Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

GOOD NEWS : ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : 2026-27ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

SHOCKING : `IAF’ ಅಧಿಕಾರಿಯ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾಚಾರ; ‘ನನ್ನನ್ನು ಬಿಟ್ಟುಬಿಡಿ’ ಎಂದು ಮಹಿಳೆ ಗೋಳಾಡುವ ವಿಡಿಯೋ ವೈರಲ್ | WATCH VIDEO

ALERT : ವಾಹನ ಸವಾರರೇ ಎಚ್ಚರ : ಈ 4 ತಪ್ಪು ಮಾಡಿದರೆ ಟೋಲ್‌ ನಲ್ಲಿ “FASTag’ ಬ್ಲಾಕ್‌ ಲಿಸ್ಟ್ ಗ್ಯಾರಂಟಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಸಾವಿರ ಗುಂಗಲಿ’ ಒಲವಿನ ಸವಾರಿ ಹೊರಟ ‘ಬೃಂದಾ ಆಚಾರ್ಯ’!
FILM

‘ಸಾವಿರ ಗುಂಗಲಿ’ ಒಲವಿನ ಸವಾರಿ ಹೊರಟ ‘ಬೃಂದಾ ಆಚಾರ್ಯ’!

By ವಸಂತ ಬಿ ಈಶ್ವರಗೆರೆ

ಕೆಎನ್ಎನ್ ಸಿನಿಮಾ ಡೆಸ್ಕ್. ನಿಂತ ನಿಲುವಿನಲ್ಲೇ ಆವರಿಸಿಕೊಳ್ಳಬಲ್ಲ ಹಾಡೊಂದಕ್ಕಾಗಿ ಅನುಕ್ಷಣವೂ ಹಾತೊರೆಯುವ ದೊಡ್ಡದೊಂದು ಸಂಗೀತ ಪ್ರೇಮಿಗಳ ದಂಡು ನಮ್ಮ ನಡುವಲ್ಲಿದೆ. ಯಾವ ಸುಳಿವೂ ಕೊಡದೆ ಚೆಂದದ್ದೊಂದು ಹಾಡು ಅಚಾನಕ್ಕಾಗಿ ಕಿವಿ ಸೋಕಿದರೆ ಅವರಿಗೆಲ್ಲ ಅಕ್ಷರಶಃ ರೋಮಾಂಚನ. ಬೃಂದಾ ಆಚಾರ್ಯ ಮತ್ತು ಭರತ್ ಬೋಪಣ್ಣ ನಟಿಸಿರುವ ಆಲ್ಬಂ ಸಾಂಗ್ ಇದೀಗ ಅಂಥಾದ್ದೊಂದು ಅನುಭೂತಿಯನ್ನು ಬೇಷರತ್ತಾಗಿ ಕೊಡಮಾಡಿದೆ. ಸಾಹಿತ್ಯ, ಸಂಗೀತ, ಪರಿಕಲ್ಪನೆ, ನಟನೆ ಸೇರಿದಂತೆ ಎಲ್ಲದರಲ್ಲಿಯೂ ವಿಶೇಷವಾಗಿರುವ `ಸಾವಿರ ಗುಂಗಲ್ಲಿ’ ಆಲ್ಬಂ ಸಾಂಗ್ ಈಗ ಟ್ರೆಂಡಿಂಗಿನತ್ತ ದಾಪುಗಾಲಿಡುತ್ತಿದೆ.

ಇತ್ತೀಚಿನ ದಿನಮಾನದಲ್ಲಿ ಸಿನಿಮಾಗಳಾಚೆಗೆ ಹಾಡುಗಳು ರೂಪುಗೊಳ್ಳೋದೇ ಅಪರೂಪ. ಆಲ್ಬಂ ಸಾಂಗ್ ಅನ್ನೋ ರೋಮಾಂಚಕ ಪರಿಕಲ್ಪನೆ ಅದೇಕೋ ಬರಬರುತ್ತಾ ನೇಪಥ್ಯಕ್ಕೆ ಸರಿದುಬಿಟ್ಟಿದೆ. ಇಂಥಾ ಹೊತ್ತಲ್ಲಿ `ಸಾವಿರ ಗುಂಗಲ್ಲಿ’ ಎಂಬ ಆಲ್ಬಂ ಸಾಂಗ್ ತನ್ನ ನವಿರು ಶೈಲಿಯೊಂದಿಗೆ ಕೇಳುಗರನ್ನೆಲ್ಲ ಸೋಕುತ್ತಿದೆ. ಮತ್ತಷ್ಟು ಮನಸುಗಳನ್ನು ಆವರಿಸಿಕೊಳ್ಳುತ್ತಾ ಮುಂದುವರೆಯುತ್ತಿದೆ. ಅಂದಹಾಗೆ, ಕೃಷ್ಣ ನಂಜುಂಡಯ್ಯನವರ ಪರಿಕಲ್ಪನೆ, ನಿರ್ದೇಶನದಲ್ಲಿ ಮೂಡಿ ಬಂದಿದೆ. ಬೃಂದಾ ಆಚಾರ್ಯ, ಭರತ್ ಬೋಪಣ್ಣ, ಮಯೂರ್ ಸಾಗರ್, ಕೃತಿಕಾ ಗೌಡ, ಮಾನಿನಿ ಪಿ ರಾವ್ ಮುಂತಾದವರು ಸದರಿ ಆಲ್ಬಂ ಹಾಡಿನ ಭಾಗವಾಗಿದ್ದಾರೆ.

