ಹಾಸನ : ಪೂಜೆಗಿಂತ ಕಾಯಕ ಶ್ರೇಷ್ಠ, ದುಡಿಮೆ ಇದ್ದವರು ದೊಡ್ಡವರಾಗುತ್ತಾರೆ ಆರ್ಥಿಕ ವಾಗಿ ಸ್ವಾವಲಂಬನೆ ಹೋದುತ್ತಾರೆ. ಹಾಗಾಗಿ ಸರ್ಕಾರ ದುಡಿಯುವ ವರ್ಗಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ರಾಜ್ಯದಲ್ಲಿ 33 ಸಾವಿರ ಸಂಘಗಳಿಗ 5 ಲಕ್ಣ ರೂ ಸಹಾಯಧನ ಹಾಗೂ ಬ್ಯಾಂಕ್ ಸಾಲ ಒದಗಿಸಿ ಐದು ಲಕ್ಷ ಉದ್ಯೋಗ ಸೃಷ್ಟಿ ಮಾಡಲು ಯೋಜಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಹೇಳಿದರು.
ಇಂದು ಹಾಸನದ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೇಬೀಡು ಬಳಿ ಇರುವ ಪುಷ್ಪಗಿರಿ ಮಠದಲ್ಲಿ ಲಕ್ಷ ದೀಪೋತ್ಸವ, ಶ್ರೀ ಗುರು ಕರಿಬಸವ ಅಜ್ಜಯ್ಯ ನವರ ಪಲ್ಲಕ್ಕಿ ಉತ್ಸವ ಹಾಗೂ ನೂತನ ರಂಗ ಮಂದಿರ ಉದ್ಘಾಟಿಸಿ ಅವರು ಮಾತನಾಡಿ, ಹೋಯ್ಸಳರ ನಾಡಾದ ಬೇಲೂರು ಹಳೇಬೀಡನ್ನು ದಕ್ಷಿಣದ ಪ್ರವಾಸೋದ್ಯಮ ಸರ್ಕಿಟ್ ಗೆ ಸೇರಿಸಲಾಗಿದ್ದು ಶ್ರೀಘ್ರ ವಿಶೇಷ ಅಭಿವೃದ್ಧಿ ಹೊಂದಲಿದೆ ಎಂದು ತಿಳಿಸಿದ್ದಾರೆ
ಕೃಷಿ ಸಾಲ ವಿತರಣೆಯಲ್ಲಿ ಡಿಸಿಸಿ ಬ್ಯಾಂಕುಗಳಿಂದ ಉತ್ತಮ ಸಾಧನೆ – ಸಚಿವ ಎಸ್.ಟಿ.ಸೋಮಶೇಖರ್ ಶ್ಲಾಘನೆ
ಬೇಲೂರು ಮತ್ತು ಹಳೇಬೀಡು ಶೀಘ್ರ ಯುನೆಸ್ಕೋ ಪಟ್ಟಿ ಸೇರ್ಪಡೆಯಾಗಲಿದೆ ನಂತರ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ದಿಕ್ಕು ಬದಲಾಗಲಿದೆ ಎಂದರು.
ಬಹಳ ವರ್ಷಗಳಿಂದ ನಿಂತಿರುವ ಹೊಯ್ಸಳ ಮಹೋತ್ಸವಕ್ಕೂ ಮುಂಭರುವ ತಿಂಗಳಲ್ಲಿ ಚಾಲನೆ ನೀಡಲಾಗುವುದು ಎಂದು ಘೋಷಣೆ ಮಾಡಿದರು.
ಕಾಡಾನೆ ಹಾವಳಿ ನಿಯಂತ್ರಣಕ್ಕೆ ವಿಶೇಷ ಕಾರ್ಯಪಡೆ ರಚಿಸಿದ್ದು 100ಕೋಟಿ ಅನುದಾನ ಒದಗಿಸಾಲಗುವುದು. ಹೆಚ್ಚುವರಿ ಸಿಬ್ಬಂದಿ ವಾಹನ ,ಸಾಧನ ಸಲಕರಣೆ ಹಾಗೂ ತಜ್ಞರ ನೆರವು ಒದಗಿಸಲಾಗುವುದು ಎಂದರು.
