Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ದಂತ ವೈದ್ಯನ ಘೋರ ಎಡವಟ್ಟು: ಹುಳುಕು ಹಲ್ಲು ಬಿಟ್ಟು, ಚೆನ್ನಾಗಿದ್ದ ಹಲ್ಲನ್ನೇ ಕಿತ್ತ ಡಾಕ್ಟರ್ | WATCH VIDEO

BREAKING : ಮಂಡ್ಯ ಕಂದಾಯ ಇಲಾಖೆಯಲ್ಲಿ ಭಾರಿ ಅಕ್ರಮ : 1000 ಎಕರೆ ಭೂಮಿ ಅಕ್ರಮವಾಗಿ ಹಂಚಿಕೆ, ತನಿಖೆಯಲ್ಲಿ ಬಯಲು!

ಚಿನ್ನದ ಹೂಡಿಕೆಯಲ್ಲಿ ಬಂಪರ್ ಲಾಭ! SGB ಮೂಲಕ ಬರೋಬ್ಬರಿ 235% ರಿಟರ್ನ್ಸ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮಂಡ್ಯ ಕಂದಾಯ ಇಲಾಖೆಯಲ್ಲಿ ಭಾರಿ ಅಕ್ರಮ : 1000 ಎಕರೆ ಭೂಮಿ ಅಕ್ರಮವಾಗಿ ಹಂಚಿಕೆ, ತನಿಖೆಯಲ್ಲಿ ಬಯಲು!
KARNATAKA

BREAKING : ಮಂಡ್ಯ ಕಂದಾಯ ಇಲಾಖೆಯಲ್ಲಿ ಭಾರಿ ಅಕ್ರಮ : 1000 ಎಕರೆ ಭೂಮಿ ಅಕ್ರಮವಾಗಿ ಹಂಚಿಕೆ, ತನಿಖೆಯಲ್ಲಿ ಬಯಲು!

By ಸುರೇಶ್‌

ಮಂಡ್ಯ : ಮಂಡ್ಯ ಜಿಲ್ಲೆಯ ನಾಗಮಂಗಲದ ಬಗರ್‌ ಹುಕುಂ ಭೂಮಿ ಮಂಜೂರಾತಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಭಾರಿ ಹಗರಣ ಬೆಳಕಿಗೆ ಬಂದಿದೆ. ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಯಮಗಳನ್ನು ಗಾಳಿಗೆ ತೂರಿ, ಬರೋಬ್ಬರಿ 1,000 ಎಕರೆಗೂ ಅಧಿಕ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಗಂಭೀರ ಆರೋಪ ಕೇಳಿಬಂದಿದೆ. ಅರ್ಹ ಬಡ ರೈತರಿಗೆ ಸಿಗಬೇಕಾಗಿದ್ದ ಭೂಮಿಯನ್ನು ಲಂಚದ ಆಮಿಷಕ್ಕೆ ಒಳಗಾಗಿ ಅನರ್ಹರ ಪಾಲಾಗಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮೊದಲಿಗೆ ಕೇವಲ 238 ಎಕರೆ ಭೂಮಿಯ ಅಕ್ರಮ ಮಂಜೂರಾತಿಯಷ್ಟೇ ಮೇಲ್ನೋಟಕ್ಕೆ ಕಂಡುಬಂದಿತ್ತು. ಸುಮಾರು ಮೂರು ತಿಂಗಳ ಹಿಂದೆ ಲೋಕಾಯುಕ್ತ ಪೊಲೀಸರು ಈ ವ್ಯವಹಾರದ ಬೆನ್ನತ್ತಿದಾಗ ಆರಂಭಿಕ ಹಗರಣದ ಸುಳಿವು ಸಿಕ್ಕಿತ್ತು. ಲೋಕಾಯುಕ್ತರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಕಂದಾಯ ಇಲಾಖೆಯ ದಾಖಲೆಗಳಲ್ಲಿದ್ದ ತಾರತಮ್ಯ ಮತ್ತು ಅಕ್ರಮಗಳು ಸಾಬೀತಾಗಿದ್ದವು. ಕೇವಲ ಹಣದ ಆಸೆಗಾಗಿ ಅಧಿಕಾರಿಗಳು ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ವರ್ಗಾವಣೆ ಮಾಡಿರುವುದು ಸ್ಪಷ್ಟವಾಗಿತ್ತು.