ಅದೆಲ್ಲದರಲ್ಲಿ ಒಂದಿಡೀ ಹಾಡಿನ ಪ್ರಧಾನ ಆಕರ್ಷಣೆಯಾಗಿ ಬೃಂದಾ ಆಚಾರ್ಯ ಕಾಣಿಸುತ್ತಾರೆ. ಹಾಡಿನ ನೆರಳಲ್ಲಿ ಕಥೆಯೊಂದು ಸರಿಯುವಂತೆ ಭಾಸವಾಗುವ ಈ ಆಲ್ಬಂ ಸಾಂಗ್, ಕೇಳುಗರನ್ನೆಲ್ಲ ಒಂದೇ ಸಲಕ್ಕೆ ಸೆಳೆಯುವಂತಿದೆ. ವಿಶೇಷವೆಂದರೆ, ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುತ್ತಿರುವ ಪ್ರಮೋದ್ ಮರವಂತೆ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಅದು ಪೃಥ್ವಿ ಭಟ್ ಧ್ವನಿಯಲ್ಲಿ ಮೂಡಿ ಬಂದಿದೆ. ಛಾಯಾಗ್ರಹಣ ಸೇರಿದಂತೆ ಎಲ್ಲದರಲ್ಲಿಯೂ ಈ ಹಾಡು ಅದ್ದೂರಿಯಾಗಿ, ಅರ್ಥವತ್ತಾಗಿ ಮೂಡಿ ಬಂದಿದೆ. ಹೆಚ್ಚಿನ ವೀಕ್ಷಣೆ ಪಡೆಯುತ್ತಾ ಮುಂದುವರೆಯುತ್ತಿರುವ ಸದರಿ ಆಲ್ಬಂ ಸಾಂಗಿನ ಸವಾರಿಯೀಗ ಟ್ರೆಂಡಿಂಗಿನತ್ತ ಮುಖ ಮಾಡಿದೆ. ಆ ಮೂಲಕ ಇದರ ಹಿಂದಿರುವ ಕನಸು, ಶ್ರಮ, ಶ್ರದ್ಧೆಗಳೆಲ್ಲವೂ ಸಾರ್ಥಕವಾದಂತಾಗಿದೆ.

ಬೃಂದಾ ಆಚಾರ್ಯ ಇದೀಗ ಹಲವಾರು ಬಿಗ್ ಬಜೆಟ್ ಸಿನಿಮಾಗಳಲ್ಲಿ ನಾಯಕಿಯಾಗಿ ಬ್ಯುಸಿಯಾಗಿದ್ದಾರೆ. ಅದರ ನಡುವೆಯೂ ಇಂಥಾದ್ದೊಂದು ನವಿರು ಹಾಡಿಗೆ ಜೀವ ತುಂಬುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸೀರಿಯಲ್ ಜಗತ್ತಿನಿಂದ ಬಂದು, ಇದೀಗ ನಾಯಕನಾಗಿ ನೆಲೆಗಾಣುತ್ತಿರುವ ಭರತ್ ಬೋಪಣ್ಣ ಕೂಡಾ ಅಷ್ಟೇ ಚೆಂದಗೆ ನಟಿಸಿದ್ದಾರೆ. ಜೋಯ್ ಕಾಸ್ಟಾ ಸಂಗೀತ ನಿರ್ದೇಶನ, ಎನ್.ಕೆ ರಾಜ್ ಛಾಯಾಗ್ರಹಣ, ತಮಿಳರಸನ್ ಎಂ. ಸಂಕಲನ, ಅನಿಲ್ ಸಹ ನಿರ್ದೇಶನದೊಂದಿಗೆ ಈ ವೀಡಿಯೋ ಸಾಂಗ್ ಕಳೆಗಟ್ಟಿಕೊಂಡಿದೆ. ದಿನದಿಂದ ದಿನಕ್ಕೆ ಈ ಹಾಡು ಹೆಚ್ಚೆಚ್ಚು ಜನರನ್ನು ತಲುಪಿಕೊಳ್ಳುತ್ತಿದೆ. ಪ್ರಚಾರದ ಭರಾಟೆ ಇಲ್ಲದೆಯೂ ಕೇಳುಗರನ್ನು ವಶವಾಗಿಸಿಕೊಳ್ಳುತ್ತಿದೆ. ಸಂಗೀತದ ಧ್ಯಾನದೊಂದಿಗೆ ಇಂಥಾದ್ದೊಂದು ಸಾಹಸ ಮಾಡಿರುವ ಒಂದಿಡೀ ತಂಡದ ಕಣ್ಣಲ್ಲೀಗ ಖುಷಿಯ ಹೊಳಪು ಮಿರುಗಲಾರಂಭಿಸಿದೆ!

