐಎ 2026: ರಿನ್ಯೂವೆಬಲ್ ಏಷ್ಯಾ, ಇಂಧನ ಎಕ್ಸ್‌ಪೋ: ಕ್ರೆಡಲ್‌ನಿಂದ ನಾವೀನ್ಯತೆ ಪ್ರದರ್ಶನ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಂಬೇಡ್ಕರ್ ಬಗ್ಗೆ ಸಿಎಂ ಸಿದ್ಧರಾಮಯ್ಯ ಅವರದ್ದು ಅಂತರಂಗ, ಬಹಿರಂಗ ಶುದ್ಧಿ ಇಲ್ಲದ ಚುನಾವಣಾ ಬೂಟಾಟಿಕೆ ಮಾತ್ರ: ಆರ್ ಅಶೋಕ್
KARNATAKA

ಅಂಬೇಡ್ಕರ್ ಬಗ್ಗೆ ಸಿಎಂ ಸಿದ್ಧರಾಮಯ್ಯ ಅವರದ್ದು ಅಂತರಂಗ, ಬಹಿರಂಗ ಶುದ್ಧಿ ಇಲ್ಲದ ಚುನಾವಣಾ ಬೂಟಾಟಿಕೆ ಮಾತ್ರ: ಆರ್ ಅಶೋಕ್

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಅಂಬೇಡ್ಕರ್ ಅವರ ಬಗ್ಗೆ ತಮ್ಮದು ಅಂತರಂಗ ಶುದ್ಧಿಯೂ ಇಲ್ಲದ, ಬಹಿರಂಗ ಶುದ್ಧಿಯೂ ಇಲ್ಲದ ಚುನಾವಣಾ ಬೂಟಾಟಿಕೆ ಮಾತ್ರ ಅನ್ನೋದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂಬುದಾಗಿ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ಧಾಳಿ ನಡೆಸಿದ್ದಾರೆ.

ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಜಪವ ಮಾಡಿದರೇನು ತಪವ ಮಾಡಿದರೇನು ವಿಪರೀತ ಕಪಟಗುಣ ಕಲುಷವಿದ್ದವರು… ಎಂಬ ಕನಕದಾಸರ ವಾಣಿಯಂತೆ, ಬಾಯಿ ಚಪಲಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಮೇಲೆ ತೋರಿಕೆಯ ಪ್ರೀತಿ, ಗೌರವ ಪ್ರದರ್ಶನ ಮಾಡುವ ನಿಮ್ಮ ಮನಸ್ಥಿತಿಯನ್ನು ಬದಿಗಿರಿಸಿ ಸಿಎಂ ಸಿದ್ಧರಾಮಯ್ಯನವರೇ ಎಂದು ಹೇಳಿದ್ದಾರೆ.

ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದ, ಅಂಬೇಡ್ಕರ್‌ ಅಂತ್ಯ ಸಂಸ್ಕಾರಕ್ಕೆ ಭೂಮಿ ನೀಡಲು ನಿರಾಕರಿಸಿದ, ಅಂಬೇಡ್ಕರ್‌ ಅವರನ್ನು ಬಿಟ್ಟು, ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡ ನೀಚ ಮನಸ್ಥಿತಿ ನಿಮ್ಮ ಕಾಂಗ್ರೆಸ್ ಪಕ್ಷದ್ದು‌. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾಷಣವನ್ನ ತಿರುಚಿ ಮತ್ತೊಮ್ಮೆ ಬಾಬಾ ಸಾಹೇಬರನ್ನು ಅವಮಾನಿಸುತ್ತಿದ್ದೀರಿ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಮಾಡಿದ ಮಹಾ ಮೋಸವನ್ನು, ಮಹಾ ಅಪಮಾನಗಳನ್ನ ಎಳೆ ಎಳೆಯಾಗಿ ದೇಶದ ಜನತೆಯ ಮುಂದೆ ಬಿಚ್ಚಿಟ್ಟ ಅಮಿತ್ ಶಾ ಅವರ ಭಾಷಣದಿಂದ ತಮಗೆ ಮುಜುಗರ, ಹತಾಶೆ ಆಗಿರುವುದು ಆಶ್ಚರ್ಯವೇನಲ್ಲ ಎಂದಿದ್ದಾರೆ.

