ವಿಜಯಪುರ : ವಿಜಯಪುರದಲ್ಲಿ ಇಂದು ಅತ್ಯಂತ ಘೋರವಾದ ಘಟನೆ ನಡೆದಿದ್ದು, ನವ ವಿವಾಹಿತ ಜೋಡಿಗಳು ಮನೆಯಲ್ಲಿ ಯಾರು ಇಲ್ಲದ ವೇಳೆ ನೀನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಹೊರಭಾಗದ ಶ್ರೀ ಸಿದ್ದೇಶ್ವರ ಬಡಾವಣೆಯಲ್ಲಿ ನಡೆದಿದೆ.ಮನೋಜ್ ಕುಮಾರ್ ಪೋಳ (30) ರಾಖಿ (23) ಆತ್ಮಹತ್ಯೆಗೆ ಶರಣಾದ ನವವಿವಾಹಿತ ಜೋಡಿಗಳು ಎಂದು ಹೇಳಲಾಗುತ್ತಿದೆ.
ಹೌದು ವಿಜಯಪುರದಲ್ಲಿ ನವ ವಿವಾಹಿತ ಜೋಡಿ ಆತ್ಮಹತ್ಯೆಗೆ ಶರಣಾಗಿದ್ದು, ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.ವಿಜಯಪುರದ ಹೊರಬಾಗದ ಶ್ರೀ ಸಿದ್ದೇಶ್ವರ ಬಡಾವಣೆಯಲ್ಲಿ ಈ ಒಂದು ಘಟನೆ ನಡೆದಿದೆ.ಮನೆಯಲ್ಲಿಯೇ ನೇಣಿಗೆ ಶರಣಾಗಿರುವ ನವ ಜೋಡಿಗಳು ಎಂದು ಹೇಳಲಾಗುತ್ತಿದೆ.
ಕಳೆದ ನಾಲ್ಕು ತಿಂಗಳ ಹಿಂದೆ ಇವರಿಬ್ಬರೂ ಪರಸ್ಪರ ಪ್ರೀತಿಸಿ ಮನೆಯಲ್ಲಿ ಒಪ್ಪಿಸಿ ಮದುವೆಯಾಗಿದ್ದರು ಎಂದು ತಿಳಿದುಬಂದಿದೆ ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದರು ಆದರೆ ಬೆಳಗ್ಗೆ ಬಂದು ನೋಡಿದ ತಕ್ಷಣ ಇಬ್ಬರೂ ನೀನಿಗೆ ಶರಣಾಗಿದ್ದಾರೆ ಎಂದು ಅಮೃತ ರಾಕಿ ತಾಯಿ ಭಾರತಿ ಅವರು ತಿಳಿಸಿದ್ದಾರೆ. ಆದರೆ ಆತ್ಮಹತ್ಯೆಗೆ ಏನು ಕಾರಣ ಎಂಬುದು ತಿಳಿದು ಬಂದಿಲ್ಲ ಘಟನೆ ಕುರಿತಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.