Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಜೂನ್.14ರಂದು ನಿಗದಿ ಪಡಿಸಿದ್ದ MBA, MCA ಪ್ರವೇಶ ಪರೀಕ್ಷೆ ಮುಂದೂಡಿಕೆ: KEA ಮಾಹಿತಿ

‘ಇವನ್ಯಾವನೋ ಬಿಸಿಲಲ್ಲಿ ಎಳೆನೀರು ತರಬೇಕಲ್ವಾ?’ : ನೀರು ಕೊಟ್ಟ ಅಧಿಕಾರಿ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ!

ಐಐಎಸ್‌ಸಿ ಬೆಂಗಳೂರು ಸಂಶೋಧನಾ ನವೀನತೆಗೆ ಉತ್ತೇಜನ ನೀಡಲಿರುವ ಶಾಫ್ಲರ್ ಇಂಡಿಯಾ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಹಿರಿಯ ಪತ್ರಕರ್ತ `ಹೊನ್ನುಡಿ ಪ್ರಭಾಕರ್’ ನಿಧನ | Prabhakar passes away
KARNATAKA

BREAKING : ಹಿರಿಯ ಪತ್ರಕರ್ತ `ಹೊನ್ನುಡಿ ಪ್ರಭಾಕರ್’ ನಿಧನ | Prabhakar passes away

By kannadanewsnow57

ಕೋಲಾರ : ಕೋಲಾರ ಜಿಲ್ಲೆಯ ಹಿರಿಯ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಹೊನ್ನುಡಿ ಪತ್ರಿಕೆ ಸಂಪಾದಕ ಎಂ.ಜಿ. ಪ್ರಭಾಕರ (76) ಭಾನುವಾರ ರಾತ್ರಿ ನಗರದ ಕೋಟೆಯ ತಮ್ಮ ನಿವಾಸದಲ್ಲಿ ನಿಧನರಾದರು.

ಅಲ್ಪಕಾಲದ ಅಸೌಖ್ಯಕ್ಕೆ ತುತ್ತಾಗಿದ್ದ ಪ್ರಭಾಕರ ಅವರನ್ನು ಭಾನುವಾರ ಮಧ್ಯಾಹ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ 9:30 ವೇಳೆಗೆ ವಿಧಿವಶರಾದರು. ಪ್ರಭಾಕರ ಅವರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅಂತ್ಯವಿಧಿಗಳು ಸೋಮವಾರ ಮಧ್ಯಾಹ್ನ ನಡೆಯಲಿವೆ.ಮೂಲಕ ಕಂಟ್ರಾಕ್ಟರ್ ಆಗಿದ್ದ ಪ್ರಭಾಕರ್ 1980ರ ದಶಕದಲ್ಲಿ ಹೊನ್ನುಡಿ ಪತ್ರಿಕೆಯ ಪಾಲುದಾರರಾಗಿ ಪತ್ರಿಕೋದ್ಯಮ ಪ್ರವೇಶಿಸಿದರು.

ಕಳೆದ ಮೂರು ದಶಕಗಳಿಂದ ಹೊನ್ನುಡಿ ಸಂಪಾದಕರಾಗಿದ್ದ ಅವರು ತಮ್ಮ ಹೊನ್ನಲಗು ಅಂಕಣ ಹಾಗೂ ಮೊನಚು ಬರವಣಿಗೆಯಿಂದ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಜನಪ್ರಿಯರಾಗಿದ್ದರು.

ಎರಡು ಬಾರಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ ಪ್ರಭಾಕರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿಗೂ ಭಾಜನರಾಗಿದ್ದರು.

ಸಾಮಾಜಿಕ ಹಾಗೂ ಕಾರ್ಮಿಕ ಹೋರಾಟಗಳಲ್ಲಿ ಮುಂಚೂಣಿ ವಹಿಸುತ್ತಿದ್ದ ಎಂ.ಜಿ.ಪ್ರಭಾಕರ ಬಂಗಾರಪೇಟೆ ಯಲಹಂಕ ನಡುವಿನ ನ್ಯಾರೋಗೇಜ್ ರೈಲು ಮಾರ್ಗಕ್ಕೆ ಕುತ್ತು ಬಂದ ಸಂದರ್ಭದಲ್ಲಿ ರೈಲ್ವೆ ಗ್ಯಾಂಗ್‌ಮೆನ್ ನಡುಪಳ್ಳಿ ಮುನಿಸ್ವಾಮಿ ಅವರ ಜೊತೆಗೂಡಿ ಬ್ರಾಡ್‌ಗೇಜ್ ಮಾರ್ಗವಾಗಿ ಅಭಿವೃದ್ಧಿಗೊಳಿಸುವಲ್ಲಿ ಹತ್ತಾರು ಹೋರಾಟಗಳನ್ನು ನಡೆಸಿ ಯಶಸ್ವಿಯಾಗಿದ್ದರು.