ತಮಗೆ ತಾವೇ ಭಾರತ ರತ್ನ ಪ್ರಶಸ್ತಿ ಕೊಟ್ಟುಕೊಂಡು ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು ಹಿಂದೆ ಮುಂದೆ ನೋಡುತ್ತಿದ್ದ ಕಾಂಗ್ರೆಸ್ ಪಕ್ಷವನ್ನು ದೇಹದ ಜನ ತಿರಸ್ಕಾರ ಮಾಡದಿದ್ದರೆ ಇವತ್ತು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಕೂಡಾ ಭಾರತ ರತ್ನ ಸಿಗುತ್ತಿತ್ತೇನೋ ಆದರೆ ಅಂಬೇಡ್ಕರ್ ಅವರಿಗೆ ಸಿಗುತ್ತಿರಲಿಲ್ಲ. ಅಂಬೇಡ್ಕರ್‌ ಅವರಿಗೆ ಭಾರತ ರತ್ನ ಎಂಬ ಪರಮೋಚ್ಛ ಗೌರವ ಲಭಿಸಬೇಕಾದರೆ ಬಿಜೆಪಿ ಬೆಂಬಲಿತ ಸರ್ಕಾರ ಬರಬೇಕಾಯಿತು ಎಂದು ವಾಗ್ಧಾಳಿ ನಡೆಸಿದ್ದಾರೆ.

ಬಾಬಾ ಸಾಹೇಬರ ಶವಸಂಸ್ಕಾರಕ್ಕೂ ಜಾಗ ನೀಡದ ಕಾಂಗ್ರೆಸ್ ಪಕ್ಷವನ್ನ ಜನ ತಿರಸ್ಕಾರ ಮಾಡದಿದ್ದರೆ, ಅಂಬೇಡ್ಕರ್‌ ಜನಿಸಿದ, ವಿದ್ಯಾಭ್ಯಾಸ ಮಾಡಿದ, ಗತಿಸಿದ ಸ್ಥಳ ಸೇರಿದಂತೆ ಅವರಿಗೆ ಸಂಬಂಧಪಟ್ಟ ಐದು ಪ್ರಮುಖ ಸ್ಥಳಗಳು ಇಂದು ಪಂಚತೀರ್ಥಗಳಾಗುತ್ತಿರಲಿಲ್ಲ ಎಂದು ಗುಡುಗಿದ್ದಾರೆ.

ಹತ್ತಾರು ಕೋಟಿ ಖರ್ಚು ಮಾಡಿ ‘ಸಿದ್ದರಾಮೋತ್ಸವ’ ಮಾಡಿಸಿಕೊಳ್ಳುವ ತಮಗೆ ‘ಅಂಬೇಡ್ಕರ್ ಉತ್ಸವ’ ಮಾಡಬೇಕು ಅನ್ನಿಸೋದೇ ಇಲ್ಲ. ಯಾಕೆಂದರೆ ತಮಗೆ ಅಂಬೇಡ್ಕರ್ ನೆನಪಾಗೋದು ಚುನಾವಣೆ ಸಂದರ್ಭದಲ್ಲಿ ಮಾತ್ರ. ಕುರ್ಚಿಗಾಗಿ, ಅಧಿಕಾರಕ್ಕಾಗಿ ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ದುಂಬಾಲು ಬೀಳುವ ತಮಗೆ, ಇಂದಿರಾ ಕ್ಯಾಂಟೀನ್ ಬದಲು ಅಂಬೇಡ್ಕರ್ ಕ್ಯಾಂಟೀನ್ ಎಂದು ಹೆಸರಿಡಬಹುದಾಗಿತ್ತು ಎಂದು ಅನ್ನಿಸಲೇ ಇಲ್ಲ. ಯಾಕೆಂದರೆ ತಮಗೆ ಅಂಬೇಡ್ಕರ್ ಅವರ ಬಗ್ಗೆ ಬದ್ಧತೆಯೇ ಇಲ್ಲ. ಆರೂವರೆ ವರ್ಷ ಮುಖ್ಯಮಂತ್ರಿ ಆಗಿರುವ ತಾವು ಯಾವುದಾದರೂ ಒಂದು ಯೋಜನೆಗೆ, ಒಂದು ಕಾರ್ಯಕ್ರಮಕ್ಕೆ ಅಂಬೇಡ್ಕರ್ ಅವರ ಹೆಸರಿಟ್ಟಿದ್ದೀರಾ? ಅಂತ ಪ್ರಶ್ನಿಸಿದ್ದಾರೆ.

