Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ : ಅಧಿಕಾರದ ಗದ್ದುಗೆ ಏರಲು ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಬೇಕು? ಇಲ್ಲಿದೆ ‘ಮ್ಯಾಜಿಕ್ ನಂಬರ್’ ವಿವರ!

04/05/2026 11:11 AM

BREAKING : ಕರ್ನಾಟಕ ಬೈ ಎಲೆಕ್ಷನ್ : ದಾವಣಗೆರೆ ದಕ್ಷಿಣ, ಬಾಗಲಕೋಟೆಯಲ್ಲಿ ಕಾಂಗ್ರೆಸ್ ಭರ್ಜರಿ ಮುನ್ನಡೆ

04/05/2026 10:55 AM

BREAKING : ತಮಿಳುನಾಡಲ್ಲಿ ನಾವು ಸ್ವತಂತ್ರ ಸರ್ಕಾರ ರಚನೆ ಮಾಡುತ್ತೇವೆ : ‘TVK’ ಪಕ್ಷ ಘೋಷಣೆ!

04/05/2026 10:47 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸೆ.1ರ ಮಧ್ಯರಾತ್ರಿಯೇ ನನ್ನ ಜನ್ಮದಿನ ಆಚರಣೆ: ಅಭಿಮಾನಿಗಳಿಗೆ ‘ನಟ ಕಿಚ್ಚ ಸುದೀಪ್‌’ ಪತ್ರ | Actor Kiccha Sudeep
FILM

ಸೆ.1ರ ಮಧ್ಯರಾತ್ರಿಯೇ ನನ್ನ ಜನ್ಮದಿನ ಆಚರಣೆ: ಅಭಿಮಾನಿಗಳಿಗೆ ‘ನಟ ಕಿಚ್ಚ ಸುದೀಪ್‌’ ಪತ್ರ | Actor Kiccha Sudeep

By kannadanewsnow0925/08/2025 6:50 PM

ಬೆಂಗಳೂರು: ನಟ ಕಿಚ್ಚ ಸುದೀಪ್ ಅವರ ಹುಟ್ಟಿದ ಹಬ್ಬ ಮುಂಬರುವ ಸೆಪ್ಟೆಂಬರ್.2 ಆಗಿದೆ. ಅವರು ಸೆಪ್ಟೆಂಬರ್.2ರ ಬದಲಾಗಿ ಸೆಪ್ಟೆಂಬರ್.1ರ ಮಧ್ಯರಾತ್ರಿಯೇ ಅಭಿಮಾನಿಗಳ ಜೊತೆಗೆ ಆಚರಿಸಿಕೊಳ್ಳುವುದಾಗಿ ಪತ್ರದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇಂದು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ನಟ ಕಿಚ್ಚ ಸುದೀಪ್, ಪ್ರಿಯ ಸ್ನೇಹಿತರೇ.. ಸೆಪ್ಟೆಂಬರ್ ಎರಡರ ಬೆಳಗಿನಲ್ಲಿ ಅಲ್ಲ ಸೆಪ್ಟೆಂಬರ್ ಒಂದರ ರಾತ್ರಿಯೇ ಸಿಗೋಣವಾ…! ಎಂದಿದ್ದಾರೆ.

ಸೆಪ್ಟೆಂಬರ್ ಎರಡರಂದು ನೀವು ನನ್ನನ್ನು ಭೇಟಿಮಾಡುವುದಕ್ಕಾಗಿ ಎಷ್ಟು ಕಾಯುವಿರೋ ಅದಕ್ಕಿಂತ ಹೆಚ್ಚಾಗಿ ನಾನು ನಿಮಗಾಗಿ ಕಾಯುತ್ತೇನೆ. ಆ ದಿನ ನೀವು ಪಡುವ ಸಂಭ್ರಮ, ಆಚರಿಸುವ ವಿಡಿಯೋಗಳನ್ನು ನೋಡಿದಾಗ ಪ್ರತಿಸಲವೂ ನನಗೆ ಮರುಹುಟ್ಟು ಪಡೆದಂತಾಗುತ್ತದೆ. ನಿಸ್ಸಂದೇಹವಾಗಿ ನನ್ನ ಬದುಕಿಗೆ ಮೌಲ್ಯ ತುಂಬಿದವರು ನೀವು. ನಿಮ್ಮೆದರು ನಿಂತು ವಿನೀತನಾಗುವುದಕ್ಕಿಂತ ಖುಷಿ ಏನಿದೆ? ಆದ್ದರಿಂದಲೇ ದಶಕಗಳಿಂದ ನಿಮ್ಮನ್ನು ಮನೆಯ ಹತ್ತಿರ ಭೇಟಿಮಾಡುತ್ತಲೇ ನಾನೂ ಸಂಭ್ರಮಸಿದ್ದೇನೆ. ಆದರೆ ಈ ಸಲ ತುಂಬಾ ಕಷ್ಟವಾಗುತ್ತಿದೆ ಏಕೆಂದರೆ ಅಮ್ಮನಿಲ್ಲದ ಮೊದಲ ವರ್ಷವಿದು, ಅಮ್ಮನಿಲ್ಲದ ಸಂಭ್ರಮವನ್ನು ಊಹಿಸಿಕೊಳ್ಳುವುದೂ ನನಗೆ ಕಷ್ಟವಾಗುತ್ತಿದೆ.

