ಚೀನಾ : ಚೀನಾದಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿವೆ. ಇದರ ನಡುವೆ ಅಲ್ಲಿನ ಸರ್ಕಾರವು ಕೋವಿಡ್ ನೀತಿಗಳ ಬಗ್ಗೆ ನಿಯಮಗಳ ಬಗ್ಗೆ ಟೀಕೆ ಮಾಡಿದ 1,000 ಕ್ಕೂ ಹೆಚ್ಚು ವಿಮರ್ಶಕರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಅಮಾನತುಗೊಳಿಸಿದೆ ಎಂದು ವರದಿಯಾಗಿದೆ.
ಜನಪ್ರಿಯ ಸಿನಾ ವೈಬೊ( Sina Weibo) ಸಾಮಾಜಿಕ ಮಾಧ್ಯಮ ವೇದಿಕೆಯು ತಜ್ಞರು, ವಿದ್ವಾಂಸರು ಮತ್ತು ವೈದ್ಯಕೀಯ ಕಾರ್ಯಕರ್ತರ ಮೇಲಿನ ದಾಳಿಗಳು ಸೇರಿದಂತೆ 12,854 ಉಲ್ಲಂಘನೆಗಳನ್ನು ಗಮನಿಸಿದೆ. ಇದರ ಜೊತೆಗೆ 1,120 ಖಾತೆಗಳ ಮೇಲೆ ತಾತ್ಕಾಲಿಕ ಅಥವಾ ಶಾಶ್ವತ ನಿಷೇಧವನ್ನು ಹೊರಡಿಸಿದೆ ಎಂದು ತಿಳಿದು ಬಂದಿದೆ.
ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ತನ್ನ ಕಠಿಣ ಲಾಕ್ಡೌನ್ಗಳು, ಕ್ವಾರಂಟೈನ್ ಕ್ರಮಗಳು ಮತ್ತು ಸಾಮೂಹಿಕ ಪರೀಕ್ಷೆಗಳನ್ನು ಸಮರ್ಥಿಸಲು ವೈದ್ಯಕೀಯ ಸಮುದಾಯವನ್ನು ಹೆಚ್ಚಾಗಿ ಅವಲಂಬಿಸಿದೆ. ಆದರೆ ಕಳೆದ ತಿಂಗಳು ತನ್ನೆಲ್ಲ ಕೋವಿಡ್ ನಿರ್ಬಂಧಗಳನ್ನು ತೆಗೆದು ಹಾಕಿತ್ತು. ಪರಿಣಾಮ ಕೋವಿಡ್ ಪ್ರರಕಣಗಳು ಉಲ್ಬಣಗೊಂಡಿದ್ದು, ವೈದ್ಯಕೀಯ ಕ್ಷೇತ್ರ ಸಾಕಷ್ಟು ಹೊರೆ ಎದುರಿಸುತ್ತಿದೆ. ಪಕ್ಷವು ಯಾವುದೇ ನೇರ ಟೀಕೆಗೆ ಅವಕಾಶ ನೀಡುವುದಿಲ್ಲ ಮತ್ತು ವಾಕ್ ಸ್ವಾತಂತ್ರ್ಯದ ಮೇಲೆ ಕಟ್ಟುನಿಟ್ಟಾದ ಮಿತಿಗಳನ್ನು ಹೇರುತ್ತದೆ.
ಸರ್ಕಾರವು ಎಲ್ಲಾ ರೀತಿಯ ಕಾನೂನುಬಾಹಿರ ವಿಷಯಗಳ ತನಿಖೆ ಮತ್ತು ಶುದ್ಧೀಕರಣವನ್ನು ಹೆಚ್ಚಿಸುವುದನ್ನು ಮುಂದುವರಿಸುತ್ತದೆ. ಹೆಚ್ಚಿನ ಬಳಕೆದಾರರಿಗೆ ಸಾಮರಸ್ಯ ಮತ್ತು ಸ್ನೇಹಪರ ಸಮುದಾಯ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ಸಿನಾ ವೈಬೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘8 ಗಂಟೆ’ಗಳಿಗಿಂತ ಕಡಿಮೆ ‘ನಿದ್ರೆ’ ಮಾಡ್ತೀರಾ.? ಎಚ್ಚರ, ಅಧ್ಯಯನದಿಂದ ಶಾಕಿಂಗ್ ಸಂಗತಿ ಬಹಿರಂಗ
BIGG NEWS: ಮಕ್ಕಳೆದುರೇ ಪ್ರಿಯಕರೊಂದಿಗೆ ಗಂಡನನ್ನೇ ಕೊಂದ ಹೆಂಡತಿ; ಇಬ್ಬರು ಅರೆಸ್ಟ್
ಆಧುನಿಕ ತಂತ್ರೋಪಕರಣ ಬಳಸಿ ಇಂಗ್ಲಿಷ್ ಸಂವಹನ ತರಬೇತಿ – ಸಚಿವ ಅಶ್ವತ್ಥನಾರಾಯಣ