ಬೆಂಗಳೂರು: ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ( Actor Puneet Rajkumar ) ನಮ್ಮಿಂದ ಮರೆಯಾಗಿದ್ದರೂ, ಅವರ ಸಾಮಾಜಿಕ ಕಾರ್ಯ, ಸಿನಿಮಾಗಳ ಮೂಲಕ ಅಭಿಮಾನಿಗಳ ಹೃದಯಾಂತರಾಳದಲ್ಲಿ ಸದಾ ಇದ್ದಾರೆ. ಇದೀಗ ಅಪ್ಪುವಿಗೆ ಅಪಮಾನ ಮಾಡುವಂತೆ ಚಕ್ರವರ್ತಿ ಸೂಲಿಬೆಲೆ ಮಾಡಿದಂತ ಟ್ವಿಟ್ಟರ್ ವಿರುದ್ಧ, ಅವರ ಅಪಾರ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಹೀಗಾಗಿ ಅಪ್ಪು ಅಭಿಮಾನಿಗಳ ಕ್ಷಮೆಯನ್ನು ಕೂಡ ಚಕ್ರವರ್ತಿ ಸೂಲಿಬೆಲೆ ಕೇಳಿದ್ದಾರೆ.
ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್: ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಸರ್ಕಾರದಿಂದ ‘ಅರಿಶಿನ-ಕುಂಕುಮ’ ವಿತರಣೆ
ಚಕ್ರವರ್ತಿ ಸೂಲಿಬೆಲೆಯವರು ಸಿಎಂ ಬೊಮ್ಮಾಯಿಯವರನ್ನು ತರಾಟೆಗೆ ತೆಗೆದುಕೊಂಡು ಮಾಡಿದ್ದಂತ ಟ್ವಿಟ್ಟರ್ ನಲ್ಲಿ, ಅವರಿಗೆ ಫೈಲ್ ಗೆ ಸಹಿ ಮಾಡೋದಕ್ಕೆ ಸಮಯವಿಲ್ಲ. ಆದ್ರೇ ಎಲ್ಲಾ ಸಿನಿಮಾಗಳ ಪ್ರೀಮಿಯರ್ ಶೋ ನೋಡೋದಕ್ಕೆ ಹೋಗ್ತಾರೆ. ಸಿನಿಮಾ ನಟ ಮೃತಪಟ್ಟಾಗ ಮೂರು ದಿನ ಅಲ್ಲೇ ಇರೋದಕ್ಕೆ ಸಮಯವಿದೆ. ಅಲ್ಲದೇ ಮಂಗಳೂರಿನಲ್ಲಿ ಕೊಲೆ ನಡೆದಿದ್ದರೂ ವಿಕ್ರಾಂತ್ ರೋಣ ಸಿನಿಮಾ ನೋಡಕ್ಕೆ ಹೋಗುತ್ತಾರೆ ಎಂಬುದಾಗಿ ಕಿಡಿಕಾರಿದ್ದರು.
ಹೀಗೆ ಮಾಡಿದಂತ ಟ್ವಿಟ್ಟರ್ ನಲ್ಲಿ ನಟ ಪುನೀತ್ ರಾಜ್ ಕುಮಾರ್ ಮೃತಪಟ್ಟಾಗ ಸಿಎಂ ಬೊಮ್ಮಾಯಿ ಮೂರು ದಿನ ಅಲ್ಲೇ ಇದ್ದಿದ್ದನ್ನು ಟೀಕಿಸಿದಂತ ಚಕ್ರವರ್ತಿ ಸೂಲಿಬೆಲೆಗೆ, ಅಭಿಮಾನಿಗಳು ಪುಲ್ ಕ್ಲಾಸ್ ತಗೊಂಡಿದ್ದಾರೆ. ನಿಮ್ಮ ರಾಜಕೀಯಕ್ಕೆ ನಮ್ಮ ಅಪ್ಪು ಹೆಸರು ಬಳಸಿಕೊಂಡಿದ್ದು ಸರಿಯಲ್ಲ ಎಂಬುದಾಗಿ ಕಿಡಿಕಾರಿದ್ದಾರೆ.
ನೀವು ‘ಆದಾಯ ತೆರಿಗೆ ರಿಟರ್ನ್’ ಸಲ್ಲಿಸಲು ಡೆಡ್ ಲೈನ್ ತಪ್ಪಿಸಿದ್ದೀರಾ.? ಹಾಗಾದ್ರೇ ಏನು ಮಾಡಬೇಕು.? ಇಲ್ಲಿದೆ ಮಾಹಿತಿ
ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಸಿಡಿದೇಳುತ್ತಿದ್ದಂತೇ, ಪರಿಸ್ಥಿತಿ ಗಂಭೀರತೆಯನ್ನು ಅರಿತಂದ ಚಕ್ರವರ್ತಿ ಸೂಲಿಬೆಲೆಯವರು, ಕೊನೆಗೆ ಈ ಬಗ್ಗೆ ವಿಷಾದ ವ್ಯಕ್ತ ಪಡಿಸಿ, ಕ್ಷಮೆಯಾಚಿಸಿದ್ದಾರೆ.