ಅಮಿತ್ ಶಾ ಅವರ ಭಾಷಣವನ್ನು ತಿರುಚಿ, ಅರ್ಧ ಸತ್ಯ ಹೇಳುವ ವಿಡಿಯೋ ಹಾಕಿ ತಾವು ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಬಹುದಷ್ಟೇ. ಆದರೆ ಅಂಬೇಡ್ಕರ್ ಅವರ ಬಗ್ಗೆ, ಅವರು ರಚಿಸಿದ ಸಂವಿಧಾನದ ಬಗ್ಗೆ ತಮ್ಮ ಹಾಗು ತಮ್ಮ ದಲಿತ ವಿರೋಧಿ ಕಾಂಗ್ರೆಸ್ ಪಕ್ಷದ ಆಷಾಢಭೂತಿತನವನ್ನ ಮರೆಮಾಚಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಜಪವ ಮಾಡಿದರೇನು ತಪವ ಮಾಡಿದರೇನು ವಿಪರೀತ ಕಪಟಗುಣ ಕಲುಷವಿದ್ದವರು… ಎಂಬ ಕನಕದಾಸರ ವಾಣಿಯಂತೆ, ಬಾಯಿ ಚಪಲಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಮೇಲೆ ತೋರಿಕೆಯ ಪ್ರೀತಿ, ಗೌರವ ಪ್ರದರ್ಶನ ಮಾಡುವ ನಿಮ್ಮ ಮನಸ್ಥಿತಿಯನ್ನು ಬದಿಗಿರಿಸಿ ಸಿಎಂ @siddaramaiah ನವರೇ.

ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದ, ಅಂಬೇಡ್ಕರ್‌ ಅಂತ್ಯ… https://t.co/4eYuYmRq2W

— R. Ashoka (@RAshokaBJP) December 18, 2024

BREAKING : ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತ : ಚಲಿಸುತ್ತಿದ್ದ ಸಾರಿಗೆ ಬಸ್ ನಲ್ಲಿ ಕಾಣಿಸಿಕೊಂಡ ಬೆಂಕಿ : ತಪ್ಪಿದ ಭಾರಿ ಅನಾಹುತ! – Kannada News | India News | Breaking news | Live news | Kannada | Kannada News | Karnataka News | Karnataka News

ಪಿಂಚಣಿ ಅರ್ಜಿಗಳನ್ನು ಅಪ್ಲೋಡ್ ಮಾಡಲು ಉದ್ಯೋಗದಾತರಿಗೆ ಜ.31, 2025 ರವರೆಗೆ ವಿಸ್ತರಿಸಿದ EPFO – Kannada News | India News | Breaking news | Live news | Kannada | Kannada News | Karnataka News | Karnataka News

Share. Facebook Twitter LinkedIn WhatsApp Email

Related Posts

ಇಎಲ್‌ಎಎಸ್‌ಐಎ 2026: ರಿನ್ಯೂವೆಬಲ್ ಏಷ್ಯಾ, ಇಂಧನ ಎಕ್ಸ್‌ಪೋ: ಕ್ರೆಡಲ್‌ನಿಂದ ನಾವೀನ್ಯತೆ ಪ್ರದರ್ಶನ

2 Mins Read

BREAKING : ಗೃಹಿಣಿಯರಿಗೆ ಒಂದೇ ವಾರದಲ್ಲಿ ಡಬಲ್ ಶಾಕ್ : ಅಡುಗೆ ಎಣ್ಣೆ ಬೆನ್ನಲ್ಲೆ, ಗಗನಕ್ಕೇರಿದ ಅಕ್ಕಿ ದರ!