ಆದರೆ ನಿಮ್ಮನ್ನು ನಿರಾಸೆಗೊಳಿಸುವುದು ನನಗಿಷ್ಟವಿಲ್ಲ! ನಿಮ್ಮ ಮೂಲಕವೇ ನನ್ನ ಹುಟ್ನಬ್ಬ ಹುಟ್ಟಬೇಕು!. ಗಡಿಯಾರ ಹನ್ನೆರಡು ಗಂಟೆ ಎಂದು ಸದ್ದುಮಾಡುವಾಗ ನನಗೆ ನಿಮ್ಮ ಶುಭಾಶಯಗಳೇ ಕಿವಿಗೆ ಕೇಳಬೇಕು. ಅವುಗಳೇ ಎದೆಗೆ ಇಳಿಯಬೇಕು. ಆದ್ದರಿಂದ ಸೆಪ್ಟೆಂಬರ್ ಒಂದರ ರಾತ್ರಿ ನಾವೆಲ್ಲರೂ ಒಂದು ಕಡೆ ಸೇರೋಣ. ಎಲ್ಲಿ, ಹೇಗೆ? ಅನ್ನೋದನ್ನು ತಿಳಿಸುತ್ತೇನೆ, ಆದರೆ ಮಾರನೇ ದಿನ ಅಂದರೆ ಸೆಪ್ಟೆಂಬರ್ 2 ರಂದು ದಯವಿಟ್ಟು ಯಾರೂ ಮನೆ ಹತ್ತಿರ ಬರಬೇಡಿ. ನಾನು ಆ ದಿನ ಮನೆಯಲ್ಲಿ ಇರುವುದಿಲ್ಲ.

ನಾನಿರುವುದಿಲ್ಲವೆಂದು ಹೇಳಿದ ಮೇಲೂ ನೀವು ಮನೆ ಬಳಿ ಬಂದು ಕಾದರೆ ನನ್ನ ಮನಸಿಗೆ ನೋವಾಗುತ್ತದೆ. ಜೊತೆಗೆ ಈ ಸಲ ಅಮ್ಮನಿಲ್ಲದ ಮೊದಲ ವರ್ಷವಾಗಿರುವುದರಿಂದ ಮನೆ ಬಳಿ ಚೂರು ಶಾಂತಿ ವಾತಾವರಣ ಇರಲೆಂದು ಬಯಸುತ್ತಿದ್ದೇನೆ. ನನಗೆ ನಂಬಿಕೆ ಇದೆ; ನೀವು ನನ್ನನ್ನು ಅರ್ಥಮಾಡಿಕೊಳ್ಳುವಿರೆಂದು ಮತ್ತು ನಿರಾಸೆಗೊಳಿಸುವುದಿಲ್ಲವೆಂದು. ಅದು ಬಿಟ್ಟರೆ ಪ್ರತಿವರ್ಷದಂತೆ ಈ ವರ್ಷವೂ ಸಾಮಾಜಿಕ ಸೇವಾ ಕಾರ್ಯಗಳು ಯಥಾಪ್ರಕಾರ ನಡೆಯಲಿವೆ. ನಿಮ್ಮ ಹಾರೈಕೆ, ಅಭಿಮಾನ ಮತ್ತು ಸಾಂಗತ್ಯವೇ ನನ್ನ ಬಹುದೊಡ್ಡ ಆಸ್ತಿ ಎಂಬುದಗಿ ನಟ ಕಿಚ್ಚ ಸುದೀಪ್ ಮನವಿ ಮಾಡಿದ್ದಾರೆ.

To all my dearest Frnzzz,,,
Saw many videos posted about
the excitement shown to celebrate 2nd Sept.
Big big thanks for this unconditional luv.
Mch luv and Hugs
❤️🤗 pic.twitter.com/Q3fP0otsxQ

— Kichcha Sudeepa (@KicchaSudeep) August 25, 2025

ಬೆಳಗ್ಗೆ 7 ರಿಂದ 11 ಗಂಟೆಯೊಳಗೆ ಹೆಚ್ಚಾಗಿ ‘ಹೃದಯಾಘಾತ’ ಸಂಭವಿಸೋದೇಕೆ? ಇಲ್ಲಿದೆ ಮಾಹಿತಿ

ಸುಪ್ರಸಿದ್ಧ ಸಾಗರದ ‘ಮಾರಿಕಾಂಬಾ ಜಾತ್ರಾ ಮಹೋತ್ಸವ’ಕ್ಕೆ ಮುಹೂರ್ತ ಫಿಕ್ಸ್

Share. Facebook Twitter LinkedIn WhatsApp Email

Related Posts

BREAKING : ಕರ್ನಾಟಕ ಬೈ ಎಲೆಕ್ಷನ್ : ದಾವಣಗೆರೆ ದಕ್ಷಿಣ, ಬಾಗಲಕೋಟೆಯಲ್ಲಿ ಕಾಂಗ್ರೆಸ್ ಭರ್ಜರಿ ಮುನ್ನಡೆ

