Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಡಿಕೆ ಶಿವಕುಮಾರ್ : ನಾಳೆ ಅಥವಾ ನಾಡಿದ್ದು ಪ್ರಮಾಣವಚನ ಸ್ವೀಕಾರ!

ALERT : ಕಾರಿನ ಡ್ಯಾಶ್‌ ಬೋರ್ಡ್ ಮೇಲೆ `ಮೊಬೈಲ್’ ಇಡುವವರೇ ಎಚ್ಚರ : ನಿಮ್ಮ ಫೋನ್ ಬಾಂಬ್ ನಂತೆ ಬ್ಲಾಸ್ಟ್ ಆಗಬಹುದು.!

​ದಿನಕ್ಕೊಂದು ಚಮಚ ತುಪ್ಪ: ನಿಮ್ಮ ಆರೋಗ್ಯದಲ್ಲಿ ಆಗುವ ಅದ್ಭುತ ಬದಲಾವಣೆಗಳೇನು?

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING :ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಕುಟುಂಬಸ್ಥರಿಗೆ, ಕೊಲೆ ಆರೋಪಿಗಳಿಂದ ಜೀವ ಬೆದರಿಕೆ!
KARNATAKA

BREAKING :ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಕುಟುಂಬಸ್ಥರಿಗೆ, ಕೊಲೆ ಆರೋಪಿಗಳಿಂದ ಜೀವ ಬೆದರಿಕೆ!

By ಸುರೇಶ್‌

ಹುಬ್ಬಳ್ಳಿ : ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಗಳು ಗುರೂಜಿ ಕುಟುಂಬಸ್ಥರಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಚಂದ್ರಶೇಖರ್ ಗುರೂಜಿ ಅವರ ಕುಟುಂಬಸ್ಥರು ಆರೋಪಿಗಳು ವಿರುದ್ಧ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಹೌದು ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ಉಣಕಲ ಕೆರೆಯ ಹತ್ತಿರದ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ನಡೆದ ಸರಳವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದ ಆರೋಪಿಗಳು, ನ್ಯಾಯಾಂಗ ಬಂಧನದಲ್ಲಿ ಇದ್ದಾಗಲೇ ಗೂರೂಜಿ ಅವರ ಸಂಬಂಧಿಕರಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಕುರಿತು ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳಾದ ಮಹಾಂತೇಶ ಶಿರೂರು ಮತ್ತು ಮಂಜುನಾಥ ಮೆರೇವಾಡ ವಿರುದ್ಧ ಗುರೂಜಿ ಸಂಬಂಧಿಕರಾದ ಉದ್ಯಮಿ ಸಂಜಯ ಅಂಗಡಿ ಸೆಪ್ಟೆಂಬ‌ರ್ 2ರಂದು ದೂರು ನೀಡಿದ್ದಾರೆ. 2022ರ ಜುಲೈನಲ್ಲಿ ನಡೆದ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದ ವಿಚಾರಣೆ ಮಾಹಿತಿ ಪಡೆಯಲು, 2024ರ ಫೆ. 14ರಂದು ಸಂಜಯ ಅವರು ತಂಗಿ ಜೊತೆ ಹುಬ್ಬಳ್ಳಿ ಕೋರ್ಟ್‌ಗೆ ಬಂದಿದ್ದರು. ಆ ವೇಳೆ ಪೊಲೀಸರು ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳನ್ನು ವಿಚಾರಣೆಗೆ ಕರೆದುಕೊಂಡು ಬಂದಿದ್ದರು.

ವಾಪಸ್ಸು ಅವರನ್ನು ಕರೆದೊಯ್ಯುವಾಗ ಗುರೂಜಿ ಸಂಬಂಧಿಕರಿಗೆ ‘ನೀವು ಕೋರ್ಟ್‌ನಲ್ಲಿ ಕಂಡರೆ ಗುರೂಜಿ ತರಹ ಎತ್ತಿ ಬಿಡುತ್ತೀವಿ. ಒಂದೇ ದಿನ ಹೊರಗೆ ಬಂದರೂ ನಿಮ್ಮ ಯಾರನ್ನೂ ಬಿಡುವುದಿಲ್ಲ’ ಎಂದು ಜೀವ ಬೆದರಿಕೆ ಹಾಕಿದ್ದೂ ಅಲ್ಲದೆ, ಸುರೇಶ ಪಲ್ಲೇದ ಮೂಲಕ ಪ್ರಕರಣ ರಾಜೀ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಮಿಷನರ್ ಹೇಳಿದ್ದೇನು?