ಕೋಲಾರದ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷರಾಗಿ ದಶಕಗಳ ಕಾಲ ನಗರದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕೆಯುಡಬ್ಲ್ಯೂಜೆ ಸಂತಾಪ:

ಕ್ರೀಯಾಶೀಲ ಪತ್ರಕರ್ತರಾಗಿದ್ದ ಹೊನ್ನುಡಿ ಪ್ರಭಾಕರ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ ) ತೀವ್ರ ಸಂತಾಪ ವ್ಯಕ್ತಪಡಿಸಿದೆ. ಪ್ರಭಾಕರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ದೇವರಲ್ಲಿ ಪ್ರಾರ್ಥಿಸಿದ್ದಾರೆ.

BREAKING : Senior journalist 'Honnudi Prabhakar' passes away | Prabhakar passes away
Share. Facebook Twitter LinkedIn WhatsApp Email

Related Posts

BREAKING: ಜೂನ್.14ರಂದು ನಿಗದಿ ಪಡಿಸಿದ್ದ MBA, MCA ಪ್ರವೇಶ ಪರೀಕ್ಷೆ ಮುಂದೂಡಿಕೆ: KEA ಮಾಹಿತಿ

1 Min Read

‘ಇವನ್ಯಾವನೋ ಬಿಸಿಲಲ್ಲಿ ಎಳೆನೀರು ತರಬೇಕಲ್ವಾ?’ : ನೀರು ಕೊಟ್ಟ ಅಧಿಕಾರಿ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ!

1 Min Read

ಐಐಎಸ್‌ಸಿ ಬೆಂಗಳೂರು ಸಂಶೋಧನಾ ನವೀನತೆಗೆ ಉತ್ತೇಜನ ನೀಡಲಿರುವ ಶಾಫ್ಲರ್ ಇಂಡಿಯಾ

2 Mins Read
Recent News

BREAKING: ಜೂನ್.14ರಂದು ನಿಗದಿ ಪಡಿಸಿದ್ದ MBA, MCA ಪ್ರವೇಶ ಪರೀಕ್ಷೆ ಮುಂದೂಡಿಕೆ: KEA ಮಾಹಿತಿ

‘ಇವನ್ಯಾವನೋ ಬಿಸಿಲಲ್ಲಿ ಎಳೆನೀರು ತರಬೇಕಲ್ವಾ?’ : ನೀರು ಕೊಟ್ಟ ಅಧಿಕಾರಿ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ!

ಐಐಎಸ್‌ಸಿ ಬೆಂಗಳೂರು ಸಂಶೋಧನಾ ನವೀನತೆಗೆ ಉತ್ತೇಜನ ನೀಡಲಿರುವ ಶಾಫ್ಲರ್ ಇಂಡಿಯಾ

BREAKING : ನಾಳೆ ನಟ ದರ್ಶನ್ ಗೆ ಬಿಗ್ ಡೇ : ಕೊಲೆ ಕೇಸ್ ಕುರಿತು, ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ!

State News
KARNATAKA

BREAKING: ಜೂನ್.14ರಂದು ನಿಗದಿ ಪಡಿಸಿದ್ದ MBA, MCA ಪ್ರವೇಶ ಪರೀಕ್ಷೆ ಮುಂದೂಡಿಕೆ: KEA ಮಾಹಿತಿ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ರಾಜ್ಯದ ಸ್ನಾತಕೋತ್ತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಯುವ PGCET-2026 ಪರೀಕ್ಷಾ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಮೇ 24…

‘ಇವನ್ಯಾವನೋ ಬಿಸಿಲಲ್ಲಿ ಎಳೆನೀರು ತರಬೇಕಲ್ವಾ?’ : ನೀರು ಕೊಟ್ಟ ಅಧಿಕಾರಿ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ!

ಐಐಎಸ್‌ಸಿ ಬೆಂಗಳೂರು ಸಂಶೋಧನಾ ನವೀನತೆಗೆ ಉತ್ತೇಜನ ನೀಡಲಿರುವ ಶಾಫ್ಲರ್ ಇಂಡಿಯಾ

BREAKING : ನಾಳೆ ನಟ ದರ್ಶನ್ ಗೆ ಬಿಗ್ ಡೇ : ಕೊಲೆ ಕೇಸ್ ಕುರಿತು, ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.