ಆರ್ಥಿಕ ತೆಯಲ್ಲಿ ಲಾಭ ನಷ್ಟ ಇದೆ ಆಧ್ಯಾತ್ಮಿಕ ತೆಯಲ್ಲಿ ಪಾಪ ಪುಣ್ಯ ಇದೆ ನಾನು ಆರ್ಥಿಕ ತೆಯಲ್ಲಿ ಪಾಪ ಪುಣ್ಯ ಹಾವೂ ಆಧ್ಯಾತ್ಮಿಕ ತೆಯಲ್ಲಿ ಲಾಭ ನಷ್ಟ ನೋಡುತ್ತಿದ್ದೇನೆ .ಹಣ ವನ್ನು ಎಚ್ಚರಿಕೆಯಿಂದ ವೆಚ್ಚ ಮಾಡುವುದಕ್ಕೆ ಕಲಿತಿದ್ದೇನೆ ಎಂದು ಹೇಳಿದರು.
BREAKING NEWS: ‘ಮೈಸೂರು ದಸರಾ’ ಆನೆ ‘ಗೋಪಾಲಸ್ವಾಮಿ’ ಇನ್ನಿಲ್ಲ | Mysuru Dasara elephant Gopalaswamy no more
ಪುಷ್ಪಗಿರಿ ಮಠದಲ್ಲಿ ಆಗಿರುವ ಅಭಿವೃದ್ಧಿ ಅಭಿನಂದನಾರ್ಹ. ಇದಕ್ಕೆ ಮಠದ ಸ್ವಾಮೀಜಿ ಯವರ ಕಾಳಜಿ ಪರಿಶ್ರಮ ಕಾರಣವಾಗಿದೆ. 1600 ಸ್ವಸಹಾಯ ಸಂಘ ಸ್ಥಾಪನೆ ಮಾಡಿರುವುದು ಶ್ರೀಗಳ ಗ್ರಾಮೀಣಾಭಿವೃದ್ಧಿ ಕಾಳಜಿ ತೋರುತ್ತದೆ ಎಂದರು.
ಭಕ್ತಿ ಇದ್ದಲ್ಲಿ ಶಕ್ತಿ ಇರುತ್ತದೆ.ಅಂತಹ ಪರಂಪರೆಯೊಂದಿಗೆ ಈ ಮಠ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಮಾಡುತ್ತಿದೆ ಎಂದು ಅವರು ಶ್ಲಾಘಿಸಿದರು.
ಉತ್ರ್ಕಷ್ಟ ಪ್ರೀತಿ ಭಕ್ತಿ ಯಾಗಿರುತ್ತದೆ. ಭಗವಂತನಲ್ಲಿ ಲೀನವಾದಾಗ ದೇವರ ಕೃಪೆಗೆ ಪಾತ್ರವಾಗಲು ಸಾಧ್ಯ. ದೇಶ ದೊಡ್ಡ ಸಾಂಸ್ಕೃತಿಕ, ಧಾರ್ಮಿಕ, ಭಕ್ತಿ ಪರಂಪರೆ ಹೊಂದಿದೆ. ಚರಿತ್ರೆ ಜೊತೆಗೆ ಚಾರಿತ್ರ್ಯ ಹಾಗೂ ಆಚಾರ್ಯರ ಜೊತೆಗೆ ಆಚರಣೆ ಶುದ್ದತೆಯೂ ಮುಖ್ಯ. ನಾವೆಲ್ಲರೂ ಉತ್ತಮ, ಗುಣಾತ್ಮಕ ಜೀವನ ನಡೆಸೋಣ ಎಂದು ಅವರು ಕರೆ ನೀಡಿದರು.