ಈ ಹಗರಣದ ಆಳ ಮತ್ತು ವಿಸ್ತಾರ ದೊಡ್ಡದಾಗಿರುವುದನ್ನು ಮನಗಂಡ ಲೋಕಾಯುಕ್ತ ಸಂಸ್ಥೆಯು, ಪ್ರಕರಣದ ಕೂಲಂಕಷ ತನಿಖೆಗಾಗಿ ಮಂಡ್ಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲು ಸೂಚಿಸಿತ್ತು. ಲೋಕಾಯುಕ್ತರ ನಿರ್ದೇಶನದಂತೆ ತನಿಖೆ ಆರಂಭಿಸಿದ ಎಎಸ್ಪಿ ನೇತೃತ್ವದ ತಂಡವು ಕಂದಾಯ ಕಚೇರಿಗಳ ಫೈಲ್‌ಗಳನ್ನು ಜಾಲಾಡಿದಾಗ ಹಗರಣದ ಅಸಲಿ ಕರಾಳ ರೂಪ ಬಯಲಾಗಿದೆ. ಆರಂಭದಲ್ಲಿ 238 ಎಕರೆ ಅಂದುಕೊಂಡಿದ್ದ ಈ ವಂಚನೆ, ಸದ್ಯ 1,000 ಎಕರೆಗೂ ಅಧಿಕ ವಿಸ್ತೀರ್ಣಕ್ಕೆ ತಲುಪಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.

ತನಿಖಾ ತಂಡದ ಪರಿಶೀಲನೆಯಲ್ಲಿ ಆಘಾತಕಾರಿ ನಿಯಮ ಉಲ್ಲಂಘನೆಗಳು ಪತ್ತೆಯಾಗಿವೆ. ಬಗರ್ ಹುಕುಂ ಯೋಜನೆಯಡಿ ಜಮೀನು ಪಡೆಯಲು ಯಾವುದೇ ಅರ್ಹತೆ ಇಲ್ಲದ ಸ್ಥಳೀಯ ಶ್ರೀಮಂತರು ಹಾಗೂ ಪ್ರಭಾವಿಗಳಿಗೆ ಹಣದ ಬದಲಾಗಿ ಭೂಮಿ ಮಂಜೂರು ಮಾಡಲಾಗಿದೆ. ಇಷ್ಟೇ ಅಲ್ಲದೆ, ರಾಜ್ಯದ ನಿಯಮಾವಳಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿರುವ ಅಧಿಕಾರಿಗಳು, ಹೊರರಾಜ್ಯದ ನಿವಾಸಿಗಳಿಗೂ ಸಹ ಮಂಡ್ಯ ಜಿಲ್ಲೆಯ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವುದು ಬೆಳಕಿಗೆ ಬಂದಿದೆ.

ಮುಂದಿನ ಕ್ರಮ: ಸದ್ಯ ತನಿಖೆ ಚುರುಕುಗೊಂಡಿದ್ದು, ಅಕ್ರಮ ಖಾತೆಗಳಿಗೆ ಸಹಿ ಹಾಕಿರುವ ಮತ್ತು ಮಧ್ಯವರ್ತಿಗಳಾಗಿ ಕೆಲಸ ಮಾಡಿರುವ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರ ವಿರುದ್ಧ ಕಾನೂನು ಉರುಳು ಬಿಗಿಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಈ ಭಾರಿ ಭೂ ಹಗರಣದಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿಗಳು ಕಟಕಟೆ ಹತ್ತುವುದು ನಿಶ್ಚಿತವಾಗಿದೆ.

Share. Facebook Twitter LinkedIn WhatsApp Email

Related Posts

ಒಡೆದ ಮನೆಯಾದ ‘ಕರ್ನಾಟಕ ಯೂಥ್ ಕಾಂಗ್ರೆಸ್’: ‘ಅಧ್ಯಕ್ಷ-ಉಪಾಧ್ಯಕ್ಷೆ’ ನಡುವೆ ಬಣ ರಾಜಕೀಯ, ‘ಶೀತಲ ಸಮರ’ ತಾರಕಕ್ಕೆ!