ಇನ್ನೂ ಈ ಒಂದು ಬೆದರಿಕೆ ಆರೋಪದ ಕುರಿತು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪ್ರತಿಕ್ರಿಯಿಸಿ ಕುಮಾರ್ ಹೇಳಿಕೆ ಸರಳವಾಸ್ತು ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೀವ ಬೆದರಿಕೆ ಬಗ್ಗೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಆರೋಪಿಗಳೆಬ್ಬರೂ ಜೀವ ಬೆದರಿಕೆ ಹಾಕಿರುವ ಅಂಶ ಬೆಳಕಿಗೆ ಬಂದಿದೆ. ಗುರೂಜಿ ಕುಟುಂಬಸ್ಥರು ನೀಡಿರುವ ದೂರನ್ನಾಧರಿಸಿ ಕೇಸ್ ದಾಖಲಿಸಿಕೊಂಡಿದ್ದೇವೆ. ಆರೋಪಿಗಳನ್ನು ಕೋರ್ಟಿಗೆ ಕರೆ ತಂದಾಗ ಜೀವ ಬೆದರಿಕೆ ಹಾಕಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಅಗತ್ಯವಿದ್ದರೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ.

Share. Facebook Twitter LinkedIn WhatsApp Email

Related Posts

BREAKING : ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಡಿಕೆ ಶಿವಕುಮಾರ್ : ನಾಳೆ ಅಥವಾ ನಾಡಿದ್ದು ಪ್ರಮಾಣವಚನ ಸ್ವೀಕಾರ!

2 Mins Read

ALERT : ಕಾರಿನ ಡ್ಯಾಶ್‌ ಬೋರ್ಡ್ ಮೇಲೆ `ಮೊಬೈಲ್’ ಇಡುವವರೇ ಎಚ್ಚರ : ನಿಮ್ಮ ಫೋನ್ ಬಾಂಬ್ ನಂತೆ ಬ್ಲಾಸ್ಟ್ ಆಗಬಹುದು.!

2 Mins Read

ಬೆಂಗಳೂರಲ್ಲಿ ಧಾರಾಕಾರ ಮಳೆಗೆ ಮತ್ತೊಂದು ದುರಂತ : ಆಟೋ ಮೇಲೆ ಕಾಂಪೌಂಡ್ ಕುಸಿದು ಚಾಲಕ ಸ್ಥಳದಲ್ಲೇ ಸಾವು!

1 Min Read
Recent News

BREAKING : ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಡಿಕೆ ಶಿವಕುಮಾರ್ : ನಾಳೆ ಅಥವಾ ನಾಡಿದ್ದು ಪ್ರಮಾಣವಚನ ಸ್ವೀಕಾರ!

ALERT : ಕಾರಿನ ಡ್ಯಾಶ್‌ ಬೋರ್ಡ್ ಮೇಲೆ `ಮೊಬೈಲ್’ ಇಡುವವರೇ ಎಚ್ಚರ : ನಿಮ್ಮ ಫೋನ್ ಬಾಂಬ್ ನಂತೆ ಬ್ಲಾಸ್ಟ್ ಆಗಬಹುದು.!

​ದಿನಕ್ಕೊಂದು ಚಮಚ ತುಪ್ಪ: ನಿಮ್ಮ ಆರೋಗ್ಯದಲ್ಲಿ ಆಗುವ ಅದ್ಭುತ ಬದಲಾವಣೆಗಳೇನು?

ರಿಲಯನ್ಸ್ ADA ಸಮೂಹದ ಬ್ಯಾಂಕ್ ವಂಚನೆ ಪ್ರಕರಣ: ಸಿಬಿಐನಿಂದ ಮೊದಲ ಚಾರ್ಜ್‌ಶೀಟ್ ಸಲ್ಲಿಕೆ!

State News
KARNATAKA

BREAKING : ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಡಿಕೆ ಶಿವಕುಮಾರ್ : ನಾಳೆ ಅಥವಾ ನಾಡಿದ್ದು ಪ್ರಮಾಣವಚನ ಸ್ವೀಕಾರ!

By ಸುರೇಶ್‌ KARNATAKA 2 Mins Read

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಇಂದು ಮಹತ್ತರ ವಿದ್ಯಮಾನವೊಂದು ಜರುಗಲಿದ್ದು, ರಾಜಧಾನಿ ಬೆಂಗಳೂರಿನ ವಿಧಾನಸೌಧದಲ್ಲಿ ಇಂದು ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ…

ALERT : ಕಾರಿನ ಡ್ಯಾಶ್‌ ಬೋರ್ಡ್ ಮೇಲೆ `ಮೊಬೈಲ್’ ಇಡುವವರೇ ಎಚ್ಚರ : ನಿಮ್ಮ ಫೋನ್ ಬಾಂಬ್ ನಂತೆ ಬ್ಲಾಸ್ಟ್ ಆಗಬಹುದು.!

ಬೆಂಗಳೂರಲ್ಲಿ ಧಾರಾಕಾರ ಮಳೆಗೆ ಮತ್ತೊಂದು ದುರಂತ : ಆಟೋ ಮೇಲೆ ಕಾಂಪೌಂಡ್ ಕುಸಿದು ಚಾಲಕ ಸ್ಥಳದಲ್ಲೇ ಸಾವು!

BREAKING : ಕರ್ನಾಟಕದ ನೂತನ ಮುಖ್ಯಮಂತ್ರಿ ಆಗಿ ಜೂನ್.3ಕ್ಕೆ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕಾರ | D.K. Shivakumar

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.