ಲ್ಲಿ ಯುವಕ ಯುವತಿ ಸಾವು ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆಯ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಮೃತ ಕಾವೇರಿಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ಪತಿ ಮತ್ತು ಮಕ್ಕಳನ್ನು ಬಿಟ್ಟು ಕಾವೇರಿ ಕೆಲಸಕ್ಕೆ ಅಂತ ಬೆಂಗಳೂರಿಗೆ ಬಂದಿದ್ದಾಳೆ. ಗದಗ ಮೂಲದ ರಮೇಶ್ ಜೊತೆಗಿದ್ದಾಗಲೇ ಕಾವೇರಿ ಸಾವನಪ್ಪಿದ್ದಾಳೆ.
ಗದಗ ಮೂಲದ ರಮೇಶ್ ಜೊತೆಗೆ ಹುನಗುಂದ ಮೂಲದ ಕಾವೇರಿ ಸಾವನ್ನಪ್ಪಿದ್ದು, ರಮೇಶ್ ಜೊತೆಗೆ ಕಾವೇರಿ ಅನೈತಿಕ ಸಂಬಂಧ ಹೊಂದಿದ್ದಳು. ಮದುವೆ ವಿಚಾರವಾಗಿ ಕಾವೇರಿಗೆ ರಮೇಶ್ ಒತ್ತಡ ಹೇರಿರುವ ಅನುಮಾನ ವ್ಯಕ್ತವಾಗುತ್ತಿದೆ. ಆದರೆ ಕಾವೇರಿ ಒಪ್ಪದೇ ಇದ್ದ ಸಂದರ್ಭದಲ್ಲಿ ಪೆಟ್ರೋಲ್ ಸುರಿದು ಬೆದರಿಕೆ ಹಾಕಲಾಗಿತ್ತು ಎಂದು ತಿಳಿದು ಬಂದಿದೆ. ಬೆದರಿಕೆ ಹಾಕಲು ಹೋಗಿ ಇಬ್ಬರು ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದ್ದು ಪೊಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.