Share. Facebook Twitter LinkedIn WhatsApp Email

Related Posts

Actor Doddanna: ಸಾವಿನ ವದಂತಿ: ಕುಟುಂಬ ಸಮೇತ ಆಂಜನೇಯ ದೇವಸ್ಥಾನಕ್ಕೆ ತೆರಳಿ ಸ್ಯಾಂಡಲ್ ವುಡ್ ಹಿರಿಯ ನಟ ದೊಡ್ಡಣ್ಣ ವಿಶೇಷ ಪೂಜೆ!

1 Min Read

ವಿಚ್ಛೇದನವೂ ಆಗಿಲ್ಲ, ಜಗಳವೂ ಇಲ್ಲ: ಆದರೂ 35 ವರ್ಷಗಳಿಂದ ಪತಿಯಿಂದ ಈ ಖ್ಯಾತ ನಟಿ ದೂರ, ಕಾರಣವೇನು ಗೊತ್ತ?

2 Mins Read

ಖಾಲಿವುಡ್ ನಟ ಅಜಿತ್ ಕುಮಾರ್ ತಾಯಿ ಮೋಹಿನಿ ಮಣಿ ವಿಧಿವಶ | Ajith Kumar Mother No More

1 Min Read
Recent News

GOOD NEWS : ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : 2026-27ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

SHOCKING : `IAF’ ಅಧಿಕಾರಿಯ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾಚಾರ; ‘ನನ್ನನ್ನು ಬಿಟ್ಟುಬಿಡಿ’ ಎಂದು ಮಹಿಳೆ ಗೋಳಾಡುವ ವಿಡಿಯೋ ವೈರಲ್ | WATCH VIDEO

ALERT : ವಾಹನ ಸವಾರರೇ ಎಚ್ಚರ : ಈ 4 ತಪ್ಪು ಮಾಡಿದರೆ ಟೋಲ್‌ ನಲ್ಲಿ “FASTag’ ಬ್ಲಾಕ್‌ ಲಿಸ್ಟ್ ಗ್ಯಾರಂಟಿ!

ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ ನಲ್ಲಿ 2.77 ಕೋಟಿ ಮೌಲ್ಯದ ಗಾಂಜಾ ವಶಕ್ಕೆ

State News
KARNATAKA

GOOD NEWS : ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : 2026-27ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

By kannadanewsnow57 KARNATAKA 1 Min Read

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ 2026-27ನೇ ಶೈಕ್ಷಣಿಕ ಸಾಲಿನ ವಿವಿಧ ವಿದ್ಯಾರ್ಥಿವೇತನ ಹಾಗೂ ಸೌಲಭ್ಯಗಳಿಗೆ ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್…

ALERT : ವಾಹನ ಸವಾರರೇ ಎಚ್ಚರ : ಈ 4 ತಪ್ಪು ಮಾಡಿದರೆ ಟೋಲ್‌ ನಲ್ಲಿ “FASTag’ ಬ್ಲಾಕ್‌ ಲಿಸ್ಟ್ ಗ್ಯಾರಂಟಿ!

ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ ನಲ್ಲಿ 2.77 ಕೋಟಿ ಮೌಲ್ಯದ ಗಾಂಜಾ ವಶಕ್ಕೆ

BREAKING : ಬೆಂಗಳೂರಲ್ಲಿ ಭೀಕರ ಸರಣಿ ಅಪಘಾತ : ಟ್ರ್ಯಾಕ್ಟರ್, ಬೋಲೇರೋ ವಾಹನಕ್ಕೆ ಡಿಕ್ಕಿ ಹೊಡೆದ ಲಾರಿ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.