ಬೆಂಗಳೂರು: ಅಪಘಾತರಹಿತ ಸೇವೆ ಸಲ್ಲಿಸಿದಂತ 168 ಚಾಲಕರಿಗೆ ಮುಖ್ಯಮಂತ್ರಿ ಚಿನ್ನದ ಪದಕ ( Chief Minister’s Gold Medal ) ನೀಡಿ ಬಿಎಂಟಿಸಿಯಿಂದ ಗೌರವಿಸಲಾಗಿದೆ.
ಈ ಕುರಿತಂತೆ ಬಿಎಂಟಿಸಿಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಅಪಘಾತ ರಹಿತ ಚಾಕರನ್ನು ಪ್ರೋತ್ಸಾಹಿಸುವ ಹಾಗೂ ರಸ್ತೆ ಸುರಕ್ಷತಾ ದೃಷ್ಠಿಯಿಂದ ಅಪಘಾತ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಪ್ರಶಸ್ತಿ ಯೋಜನೆಯನ್ನು 1997ರಿಂದ 7 ವರ್ಷ ಅಪಘಾತರಹಿತ ಮತ್ತು ಅಪರಾಧ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಮುಖ್ಯಮಂತ್ರಿಯವರ ಹೆಸರಿನಲ್ಲಿ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಕೊಡುಗೆಯೇನು? – ದಿನೇಶ್ ಗುಂಡೂರಾವ್ ಪ್ರಶ್ನೆ
ಈ ಪ್ರಶಸ್ತಿ ವಿಜೇತರು ಚಿನ್ನದ ಪದಕ ಹಾಗೂ ರೂ.5000 ನಗದು ಪುರಸ್ಕಾರ, ಪ್ರಶಸ್ತಿ ಪತ್ರ ಹಾಗೂ ಮಾಸಿಕ ಪ್ರೋತ್ಸಾಹ ಭತ್ಯೆ ರೂ.100 ಪಡೆಯಲಿದ್ದಾರೆ. ಚಿನ್ನದ ಪಕದವು 40 ಗ್ರಾಂ ಬೆಳ್ಳಿ ಪದರದ ಮೇಲೆ 8 ಗ್ರಾಂ ಚಿನ್ನದ ಗಂಡು ಭೇರುಂಡ ಚಿನ್ಹೆ ಒಳಗೊಂಡಿರಲಿದೆ ಎಂದು ಹೇಳಿದೆ.
ಇಂದು ಕತ್ರಿಗುಪ್ಪಯಲ್ಲಿರುವಂತ ಸಮುದಾಯ ಭವನದಲ್ಲಿ 2016ರಿಂದ 2018ರವರೆಗೆ ಅಪಘಾತರಹಿತ ಮತ್ತು ಅಪರಾಘರಹಿತ ಸೇವೆ ಸಲ್ಲಿಸಿ ಆಯ್ಕೆಯಾಗಿರುವ ಒಟ್ಟು 168 ಚಾಲಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಈ ಕಾರ್ಯಕ್ರಮದ ವೇಳೆ ಬಿಎಂಟಿಸಿ ಅಧ್ಯಕ್ಷರಾದಂತ ಎನ್ ಎಸ್ ನಂದೀಶ ರೆಡ್ಡಿ, ವ್ಯವಸ್ಥಾಪಕ ನಿರ್ದೇಶಕರಾದಂತ ಸತ್ಯವತಿ ಜಿ, ನಿರ್ದೇಶಕರಾದಂತ ರಾಧಿಕಾ ಜಿ ಸೇರಿದಂತೆ ಇತತರು ಉಪಸ್ಥಿತರಾಗಿದ್ದರು.
ವರದಿ : ವಸಂತ ಬಿ ಈಶ್ವರಗೆರೆ