Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಹಾವೇರಿಯಲ್ಲಿ ದಿಢೀರ್ ಬೆಂಕಿಯಿಂದ ಹೊತ್ತಿ ಉರಿದ ‘KSRTC’ ಪಲ್ಲಕಿ ಬಸ್​ : 17 ಪ್ರಯಾಣಿಕರು ಪಾರು!

05/05/2026 9:58 AM

SHOCKING : ಮತ ಎಣಿಕೆ ಕೇಂದ್ರದಲ್ಲಿ `DMK’ ಏಜೆಂಟ್ ಹೃದಯಾಘಾತದಿಂದ ಸಾವು.!

05/05/2026 9:56 AM

SHOCKING : ಬೆಳಗಾವಿಯಲ್ಲಿ ಘೋರ ಕೃತ್ಯ : ವಿಡಿಯೋ ಕಾಲ್ ನಲ್ಲಿ ಮಗು ತೋರಿಸಿಲ್ಲವೆಂದು ಅತ್ತೆಗೆ ಚಾಕು ಇರಿದ ಅಳಿಯ!

05/05/2026 9:53 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಪ್ತಾಪ್ತ ಬಾಲಕನನ್ನು ಅಪಹರಿಸಿ ಹಲ್ಲೆ: ಭಜರಂಗದಳದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು
KARNATAKA

ಅಪ್ತಾಪ್ತ ಬಾಲಕನನ್ನು ಅಪಹರಿಸಿ ಹಲ್ಲೆ: ಭಜರಂಗದಳದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

By kannadanewsnow0919/03/2026 3:40 PM

ಬೆಳ್ತಂಗಡಿ: ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ತೆರಳಿದ್ದ 17 ವರ್ಷದ ಅಲ್ಪಸಂಖ್ಯಾತ ಬಾಲಕನನ್ನು ಅಪಹರಿಸಿ, ಮನುಷ್ಯತ್ವ ಮರೆತು ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ. ಈ ಘಟನೆ ಸಂಬಂಧ ಭಜರಂಗದಳದ ಮೂವರು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ: ಉಜಿರೆಯ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಬಾಲಕ, ಮಾರ್ಚ್ 11 ರಂದು ತನ್ನ ಸ್ನೇಹಿತರೊಂದಿಗೆ ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಜಾತ್ರೆಗೆ ತೆರಳಿದ್ದನು. ರಾತ್ರಿ 8:30 ರ ಸುಮಾರಿಗೆ ಆತನ ಸ್ನೇಹಿತರು ಜಾಯೆಂಟ್ ವೀಲ್ ಹತ್ತಿದ್ದಾಗ, ಬಾಲಕ ಅವರ ಮೊಬೈಲ್‌ಗಳನ್ನು ಹಿಡಿದುಕೊಂಡು ಕೆಳಗೆ ನಿಂತಿದ್ದನು.

ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಭಜರಂಗದಳದ ಕಾರ್ಯಕರ್ತರು ಎನ್ನಲಾದ ಗೌರವ್ ಶೆಟ್ಟಿ, ರಮೇಶ್ ಮತ್ತು ಇತರರು ಬಾಲಕನ ಹೆಸರು ಮತ್ತು ಧರ್ಮವನ್ನು ಕೇಳಿದ್ದಾರೆ. ಬಾಲಕ ತಾನು ಮುಸ್ಲಿಂ ಎಂದು ಹೇಳುತ್ತಿದ್ದಂತೆಯೇ, ಗುಂಪು ಆತನ ಮೇಲೆ ಹಲ್ಲೆ ನಡೆಸಲು ಆರಂಭಿಸಿದೆ. ಬಾಲಕನ ಸ್ನೇಹಿತರು ಬಿಡಿಸಲು ಬಂದಾಗ ಅವರ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಅಪಹರಣ ಮತ್ತು ಹಲ್ಲೆ: ಜಾತ್ರೆಯ ಜನಸಂದಣಿಯ ನಡುವೆಯೇ ಬಾಲಕನನ್ನು ಬೈಕ್‌ನಲ್ಲಿ ಅಪಹರಿಸಿದ ತಂಡ, ಸುಮಾರು 5 ಕಿಲೋಮೀಟರ್ ದೂರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದೆ. ಅಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಮಂದಿ ಸೇರಿ ಬಾಲಕನಿಗೆ ಮೃಗೀಯವಾಗಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ದೂರು ದಾಖಲು: ಈ ಘಟನೆಯಿಂದಾಗಿ ಬಾಲಕ ತೀವ್ರವಾಗಿ ಮಾನಸಿಕವಾಗಿ ಜರ್ಜರಿತನಾಗಿದ್ದು, ಆತ್ಮಹತ್ಯೆಯಂತಹ ಆಲೋಚನೆಗಳನ್ನು ಮಾಡುತ್ತಿದ್ದಾನೆ ಎಂದು ಬಾಲಕನ ತಂದೆ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ. ಘಟನೆ ನಡೆದು ಒಂದು ವಾರದ ನಂತರ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಗೌರವ್ ಶೆಟ್ಟಿ, ರಮೇಶ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಪ್ರಸ್ತುತ ಪೊಲೀಸರು ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಒಂದೇ ದಿನದಲ್ಲಿ ಹೂಡಿಕೆದಾರರ 7.6 ಲಕ್ಷ ಕೋಟಿ ಸಂಪತ್ತು ಭಸ್ಮ! | Stock market

ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಮಾಡುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ, ಬೆಂಗಳೂರು ಹೋಟೆಲ್ ಅಸೋಸಿಯೇಷನ್

Share. Facebook Twitter LinkedIn WhatsApp Email

Related Posts

BREAKING : ಹಾವೇರಿಯಲ್ಲಿ ದಿಢೀರ್ ಬೆಂಕಿಯಿಂದ ಹೊತ್ತಿ ಉರಿದ ‘KSRTC’ ಪಲ್ಲಕಿ ಬಸ್​ : 17 ಪ್ರಯಾಣಿಕರು ಪಾರು!

05/05/2026 9:58 AM1 Min Read

SHOCKING : ಬೆಳಗಾವಿಯಲ್ಲಿ ಘೋರ ಕೃತ್ಯ : ವಿಡಿಯೋ ಕಾಲ್ ನಲ್ಲಿ ಮಗು ತೋರಿಸಿಲ್ಲವೆಂದು ಅತ್ತೆಗೆ ಚಾಕು ಇರಿದ ಅಳಿಯ!

05/05/2026 9:53 AM2 Mins Read

BIG NEWS : ಪಿಂಚಣಿದಾರರಲ್ಲಿ ತಾರತಮ್ಯ ಮಾಡುವಂತಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು

05/05/2026 9:08 AM1 Min Read
Recent News

BREAKING : ಹಾವೇರಿಯಲ್ಲಿ ದಿಢೀರ್ ಬೆಂಕಿಯಿಂದ ಹೊತ್ತಿ ಉರಿದ ‘KSRTC’ ಪಲ್ಲಕಿ ಬಸ್​ : 17 ಪ್ರಯಾಣಿಕರು ಪಾರು!

05/05/2026 9:58 AM

SHOCKING : ಮತ ಎಣಿಕೆ ಕೇಂದ್ರದಲ್ಲಿ `DMK’ ಏಜೆಂಟ್ ಹೃದಯಾಘಾತದಿಂದ ಸಾವು.!

05/05/2026 9:56 AM

SHOCKING : ಬೆಳಗಾವಿಯಲ್ಲಿ ಘೋರ ಕೃತ್ಯ : ವಿಡಿಯೋ ಕಾಲ್ ನಲ್ಲಿ ಮಗು ತೋರಿಸಿಲ್ಲವೆಂದು ಅತ್ತೆಗೆ ಚಾಕು ಇರಿದ ಅಳಿಯ!

05/05/2026 9:53 AM

ಮಲಯಾಳಂ ಹಿರಿಯ ನಟ ಸಂತೋಷ್ ಕೆ. ನಾಯರ್ ಭೀಕರ ರಸ್ತೆ ಅಪಘಾತಕ್ಕೆ ಬಲಿ: ಚಿತ್ರರಂಗದಲ್ಲಿ ಶೋಕದ ಅಲೆ!

05/05/2026 9:52 AM
State News
KARNATAKA

BREAKING : ಹಾವೇರಿಯಲ್ಲಿ ದಿಢೀರ್ ಬೆಂಕಿಯಿಂದ ಹೊತ್ತಿ ಉರಿದ ‘KSRTC’ ಪಲ್ಲಕಿ ಬಸ್​ : 17 ಪ್ರಯಾಣಿಕರು ಪಾರು!

By kannadanewsnow0505/05/2026 9:58 AM KARNATAKA 1 Min Read

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ಕೆಎಸ್‌ಆರ್‌ಟಿಸಿ ಬಸ್ ಬೆಂಕಿಗಾಹುತಿಯಾದ ಘಟನೆ…

SHOCKING : ಬೆಳಗಾವಿಯಲ್ಲಿ ಘೋರ ಕೃತ್ಯ : ವಿಡಿಯೋ ಕಾಲ್ ನಲ್ಲಿ ಮಗು ತೋರಿಸಿಲ್ಲವೆಂದು ಅತ್ತೆಗೆ ಚಾಕು ಇರಿದ ಅಳಿಯ!

05/05/2026 9:53 AM

BIG NEWS : ಪಿಂಚಣಿದಾರರಲ್ಲಿ ತಾರತಮ್ಯ ಮಾಡುವಂತಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು

05/05/2026 9:08 AM

‘ಸಾಲ’ ಪಡೆದ ವ್ಯಕ್ತಿ ಮೃತಪಟ್ಟರೇ ಯಾರು ಪಾವತಿಸಬೇಕು? ಕಾನೂನು ನಿಯಮಗಳೇನು ತಿಳಿಯಿರಿ

05/05/2026 8:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.