ಬೆಂಗಳೂರು : ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಮಾಜಿ ಎಂಎಲ್ಸಿ ರಮೇಶ್ ಗೌಡ ಅವರ ವಿರುದ್ಧ ಉದ್ಯಮಿ ವಿಜಯ್ ತಾತಾ ಅವರು ನೀಡಿದಂತ ದೂರಿನ ಹಿನ್ನಲೆಯಲ್ಲಿ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಇದರ ಬೆನ್ನಲ್ಲೆ ಮಾಜಿ ಎಂಎಲ್ಸಿ ರಮೇಶ್ ಗೌಡ ಉದ್ಯಮಿಯ ವಿರುದ್ಧ ಪ್ರತಿ ದೂರನ್ನು ದಾಖಲಿಸಿದ್ದಾರೆ.
ಹೌದು ಕಳೆದ ಆಗಸ್ಟ್ 24ರಂದು ವಿಜಯ್ ತಾತ ತಮ್ಮ ಮನೆಗೆ ಕರೆದಿದ್ದರು. ಊಟಕ್ಕೆ ಎಂದು ಕರೆದಿದ್ದಾಗ ನನಗೆ 100 ಕೋಟಿ ರೂಪಾಯಿ ಹಣ ಬೇಕು ಎಂದು ಹೇಳಿದ್ದರು ಆಗ ನಾನು ನನ್ನ ಹತ್ತಿರ ಇಲ್ಲ ಎಂದಾಗ ನನಗೆ ಧಮ್ಕಿ ಹಾಕಿದ್ದಾರೆ ಎಂದು ರಮೇಶ್ ಗೌಡ ದೂರು ಸಲ್ಲಿಸಿದ್ದಾರೆ.
ನಾನು ಈಗ ತುಂಬಾ ಲಾಸ್ ನಲ್ಲಿ ಇದ್ದೇನೆ ನನಗೆ ಈಗ 100 ಕೋಟಿ ರೂಪಾಯಿ ಅವಶ್ಯಕತೆ ಇದೆ. ಒಂದು ವೇಳೆ ನನಗೆ 100 ಕೋಟಿ ರೂಪಾಯಿ ಕೊಡದೆ ಹೋದರೆ ನಿಮ್ಮನ್ನು ಮತ್ತು ಕುಮಾರಸ್ವಾಮಿ ಅವರನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ರಮೇಶ್ ಗೌಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆ ಯಲ್ಲಿ ಅಮೃತಹಳ್ಳಿ ಪೊಲೀಸರು ದೂರು ಸ್ವೀಕರಿಸಿದ್ದಾರೆ.