04/05/2026 10:55 AM1 Min Read

ALERT : ನಿಮ್ಮ ಮೊಬೈಲ್ ಗೂ 2000 ರೂ. ಕ್ರೆಡಿಟ್ ಮೆಸೇಜ್ ಬಂದಿದೆಯಾ? ಎಚ್ಚರ ಇದು ಸೈಬರ್ ವಂಚಕರ ಹೊಸ ಗಾಳ.!

04/05/2026 10:46 AM2 Mins Read

ALERT : ನೀವು ‘ಕ್ರೆಡಿಟ್ ಕಾರ್ಡ್’ ಬಳಸದಿದ್ದರೆ ಏನಾಗುತ್ತದೆ ? ನೀವು ತಿಳಿದುಕೊಳ್ಳಲೇಬೇಕು ಈ ವಿಷಯ.!

04/05/2026 10:26 AM2 Mins Read
Recent News

BIG NEWS : ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ : ಅಧಿಕಾರದ ಗದ್ದುಗೆ ಏರಲು ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಬೇಕು? ಇಲ್ಲಿದೆ ‘ಮ್ಯಾಜಿಕ್ ನಂಬರ್’ ವಿವರ!

04/05/2026 11:11 AM

BREAKING : ಕರ್ನಾಟಕ ಬೈ ಎಲೆಕ್ಷನ್ : ದಾವಣಗೆರೆ ದಕ್ಷಿಣ, ಬಾಗಲಕೋಟೆಯಲ್ಲಿ ಕಾಂಗ್ರೆಸ್ ಭರ್ಜರಿ ಮುನ್ನಡೆ

04/05/2026 10:55 AM

BREAKING : ತಮಿಳುನಾಡಲ್ಲಿ ನಾವು ಸ್ವತಂತ್ರ ಸರ್ಕಾರ ರಚನೆ ಮಾಡುತ್ತೇವೆ : ‘TVK’ ಪಕ್ಷ ಘೋಷಣೆ!

04/05/2026 10:47 AM

ALERT : ನಿಮ್ಮ ಮೊಬೈಲ್ ಗೂ 2000 ರೂ. ಕ್ರೆಡಿಟ್ ಮೆಸೇಜ್ ಬಂದಿದೆಯಾ? ಎಚ್ಚರ ಇದು ಸೈಬರ್ ವಂಚಕರ ಹೊಸ ಗಾಳ.!

04/05/2026 10:46 AM
State News
KARNATAKA

BREAKING : ಕರ್ನಾಟಕ ಬೈ ಎಲೆಕ್ಷನ್ : ದಾವಣಗೆರೆ ದಕ್ಷಿಣ, ಬಾಗಲಕೋಟೆಯಲ್ಲಿ ಕಾಂಗ್ರೆಸ್ ಭರ್ಜರಿ ಮುನ್ನಡೆ

By kannadanewsnow0504/05/2026 10:55 AM KARNATAKA 1 Min Read

ಬಾಗಲಕೋಟೆ / ದಾವಣಗೆರೆ : ಕರ್ನಾಟಕ ಉಪಚುನಾವಣೆ ಹಿನ್ನೆಲೆ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಈಗಾಗಲೇ ಮತ ಎಣಿಕೆ…

ALERT : ನಿಮ್ಮ ಮೊಬೈಲ್ ಗೂ 2000 ರೂ. ಕ್ರೆಡಿಟ್ ಮೆಸೇಜ್ ಬಂದಿದೆಯಾ? ಎಚ್ಚರ ಇದು ಸೈಬರ್ ವಂಚಕರ ಹೊಸ ಗಾಳ.!

04/05/2026 10:46 AM

ALERT : ನೀವು ‘ಕ್ರೆಡಿಟ್ ಕಾರ್ಡ್’ ಬಳಸದಿದ್ದರೆ ಏನಾಗುತ್ತದೆ ? ನೀವು ತಿಳಿದುಕೊಳ್ಳಲೇಬೇಕು ಈ ವಿಷಯ.!

04/05/2026 10:26 AM

ಜನಸಾಮಾನ್ಯರಿಗೆ ಬಿಗ್ ಶಾಕ್ : ಬೆಂಗಳೂರಿನಲ್ಲಿ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ, ಗ್ರಾಹಕರು ಕಂಗಾಲು.!

04/05/2026 10:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.