ಅಕ್ರಮ ಹಣ ವರ್ಗಾವಣೆ ಪ್ರಕರಣ: ಡಿ.ಕೆ ಶಿವಕುಮಾರ್ ಸೇರಿ ನಾಲ್ವರ ವಿರುದ್ಧದ ಇಡಿ ವಿಚಾರಣೆ ಜ.18ಕ್ಕೆ ಮುಂದೂಡಿಕೆ
ತಾವು ನೀರಾವರಿ ಸಚಿವರಾಗಿದ್ದಾಗ ರಣಘಟ್ಟ ನೀರಾವರಿ ಯೋಜನೆಗೆ ಚಾಲನೆ ನೀಡಲು ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಹಾಗೆಯೇ ಹಳೇಬೀಡು ಹೊಬಳಿ 20 ಕೆರೆ ತುಂಬುವ ಯೋಜನೆ ಗೂ ಚಾಲನೆ ನೀಡಲಾಯಿತು. ಜನರ ಭಾವನೆ ಅರ್ಥ ಮಾಡಿ ಕೆಲಸ ಮಾಡುವುದು ನಿಜವಾದ ಜನ ರಾಜಕಾರಣ ಎಂದು ಅವರು ತಿಳಿಸಿದರು. ಮುಖ್ಯಮಂತ್ರಿ ಆಗುವ ನಿರೀಕ್ಷೆ ಇರದಿದ್ದರೂ ಮುಖ್ಯಮಂತ್ರಿ ಆಗುವ ಅವಕಾಶ ದೊರೆಯಿತು.ದೇವರು ಕೊಟ್ಟ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಜನರ ಅನುಕೂಲ ಮಾಡಬೇಕು ಎಂದು ಅವರು ಹೇಳಿದರು.
ಬೇಲೂರು ತಾಲ್ಲೂಕಿನ ಹೆಬ್ಬಾಳ ಏತನೀರಾವರಿ ಯೋಜನೆಯನ್ನೂ ರಾಜ್ಯ ಸರ್ಕಾರದ ವತಿಯಿಂದ ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯ ಮಂತ್ರಿ ಭರವಸೆ ನೀಡಿದರು.
ಪುಷ್ಪಗಿರಿ ಮಠದ ಅಭಿವೃದ್ಧಿಗೂ ಅನುದಾನ ಒದಗಿಸಲಾಗುವುದು ಸಂಘದ ಪ್ರೋತ್ಸಾಹ ಕ್ಕೂ ನೆರವು ಒದಗಿಸಲಾಗುವುದು ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಠದ ಶ್ರೇಯಸ್ಸು ಹೆಚ್ಚಲಿ ಎಂದು ಹಾರೈಸಿದರು.
ರಾಜ್ಯದ 4 ಕೋಟಿ ಜನರಿಗೆ ಆರೋಗ್ಯ ಕಾರ್ಡ್ ವಿತರಣೆ – ಸಿಎಂ ಬಸವರಾಜ ಬೊಮ್ಮಾಯಿ
ಪುಷ್ಪಗಿರಿ ಮಠದ ಶ್ರೀ ಕರಿಬಸಪ್ಪ ಅಜ್ಜ ನವರ ಮೂಲ ಸ್ಥಾನ ಹರಿಹರ ಕಾಕತಾಳೀಯ ವಾಗಿ ತಾವಿಂದು ಹರಿಹರದಿಂದಲೇ ಬಂದಿರುವುದಾಗಿ ಮುಖ್ಯ ಮಂತ್ರಿ ಹೇಳಿದರು.
ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಗೋಪಾಲಯ್ಯ ಅವರು ಮಾತನಾಡಿ ಉಷ್ಪಗಿರಿ ಮಹಾಸಂಸ್ಥಾನಕ್ಕೆ ವಿಶೇಷ ಸ್ಥಾನ ಮಾನ ಇದೆ 5000 ಮಕ್ಕಳಿಗೆ ಶಿಕ್ಷಣ ನಿಡಲಾಗುತ್ತಿರುವುದು ಅಭಿನಂದನಾರ್ಹ. ಮುಖ್ಯಮಂತ್ರಿ ಬಸವರಾಜ ಬೋಮ್ಮಾಯಿಯವರು ಕೋವಿಡ್ 19 ಸಂದರ್ಭವನ್ನು ಹಾಗೂ ನೆರೆ ಹಾನಿಗಳನ್ನು ಸಮರ್ಥ ವಾಗಿ ನಿಭಾಯಿಸಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು.
ಆನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಗಂಭೀರವಾಗಿ ಚಿಂತನೆ ನಡೆಸಿ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಆನೆ ಕಾರ್ಯಪಡೆ ರಚಿಸಿದ್ದಾರೆ.ಶೀಘ್ರ ಬಗೆಹರಿಯುವ ವಿಶ್ವಾಸ ಇದೆ ಎಂದು ಸಚಿವರು ಹೇಳಿದರು
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮಿಜಿ ಪುಷ್ಪಗಿರಿ ಮಠಕ್ಕೆ ಸರ್ಕಾರ ಸಾಕಷ್ಟು ಕೊಡುಗೆ ನೀಡಿದೆ.ಬಿ.ಎಸ್ ಯಡಿಯೂರಪ್ಪ ಅವರ ಅವಧಿಯಿಂದ ಈ ವರಗೆ ಕಳೆದ 10 ವರ್ಷಗಳಲ್ಲಿ ಸರ್ಕಾರದ ಸಹಕಾರ ಅಪಾರ ಎಂದರು.
