ಬೆಂಗಳೂರು: ರಾಜ್ಯದಲ್ಲಿ ವನ್ಯ ಜೀವಿಗಳ ದಾಳಿ ಅಲ್ಲಲ್ಲಿ ಮರುಕಳಿಸುತ್ತಿದೆ. ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿನ ಆನೆ ದಾಳಿಯನ್ನು ತಡೆಗಾಗಿ ಟಾಸ್ಕ್ ಪೋರ್ಸ್ ಕೂಡ ರಚಿಸಲಾಗಿದೆ. ಈ ಬೆನ್ನಲ್ಲೆ ವನ್ಯಜೀವಿಗಳ ದಾಳಿಯ ನಿಯಂತ್ರಣ ಸಂಬಂಧ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ವರ್ಗಾವಣೆಗೆ ( Forest Department Officer Transfer ) ಸಿಎಂ ಬ್ರೇಕ್ ಹಾಕಿದ್ದಾರೆ.
‘ಅನುದಾನಿತ ಪದವಿ ಕಾಲೇಜು’ಗಳ ‘ಪ್ರಾಂಶುಪಾಲ’ರಿಗೆ ಗುಡ್ ನ್ಯೂಸ್: ಗಳಿಕೆ ರಜೆ ಮಂಜೂರು
ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಅವರು ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಟಿಪ್ಪಣಿ ಹೊರಡಿಸಿದ್ದಾರೆ.
BIG NEWS: ‘KSRTC ನೂತನ ಬಸ್’ಗಳಿಗೆ ಹೆಸರು, ಟ್ಯಾಗ್ ಲೈನ್, ಗ್ರಾಫಿಕ್ಸ್ ನೀಡಿ ‘25 ಸಾವಿರ’ದವರೆಗೆ ಬಹುಮಾನ ಗೆಲ್ಲಿ
ಸಿಎಂ ಹೊರಡಿಸಿರುವಂತ ಟಿಪ್ಪಣಿಯಲ್ಲಿ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಗೆ ( Forest, Ecology and Environment Department ) ಸಂಬಂಧಿಸಿದ ಯಾವುದೇ ವರ್ಗಾವಣೆ ಪ್ರಸ್ತಾವನೆಗಳನ್ನು ಮುಂದಿನ ಸೂಚನೆಯವರೆಗೆ ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ಮಂಡಿಸದಂತೆ ಸೂಚಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