1 Min Read

BREAKING : ದಾವಣಗೆರೆಯಲ್ಲಿ ಘೋರ ದುರಂತ : ಭದ್ರಾ ನಾಲೆಯಲ್ಲಿ ಈಜಲು ಹೋದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವು!

1 Min Read
Recent News

ದೇಶಾದ್ಯಂತ ವರುಣನ ಆರ್ಭಟಕ್ಕೆ ಮುನ್ಸೂಚನೆ: ಈ ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆ, ಹವಾಮಾನ ಇಲಾಖೆಯಿಂದ ಹೈ ಅಲರ್ಟ್ ಘೋಷಣೆ!

ಉತ್ತರ ಪ್ರದೇಶದಲ್ಲಿ ವರುಣನ ಅಟ್ಟಹಾಸ: ಭೀಕರ ಮಳೆ, ಬಿರುಗಾಳಿಗೆ 100ಕ್ಕೂ ಹೆಚ್ಚು ಬಲಿ; ಪ್ರಯಾಗ್‌ರಾಜ್‌ನಲ್ಲೇ 21 ಸಾವು!

ಇಎಲ್‌ಎಎಸ್‌ಐಎ 2026: ರಿನ್ಯೂವೆಬಲ್ ಏಷ್ಯಾ, ಇಂಧನ ಎಕ್ಸ್‌ಪೋ: ಕ್ರೆಡಲ್‌ನಿಂದ ನಾವೀನ್ಯತೆ ಪ್ರದರ್ಶನ

ಅಮೆರಿಕ-ಚೀನಾ ಸಂಬಂಧದಲ್ಲಿ ಹೊಸ ಪರ್ವ: ಶೀ ಜಿನ್‌ಪಿಂಗ್‌ಗೆ ಶ್ವೇತಭವನಕ್ಕೆ ಆಹ್ವಾನ ನೀಡಿದ ಟ್ರಂಪ್!

State News
KARNATAKA

ಇಎಲ್‌ಎಎಸ್‌ಐಎ 2026: ರಿನ್ಯೂವೆಬಲ್ ಏಷ್ಯಾ, ಇಂಧನ ಎಕ್ಸ್‌ಪೋ: ಕ್ರೆಡಲ್‌ನಿಂದ ನಾವೀನ್ಯತೆ ಪ್ರದರ್ಶನ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಮೇ 14ರಿಂದ 17ರವರೆಗೆ ನಡೆಯಲಿರುವ ಇಎಲ್‌ಎಎಸ್‌ಐಎ 2026 ಭಾಗವಾದ ರಿನ್ಯೂವೆಬಲ್ ಏಷ್ಯಾ ಅಂಡ್‌…

BREAKING : ಗೃಹಿಣಿಯರಿಗೆ ಒಂದೇ ವಾರದಲ್ಲಿ ಡಬಲ್ ಶಾಕ್ : ಅಡುಗೆ ಎಣ್ಣೆ ಬೆನ್ನಲ್ಲೆ, ಗಗನಕ್ಕೇರಿದ ಅಕ್ಕಿ ದರ!

BREAKING : ದಾವಣಗೆರೆಯಲ್ಲಿ ಘೋರ ದುರಂತ : ಭದ್ರಾ ನಾಲೆಯಲ್ಲಿ ಈಜಲು ಹೋದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವು!

BREAKING: ಮೇ.24ರಂದು ನಿಗದಿಯಾಗಿದ್ದ MBA, MCA ಪ್ರವೇಶ ಪರೀಕ್ಷೆ ಮುಂದೂಡಿಕೆ: KEA ಮಾಹಿತಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.