ಚಿಕ್ಕಬಳ್ಳಾಪುರ : ವಿದ್ಯುತ್ ರಿಪೇರಿ ಎಂದು ಒಂದು ಊರಿನಿಂದ ಇನ್ನೊಂದು ಉರಿಗೆ ಹೋಗಿ ವಾಪಸ್ ಕಚೇರಿಗೆ ಆಗಮಿಸುವಾಗ ಕಾರು ನಿಯಂತ್ರಣ ತಪ್ಪಿ ರಸ್ತೆ ತಿರುವಿನಲ್ಲಿ ಪಲ್ಟಿಯಾಗಿದೆ. ಅದರ ರಭಸಕ್ಕೆ ಕಾರಿನಲ್ಲಿಯೇ ಮೂವರು ಮೃತಪಟ್ಟು ಇನ್ನೊಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಬಳಿ ಸಂಭವಿಸಿದೆ.
ಮೃತ ಸಿಬ್ಬಂದಿಗಳನ್ನು ವೇಣಗೋಪಾಲ್ (34) ಹಾಗೂ ಶ್ರೀಧರ್ (35) ಮತ್ತು ಬೆಸ್ಕಾಂನ ಲೈನ್ ಮ್ಯಾನ್ ಮಂಜಪ್ಪ (35) ಎಂದು ಹೇಳಲಾಗುತ್ತಿದೆ. ಮೃತರು ಗೌರಿಬಿದನೂರು ತಾಲೂಕಿನ ನಗರಗೆರೆ ಗ್ರಾಮದ ಬೆಸ್ಕಾಂ ಕಚೇರಿಯಲ್ಲಿ ಲೈನ್ ಮ್ಯಾನ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ನಿನ್ನೆ ಮಧ್ಯರಾತ್ರಿ ವಿದ್ಯುತ್ ರಿಪೇರಿ ಎಂದು ನಗರಗೇರೆಯಿಂದ ವಾಟದಹೊಸಹಳ್ಳಿ ಗ್ರಾಮಕ್ಕೆ ಹೋಗಿ ವಾಪಸ್ ನಗರಗೇರೆಗೆ ವೇಣುಗೋಪಾಲ್ ಕಾರಿನಲ್ಲಿ ಬರುತ್ತಿದ್ದಾಗ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ, ನಾಲ್ಕು ಜನರಲ್ಲಿ ಶ್ರೀಧರ್, ವೇಣುಗೋಪಾಲ್, ಮಂಜುನಾಥ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಶಿವಕುಮಾರ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮರದಲ್ಲಿ ನೇತಾಡಿ ಪ್ರಾಣ ಬಿಟ್ಟ!
ಕಾರು ಪಲ್ಟಿಯಾದ ರಭಸಕ್ಕೆ ಕಾರಿನಲ್ಲಿ ಮೃತರಲ್ಲೊಬ್ಬರಾದ ಶ್ರೀಧರ್, ಎದರುಗಡೆ ಇದ್ದ ಮರದಲ್ಲಿ ಹಾರಿ ಹೋಗಿ ರಾತ್ರಿಯಿಡಿ ನೇತಾಡಿ ಕೊನೆಗೆ ಮೃತಪಟ್ಟಿದ್ದಾನೆ. ಬೆಳಿಗ್ಗೆ ದಾರಿಹೋಕರು ಗಮನಿಸಿ ಗೌರಿಬಿದನೂರು ಗ್ರಾಮಾಂತರ ಠಾನೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ನೋಡಿದಾಗ ಕಾರಿನಲ್ಲಿದ್ದ ಶಿವಕುಮಾರ್ ನನ್ನು ಆಸ್ಪತ್ರೆಗ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಕುಡಿದ ಮತ್ತಿನಲ್ಲಿ ಕಾರು ಚಲಾಯಿಸದರಿಂದ ಈ ಅಪಘಾತ ಸಂಭವಿಸಿದೆ ಎಂದು ತನಿಖೆಯ ವೇಳೆ ತಿಳಿದು ಬಂದಿದೆ. ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.