ತುಮಕೂರು : ಬೇಲಿಯೇ ಎದ್ದು ಹೊಲ ಮೆಯ್ದಂತೆ ಎಂಬ ಗಾದೆಯಂತೆ, ಕ್ರಿಮಿನಲ್ ಗಳ ಹೆಡೆಮುರಿ ಕಟ್ಟಿ ಒದ್ದು ಒಳಗೆ ಹಾಕಬೇಕಿರುವ ಪೊಲೀಸರೇ ಇದೀಗ ಪೊಲೀಸ್ ಇಲಾಖೆಯ ಮಾಹಿತಿಯನ್ನು ಕ್ರಿಮಿನಲ್ ಗಳಿಗೆ ರವಾನಿಸಿದ ಆರೋಪದ ಮೇರೆಗೆ ಐವರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.
ಹೌದು ಕ್ಯಾತಸಂದ್ರ ಠಾಣೆಯ ಮಂಜು, ಅಹೋಬಲ ನರಸಿಂಹಮೂರ್ತಿ, ಜಯನಗರ ಠಾಣೆ ಮನು ಎಸ್.ಗೌಡ, ಸಂಚಾರ ಪೊಲೀಸ್ ಠಾಣೆ ರಾಮಕೃಷ್ಣ ಹಾಗೂ ಎಸ್ಪಿ ಕಚೇರಿಯ ಸುರೇಶ್ ಅಮಾನತುಗೊಂಡ ಪೊಲೀಸ್ ಸಿಬ್ಬಂದಿಯಾಗಿದ್ದಾರೆ.
ಈ ಕುರಿತಂತೆ ಪೊಲೀಸ್ ಇಲಾಖೆಯ ಮಾಹಿತಿ ರವಾನಿಸುತ್ತಿದ್ದ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ತುಮಕೂರು ಎಸ್ಪಿ ಕೆ.ವಿ ಅಶೋಕ್ ಆದೇಶ ಹೊರಡಿಸಿದ್ದಾರೆ.ಮಂಜುನಾಥ್ ರೆಡ್ಡಿ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇವರು ಕ್ರಿಮಿನಲ್‍ಗಳಾದ ಮಂಜುನಾಥ್ ರೆಡ್ಡಿ, ನವೀನ್, ನರಸಿಂಹಮೂರ್ತಿ ಎಂಬವರಿಗೆ ಪೊಲೀಸ್ ಇಲಾಖೆಯ ಮಾಹಿತಿ ಸೋರಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಈ ಮೂವರು ಆರೋಪಿಗಳ ವಿರುದ್ಧ ದಂಡಿನಶಿವರ ಹಾಗೂ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಚು, ಹಲ್ಲೆ ಆರೋಪದ ಮೇಲೆ ಕೇಸ್ ದಾಖಲಾಗಿತ್ತು. ಈ ವಿಚಾರವಾಗಿ ವಾಟ್ಸಪ್ ಮೂಲಕ ಪೊಲೀಸರೇ ಆರೋಪಿಗಳಿಗೆ ಮಾಹಿತಿ ರವಾನಿಸಿದ್ದರು ಎಂದು ತಿಳಿದುಬಂದಿದೆ.