ಕೋಲಾರ : ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನಗಳನ್ನು ಗಳಿಸದಿದ್ದರೂ ಕೂಡ ಇದೀಗ ಎನ್ ಡಿ ಎ ಸರ್ಕಾರ ರಚನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದು ಜೂನ್ 9ರಂದು ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇತ್ತ ಕೋಲಾರ ಜಿಲ್ಲೆಯ ಮಾಲೂರು ಶಾಸಕ ಕೆ ವೈ ನಂಜೇಗೌಡ ಕೇಂದ್ರ ಸರ್ಕಾರ ಯಾವಾಗ ಬೇಕಾದರೂ ಬದಲಾಗಬಹುದು ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಳಗಾಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆವರು, bಕೇಂದ್ರದ ಹೊಸ ಸರ್ಕಾರ ಯಾವತ್ತೂ ಬೇಕಾದರೂ ಬೀಳಬಹುದು ಎಂದು ಕೋಲಾರದಲ್ಲಿ ಮಾಲೂರು ಶಾಸಕ ಕೆ ವೈ ನಂಜೇಗೌಡ ಹೇಳಿದರು. ನಾಯ್ಡು ನಿತೀಶ್ ಯಾವಾಗ ಬೇಕಾದರೂ ಚೇಂಜ್ ಆಗುತ್ತಾರೆ. ಐದು ವರ್ಷದಲ್ಲಿ ಏನು ಬೇಕಾದರೂ ಆಗಬಹುದು ಆದರೆ ರಾಜ ಕಾಂಗ್ರೆಸ್ ಸರ್ಕಾರವನ್ನು ಅಳಗಾಡಿಸಲು ಆಗಲ್ಲ. ಈ ಚುನಾವಣೆಯಲ್ಲಿ ಮೋದಿಗೆ ದೇಶಾದ್ಯಂತ ಬೆಂಬಲ ವ್ಯಕ್ತವಾಗಿಲ್ಲ. ಎಂದು ಕೋಲಾರದಲ್ಲಿ ಮಾಲೂರು ಶಾಸಕ ಕೆನ್ನೆ ಕೂಡ ಹೇಳಿಕೆ ನೀಡಿದರು.