2 Mins Read

BREAKING : ರಾಜ್ಯದ ಜನತೆಗೆ ಬಿಗ್ ಶಾಕ್ : ಈ ಎರಡು ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಮುಂದಾದ ಸರ್ಕಾರ

1 Min Read

BREAKING : ಭಟ್ಕಳ ಕಪ್ಪೆಚಿಪ್ಪು ಪ್ರಕರಣ : ಮತ್ತೊಂದು ಮೃತದೇಹ ಪತ್ತೆ, ಮೃತರ ಸಂಖ್ಯೆ 11ಕ್ಕೆ ಏರಿಕೆ!

2 Mins Read
Recent News

SHOCKING : ದಂತ ವೈದ್ಯನ ಘೋರ ಎಡವಟ್ಟು: ಹುಳುಕು ಹಲ್ಲು ಬಿಟ್ಟು, ಚೆನ್ನಾಗಿದ್ದ ಹಲ್ಲನ್ನೇ ಕಿತ್ತ ಡಾಕ್ಟರ್ | WATCH VIDEO

BREAKING : ಮಂಡ್ಯ ಕಂದಾಯ ಇಲಾಖೆಯಲ್ಲಿ ಭಾರಿ ಅಕ್ರಮ : 1000 ಎಕರೆ ಭೂಮಿ ಅಕ್ರಮವಾಗಿ ಹಂಚಿಕೆ, ತನಿಖೆಯಲ್ಲಿ ಬಯಲು!

ಚಿನ್ನದ ಹೂಡಿಕೆಯಲ್ಲಿ ಬಂಪರ್ ಲಾಭ! SGB ಮೂಲಕ ಬರೋಬ್ಬರಿ 235% ರಿಟರ್ನ್ಸ್!

ಒಡೆದ ಮನೆಯಾದ ‘ಕರ್ನಾಟಕ ಯೂಥ್ ಕಾಂಗ್ರೆಸ್’: ‘ಅಧ್ಯಕ್ಷ-ಉಪಾಧ್ಯಕ್ಷೆ’ ನಡುವೆ ಬಣ ರಾಜಕೀಯ, ‘ಶೀತಲ ಸಮರ’ ತಾರಕಕ್ಕೆ!

State News
KARNATAKA

BREAKING : ಮಂಡ್ಯ ಕಂದಾಯ ಇಲಾಖೆಯಲ್ಲಿ ಭಾರಿ ಅಕ್ರಮ : 1000 ಎಕರೆ ಭೂಮಿ ಅಕ್ರಮವಾಗಿ ಹಂಚಿಕೆ, ತನಿಖೆಯಲ್ಲಿ ಬಯಲು!

By ಸುರೇಶ್‌ KARNATAKA 2 Mins Read

ಮಂಡ್ಯ : ಮಂಡ್ಯ ಜಿಲ್ಲೆಯ ನಾಗಮಂಗಲದ ಬಗರ್‌ ಹುಕುಂ ಭೂಮಿ ಮಂಜೂರಾತಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಭಾರಿ ಹಗರಣ ಬೆಳಕಿಗೆ…

ಒಡೆದ ಮನೆಯಾದ ‘ಕರ್ನಾಟಕ ಯೂಥ್ ಕಾಂಗ್ರೆಸ್’: ‘ಅಧ್ಯಕ್ಷ-ಉಪಾಧ್ಯಕ್ಷೆ’ ನಡುವೆ ಬಣ ರಾಜಕೀಯ, ‘ಶೀತಲ ಸಮರ’ ತಾರಕಕ್ಕೆ!

BREAKING : ರಾಜ್ಯದ ಜನತೆಗೆ ಬಿಗ್ ಶಾಕ್ : ಈ ಎರಡು ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಮುಂದಾದ ಸರ್ಕಾರ

BREAKING : ಭಟ್ಕಳ ಕಪ್ಪೆಚಿಪ್ಪು ಪ್ರಕರಣ : ಮತ್ತೊಂದು ಮೃತದೇಹ ಪತ್ತೆ, ಮೃತರ ಸಂಖ್ಯೆ 11ಕ್ಕೆ ಏರಿಕೆ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.