ಚಿತ್ರದುರ್ಗ: ಜಿಲ್ಲಾ ವಕೀಲರ ಸಂಘದಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಬೈಕ್ Rally ನಡೆಸಲಾಯಿತು. ಈ ಮೂಲಕ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ಶನಿವಾರದಂದು ಬೆಳಿಗ್ಗೆ 10:30ಕ್ಕೆ ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಬೈಕ್ ರ್ಯಾಲಿಯನ್ನು ಏರ್ಪಾಡು ಮಾಡಲಾಗಿತ್ತು ಈ ಬೈಕ್ ರ್ಯಾಲಿಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪ್ರೇಮಾವತಿ ಮನಗೂಳಿ ಉದ್ಘಾಟನೆ ಮಾಡಿದರು.
ಬಿಜೆಪಿ, ಕಾಂಗ್ರೆಸ್ ಪಕ್ಷಗಳು ರಾಷ್ಟ್ರಧ್ವಜದ ಹೆಸರಿನಲ್ಲಿ ರಾಜಕೀಯ ಮಾಡುತ್ತಿವೆ – ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ
ನಂತರ ಮಾತನಾಡಿ ಸ್ವಾತಂತ್ರ್ಯದ ಸಂಭ್ರಮವನ್ನು ನಾವು ನೀವೆಲ್ಲರೂ ಸಂಭ್ರಮಿಸೋಣ ವಕೀಲರ ಸಂಘದಿಂದ ನಡೆಸುತ್ತಿರುವ ಬೈಕ್ ರ್ಯಾಲಿಯೂ ಜನಸಾಮಾನ್ಯರಿಗೆ ಉತ್ತಮ ಸಂದೇಶವನ್ನು ರವಾನಿಸಲಿ ಜನಸಾಮಾನ್ಯರಿಗೆ ಸ್ವತಂತ್ರದ ಹರಿವು ಮೂಡಿ ಜನಸಾಮಾನ್ಯರು ಸಹ ಸ್ವಾತಂತ್ರೋತ್ಸವದಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ತಿಳಿಸಿದರು.
ರ್ಯಾಲಿಯ ನೇತೃತ್ವವನ್ನು ವಹಿಸಿದ ವಕೀಲರ ಸಂಘದ ಅಧ್ಯಕ್ಷರಾದ ಸಿ ಶಿವು ಯಾದವ್ ಮಾತನಾಡಿ ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ಪಡೆದ ಸ್ವಾತಂತ್ರವನ್ನು ನಾವು ಸಂಭ್ರಮಿಸೋಣ ಕಳೆದ ಒಂದು ವರ್ಷದಿಂದಲೂ ಈ ಅಮೃತ ಮಹೋತ್ಸವವನ್ನು ಆಚರಿಸುತ್ತಾ ಬಂದಿದ್ದೇವೆ ಈ ಸ್ವತಂತ್ರವೂ ನಮಗೆ ಸ್ವೇಚ್ಛೆ ಆಗಬಾರದು. ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಬುದ್ಧ ಬಸವ ಅಂಬೇಡ್ಕರ್ ಅವರ ದಾರಿಯಲ್ಲಿ ನಾವು ಮುನ್ನಡೆಯಬೇಕಾಗಿದೆ ಎಂದರು.
ಶಾಂತಿ ಸೌಹಾರ್ದತೆಯಿಂದ ದೇಶವಾಸಿಗಳು ನಾವೆಲ್ಲ ಒಂದೇ ಎಂಬ ಘೋಷ ವಾಕ್ಯ ದಡಿ ನಾವು ನೀವೆಲ್ಲರೂ ದೇಶವನ್ನು ಮುನ್ನಡೆಸಬೇಕಾಗಿದೆ. ದೇಶವು ಸ್ವಾತಂತ್ರ್ಯ ಗಳಿಸುವಲ್ಲಿ ವಕೀಲರ ಪಾತ್ರ ಹಿರಿದಾಗಿದೆ. ಸ್ವಾತಂತ್ರ್ಯದ ನಂತರ ದಿನಗಳಲ್ಲಿ ದೇಶ ಆಳಿದವರಲ್ಲಿ ಬಹುತೇಕರು ವಕೀಲರಾಗಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಶಾಸನ ಸಭೆಗಳಲ್ಲಿ ವಕೀಲರು ವಿರಳರಾಗಿದ್ದಾರೆ. ಶಾಸನ ಸಭೆಗಳಲ್ಲಿ ಸರಿಯಾದ ಕಾನೂನುಗಳು ಹೊರ ಬರುತ್ತಿಲ್ಲ ಹೊಸ ಹೊಸ ಕಾನೂನುಗಳ ಬಗ್ಗೆ ಘಹನವಾದ ಚರ್ಚೆಯು ನಡೆಯುತ್ತಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ವಕೀಲರು ಹೆಚ್ಚು ಹೆಚ್ಚು ಮಂದಿ ಶಾಸನಸಭೆಗಳಲ್ಲಿ ಪ್ರವೇಶಿಸುವಂತೆ ಆಗಲಿ. ಈ ಬೈಕ್ ರ್ಯಾಲಿಯೂ ವಕೀಲರ ಸಂಘದ ದೇಶ ಪ್ರೇಮದ ಮತ್ತು ಭಾವೈಕ್ಯತೆಯ ಸಂಕೇತವಾಗಲಿ ಎಂದು ಹಾರೈಸಿದರು.
ಈ ಸಮಾರಂಭದಲ್ಲಿ ಚಿತ್ರದುರ್ಗ ಜಿಲ್ಲೆಯ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಎಸ್ ಎನ್ ಕಲ್ಕಣಿ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೆಂಪರಾಜು, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಜಿತೇಂದ್ರ ನಾಥ್ ಬಿಕೆ ಗಿರೀಶ್, ಕಿರಿಯ ಸಿವಿಲ್ ನ್ಯಾಯಾಧೀಶರಾದ ನೇಮಿಚಂದ್ ಶಿಲ್ಪ ಸಹನ ಸೇರಿದಂತೆ ಹಲವರು ಭಾಗವಹಿಸಿದ್ದರು. ವಕೀಲರ ಸಂಘದ ಉಪಾಧ್ಯಕ್ಷರಾದ ಜಿಸಿ ದಯಾನಂದ್, ಪ್ರಧಾನ ಕಾರ್ಯದರ್ಶಿ ಮೂರ್ತಿ ವಿಶ್ವನಾಥ್ ರೆಡ್ಡಿ ಅಜ್ಜಯ್ಯ ಮುತ್ತು ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ನೂರಾರು ಜನ ಹಿರಿಯ ಮತ್ತು ಭಾಗವಹಿಸಿದ್ದರು