ಬೆಂಗಳೂರು: ಮದುವೆ, ಮುಂಜಿ, ನಾಮಕರಣ, ಗೃಹಪ್ರವೇಶ, ಸಿನೆಮಾ ವೀಕ್ಷಣೆ, ಸಿನೆಮಾ ಬಿಡುಗಡೆ, ತಿಂಗಳಿಗೊಮ್ಮೆ ದೆಹಲಿ ಟೂರು, ಮುಂತಾದವುಗಳಿಗೆ ಸಮಯ ಮಾಡಿಕೊಳ್ಳುವ ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಅವರಿಗೆ ಜನೋಪಯೋಗಿ ಯೋಜನೆಯೊಂದನ್ನು ಉದ್ಘಾಟಿಸಲು ಸಮಯವಿಲ್ಲವೇ? ಎಂದು ಕರ್ನಾಟಕ ಕಾಂಗ್ರೆಸ್ ( Karnataka Congress ) ಪ್ರಶ್ನಿಸಿದೆ.
ಈ ಕುರಿತಂತೆ ಟ್ವಿಟ್ ಮಾಡಿದ್ದು, ಕನ್ನ ಹಾಕುವ ಬಿಜೆಪಿಗರಿಗೆ ಬಡವರ ಅನ್ನದ ಬೆಲೆ ತಿಳಿಯುವುದಾದರೂ ಹೇಗೆ? ಬೆಲೆ ಏರಿಕೆಯ ನಡುವೆ ಬಡವರಿಗೆ ಆಸರೆಯಾಗಿದ್ದ ಇಂದಿರಾ ಕ್ಯಾಂಟೀನ್ಗಳನ್ನು ಮುಗಿಸಿ ಬಡವರ ಬದುಕನ್ನೇ ಮುಗಿಸುವ ದುಷ್ಟತನಕ್ಕೆ ಇಳಿದಿದೆ ಬಿಜೆಪಿ. ಆಹಾರ ಪೂರೈಕೆಯ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲಾಗದಷ್ಟು ಸರ್ಕಾರದ ಹಣ ಲೂಟಿ ಮಾಡಿದಿರಾ ಬಸವರಾಜ ಬೊಮ್ಮಾಯಿಯವರೇ ಎಂದು ಕೇಳಿದೆ.
ಕನ್ನ ಹಾಕುವ ಬಿಜೆಪಿಗರಿಗೆ ಬಡವರ ಅನ್ನದ ಬೆಲೆ ತಿಳಿಯುವುದಾದರೂ ಹೇಗೆ?
ಬೆಲೆ ಏರಿಕೆಯ ನಡುವೆ ಬಡವರಿಗೆ ಆಸರೆಯಾಗಿದ್ದ ಇಂದಿರಾ ಕ್ಯಾಂಟೀನ್ಗಳನ್ನು ಮುಗಿಸಿ ಬಡವರ ಬದುಕನ್ನೇ ಮುಗಿಸುವ ದುಷ್ಟತನಕ್ಕೆ ಇಳಿದಿದೆ @BJP4Karnataka.
ಆಹಾರ ಪೂರೈಕೆಯ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲಾಗದಷ್ಟು ಸರ್ಕಾರದ ಹಣ ಲೂಟಿ ಮಾಡಿದಿರಾ @BSBommai ಅವರೇ? pic.twitter.com/PjeiVHrV6f
— Karnataka Congress (@INCKarnataka) December 16, 2022
40% ಕಮಿಷನ್ ಲೂಟಿಯಿಂದ ದಿವಾಳಿಯಾದ ಸರ್ಕಾರ ಈಗ ಭಿಕ್ಷೆ ಎತ್ತಲು ನಿಂತಿದೆಯೇ ಬಸವರಾಜ ಬೊಮ್ಮಾಯಿ ಅವರೇ? ಸರ್ಕಾರಿ ಶಾಲೆಗಳಲ್ಲಿ ₹100 ಡೋನೇಷನ್ ಪಡೆಯುವ ಆದೇಶ ಹೊರಡಿಸಿ ಯೂಟರ್ನ್ ಹೊಡೆದ ಬೆನ್ನಲ್ಲೇ ಈಗ ಬಿಸಿಯೂಟ ಯೋಜನೆಗೆ ದಾನಿಗಳ ಮುಂದೆ ಕೈ ಚಾಚುತ್ತಿದೆ ಸರ್ಕಾರ. ಮಕ್ಕಳಿಗೆ ಊಟ ನೀಡಲಾಗದಷ್ಟು ಬಿಜೆಪಿ ಸರ್ಕಾರ ಅಸಮರ್ಥ್ಯವಾಗಿದೆಯೇ? ಎಂದಿದೆ.
40% ಕಮಿಷನ್ ಲೂಟಿಯಿಂದ ದಿವಾಳಿಯಾದ ಸರ್ಕಾರ ಈಗ ಭಿಕ್ಷೆ ಎತ್ತಲು ನಿಂತಿದೆಯೇ @BSBommai ಅವರೇ?
ಸರ್ಕಾರಿ ಶಾಲೆಗಳಲ್ಲಿ ₹100 ಡೋನೇಷನ್ ಪಡೆಯುವ ಆದೇಶ ಹೊರಡಿಸಿ ಯೂಟರ್ನ್ ಹೊಡೆದ ಬೆನ್ನಲ್ಲೇ ಈಗ ಬಿಸಿಯೂಟ ಯೋಜನೆಗೆ ದಾನಿಗಳ ಮುಂದೆ ಕೈ ಚಾಚುತ್ತಿದೆ ಸರ್ಕಾರ.
ಮಕ್ಕಳಿಗೆ ಊಟ ನೀಡಲಾಗದಷ್ಟು @BJP4Karnataka ಸರ್ಕಾರ ಅಸಮರ್ಥ್ಯವಾಗಿದೆಯೇ? pic.twitter.com/slSTr2Hqtc
— Karnataka Congress (@INCKarnataka) December 16, 2022