ಮಠದ ತೋಟ ಅಭಿವೃದ್ಧಿ ,ಸಾವಯವ ಕೃಷಿ ಗೆ ಪ್ರೋತ್ಸಾಹದ ಜೊತೆಗೆ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ರಾಜ್ಯದಲ್ಲಿ 1600 ಸಂಘಗಳು ಸ್ಥಾಪಿಸಾಲಗಿದೆ. ಪ್ರತಿಸಂಘಕ್ಕೆ 10 ಸಾವಿರದಿಂದ 1 ಲಕ್ಷ ರೂ ವರಗೆ ನೆರವು ನೀಡಲಾಗಿದೆ ಎಂದು ಸ್ವಾಮೀಜಿ ಮಹಿಳಾ ಸಂಘದವರೇ ಬಲ್ಬ್ ತಯಾರಿಸಲಾಗುತ್ತಿರುವುದು ಅಭಿನಂದನಾರ್ಹ ಎಂದು ಹರ್ಷ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಯಾಗಿದ್ದಾಗ ರಣಘಟ್ಟ ಯೋಜನೆಗೆ 130ಕೋಟಿ ರೂ ಅನುದಾನ ಬಿಡುಗಡೆ ಮಾಡಿಕೊಟ್ಟಿದ್ದಾರೆ ಅದನ್ನ ಸ್ಮರಿಸುವುದಾಗಿ ಹೇಳಿದರು.
ಪ್ರಸ್ತಾವಿಕ ಮಾತನಾಡಿದ ಶಾಸಕರಾದ ಲಿಂಗೇಶ್ ಆನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು .ವಿಶೇಷ ಕಾರ್ಯಪಡೆ ರಚಿಸಿರುವುದು ಅಭಿನಂದನಾರ್ಹ ಆದರೆ ಪರಿಣಾಮಕಾರಿ ಪ್ರಯತ್ನ ನಡೆಯಬೇಕು ಎಂದರು.
ಹಳೇಬೀಡು ಸುತ್ತಮುತ್ತಲಿನ ಕೆರೆ ತುಂಬುವ ಯೋಜನೆ ಪ್ರಸ್ತಾವನೆಗೆ ಮುಖ್ಯಮಂತ್ರಿ ಕಡತ ಮಂಡಿಸು ತಿಳಿಸಿದ್ದು 173 ಕೊಟಿ ರೂ ಯೋಜನೆಗೆ ಅನುಮೋದನೆ ನೀಡಿ ಸಣ್ಣ ನೀರಾವರಿ ಇಲಾಖೆ ಮೂಲಕ ಕಾಮಗಾರಿ ಮಾಡಿಸಬೇಕು ಎಂದು ಮುಖ್ಯಮಂತ್ರಿ ಯವರಿಗೆ ಮನವಿ ಮಾಡಿದರು
ನಗರಾಭಿವೃದ್ಧಿ ಸಚಿವರಾದ ಸಚಿವರಾದ ಭೈರತಿ ಬಸವರಾಜ್ ,ಶಾಸಕರಾದ ಪ್ರೀತಂ ಜೆ ಗೌಡ,ಲಿಂಗೇಶ್ ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್ ಪ್ರಮುಖರಾದ ಹುಲ್ಲಹಳ್ಳಿ ಸುರೇಶ,ಕೊರಟಗೆರೆ ಪ್ರಕಾಶ್,ಜಿಲ್ಲಾಧಿಕಾರಿ ಅರ್ಚನಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜ್ ಮತ್ತಿತರರು ಹಾಜರಿದ್ದರು
ರಣಘಟ್ಟ ಯೋಜನೆಗೆ ಸಹಕಾರ ನೀಡಿದ ಹಿಂದಿನ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ, ಬಿ.ಎಸ್ ಯಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಬಸವರಾಜ ಬೋಮ್ಮಾಯಿ ಅವತಿಗೆ ವಿಶೇಷ ಕೃತಜ್ಞತೆ ಅರ್ಪಿಸಿದರು.