ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆಯ ನಂತರ ಆತನ ಶವ ಸಾಗಿಸಲು ದರ್ಶನ್ ಅವರೆ ಕೊಟ್ಟಿದ್ದಾರೆ ಎನ್ನಲಾದ 30 ಲಕ್ಷ ಡೀಲ್ ಗೆ ಸಂಬಂಧಿಸಿದಂತೆ ಇದೀಗ ಪೊಲೀಸರು 30 ಲಕ್ಷ ಹಣವನ್ನು ಇಟ್ಟ ಜಾಗದಲ್ಲಿಯೇ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹತ್ಯೆಯ ಬಳಿಕ ರೇಣುಕಾಸ್ವಾಮಿ ಶವ ಸಾಗಿಸಲು ದರ್ಶನ ನೀಡಿದ 30 ಲಕ್ಷ ರೂಪಾಯಿ ಮನೆಯಲ್ಲೆ ಇದೀಗ ಹಣ ಜಪ್ತಿ ಮಾಡಿಕೊಳ್ಳಲಾಗಿದೆ. ಶವ ಸಾಗಿಸಲು ಆರೋಪಿ ಪ್ರದೋಷ ದರ್ಶನ್ ಯಿಂದ ಹಣ ಪಡೆದಿದ್ದ , ಕಾರ್ತಿಕ್ ಮೂಲಕ ತಲಾ 5 ಲಕ್ಷ ಕೊಡಲು ಪ್ಲಾನ್ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.
ಇದೀಗ 30 ಲಕ್ಷ ಹಣವನ್ನು ಒಂದು ಮನೆಯಲ್ಲಿ ಇಡಲಾಗಿತ್ತು. ಇದೀಗ ಆ 30 ಲಕ್ಷ ಹಣವನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ರೇಣುಕಾ ಸ್ವಾಮಿ ಶವ ಸಾಗಿಸಲು 30 ಲಕ್ಷಕ್ಕೆ ಡಿಲ್ ಮಾಡಲಾಗಿತ್ತು ಹೀಗಾಗಿ ಮೊದಲು ಶವವನ್ನು ಪಟ್ಟಣಗೆರೆ ಷಡ್ ನಿಂದ ಆಟೋದಲ್ಲಿ ಸಾಗಿಸಿ ನಂತರ ಸ್ಕಾರ್ಪಿಯೋ ಕಾರಿನಲ್ಲಿ ಶಿಫ್ಟ್ ಮಾಡಿದ್ದರು. ಅದಾದ ಬಳಿಕ ಕೆರೆಯಲ್ಲಿ ಎಸೆದು ತೆರಳಿದ್ದರು.