ಚಿತ್ರದುರ್ಗ: ಜಿಲ್ಲೆಯ ರೈತರ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯ ಭರ್ತಿಗೆ ಕ್ಷಣ ಗಣನೆ ಆರಂಭಗೊಂಡಿದೆ. ಜಲನಯನ ಪ್ರದೇಶದಲ್ಲಿನ ಭದ್ರಾ ಡ್ಯಾಂ ಸೇರಿದಂತೆ ಇತರೆಡೆ ಮಳೆಯಾಗುತ್ತಿರುವ ಕಾರಣ, ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಿರೋ ಕಾರಣ, ಡ್ಯಾಂ ಭರ್ತಿಗೆ ಕೇವಲ 2.20 ಅಡಿ ಮಾತ್ರವೇ ಬಾಕಿ ಉಳಿದಿದೆ.
ಕಳೆದ ಕೆಲ ವಾರಗಳಿಂದ ಸುರಿದಂತ ಭಾರೀ ಮಳೆಯಿಂದಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮಾರಿಕಣಿವೆ ಡ್ಯಾಂ ಎಂದೇ ಕರೆಯಲ್ಪಡುವಂತ ವಾಣಿವಿಲಾಸ ಸಾಗರ ಅಣೆಕಟ್ಟಿಗೆ ನೀರು ಹರಿದು ಬರುತ್ತಿದೆ.
ರಾಜ್ಯ ಸರ್ಕಾರದಿಂದ ವಿವಿಧ ಮಠ, ಟ್ರಸ್ಟ್, ದೇಗುಲಗಳಿಗೆ ಭಂಪರ್ ಗಿಫ್ಟ್: 143 ಕೋಟಿ ಅನುದಾನ ಬಿಡುಗಡೆ
ವಾಣಿ ವಿಲಾಸ ಜಲಾಶಯಕ್ಕೆ 1117 ಕ್ಯೂಸೆಕ್ ಒಳಹರಿವು ನೀರು ಹರಿದು ಬರ್ತಾ ಇದೆ. ಹೀಗಾಗಿ ಪ್ರಸ್ತುತ ಜಲಾಶಯದ ನೀರಿನ ಮಟ್ಟ 127.80 ಅಡಿಯಲ್ಲಿ, ಡ್ಯಾಂ ಕೋಡಿ ಬೀಳಲು 2.20 ಅಡಿ ನೀರು ಬಾಕಿ ಇದೆ.
ಡ್ಯಾಂ ಕೋಡಿ ಬೀಳಲು ಕ್ಷಣಗಣನೆ ಆರಂಭಗೊಂಡಿರುವ ಪರಿಣಾಮ, ವಾಣಿವಿಲಾಸ ಜಲಾಶಯದ ಮುಂಭಾಗದಲ್ಲಿನ ವೇದಾವತಿ ನದಿ ತೀರದ ಜನತೆಗೆ ಎಚ್ಚರಿಕೆಯಿಂದ ಇರುವಂತೆ ತಾಲೂಕು ಆಡಳಿತ ಮುನ್ಸೂಚನೆ ನೀಡಿದೆ. ಯಾರೂ ನೀರಿಗೆ ಇಳಿಯದಂತೆ ತಿಳಿಸಿದೆ.