ನವದೆಹಲಿ : ಇಂದು ಮುಂಬೈನಲ್ಲಿ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು. ಈ ಸಭೆಯಲ್ಲಿ, 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಮತ್ತು ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ ಅವರನ್ನ ಬಿಸಿಸಿಐ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಇದರೊಂದಿಗೆ ಮಹಿಳಾ ಐಪಿಎಲ್ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನ ಕೈಗೊಳ್ಳಲಾಗಿದೆ.
ಪುರುಷರಂತೆ ಮುಂದಿನ ವರ್ಷ ಮಹಿಳಾ ಐಪಿಎಲ್ ಕೂಡ ಆಯೋಜಿಸಲಾಗುವುದು ಎಂದು ಘೋಷಿಸಲಾಗಿದೆ. ಮಹಿಳಾ ಐಪಿಎಲ್ನಲ್ಲಿ ಆರಂಭದಲ್ಲಿ ಐದು ತಂಡಗಳು ಭಾಗವಹಿಸಲಿವೆ. ಆದರೆ, ಮಹಿಳಾ ಐಪಿಎಲ್ ಹರಾಜು ಹೇಗಿರಲಿದೆ.? ಮಂಗಳವಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದು. ಏತನ್ಮಧ್ಯೆ, ಬಿಸಿಸಿಐ ಈ ತಂಡಗಳನ್ನು ಜನಪ್ರಿಯ ಅಥವಾ ದೊಡ್ಡ ಕ್ರಿಕೆಟ್ ಅಭಿಮಾನಿಗಳನ್ನ ಹೊಂದಿರುವ ನಗರಗಳಿಂದ ಹೆಸರಿಸಬಹುದು.
🚨 Update 🚨: 91st Annual General Meeting of BCCI
The 91st Annual General Meeting of the Board of Control for Cricket in India (BCCI) was held on October 18th, 2022, in Mumbai.
The key decisions made are as under 🔽https://t.co/c2XV2W2Opl
— BCCI (@BCCI) October 18, 2022
ಮಂಡಳಿಯು ಹೊರಡಿಸಿದ ಅಧಿಕೃತ ಮಾಧ್ಯಮ ಪ್ರಕಟಣೆಯಲ್ಲಿ, ಪಂದ್ಯಾವಳಿಯನ್ನು ನಿಜವಾಗಿಯೂ ನಡೆಸಲಾಗುವುದು ಎಂದು ದೃಢಪಡಿಸಲಾಗಿದೆ. ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಸಲು ಜನರಲ್ ಬಾಡಿ ಅನುಮೋದನೆ ನೀಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಜಿಎಂ ಸಮಯದಲ್ಲಿ, 2023-2027ರ ಸೀನಿಯರ್ ಮೆನ್ಸ್ ಫ್ಯೂಚರ್ ಟೂರ್ ಪ್ರೋಗ್ರಾಮ್ಗಳು ಮತ್ತು 2022-2025ರ ಸೀನಿಯರ್ ವುಮೆನ್ಸ್ ಫ್ಯೂಚರ್ ಟೂರ್ ಪ್ರೋಗ್ರಾಮ್ಗಳಿಗೆ ಜನರಲ್ ಬಾಡಿ ಅನುಮೋದನೆ ನೀಡಿದೆ.
ಭಾರತದ ಮಾಜಿ ಆಲ್ರೌಂಡರ್ ರೋಜರ್ ಬಿನ್ನಿ ಅವರನ್ನ ಮಂಡಳಿಯ 36ನೇ ಅಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ಸೌರವ್ ಗಂಗೂಲಿ ಅವರ ಸ್ಥಾನವನ್ನ ತುಂಬಲಿದ್ದಾರೆ. ಜಯ್ ಷಾ ಕಾರ್ಯದರ್ಶಿಯಾಗಲಿದ್ದಾರೆ. ಅರುಣ್ ಧುಮಾಲ್ ಅವರು ಐಪಿಎಲ್ ನ ನೂತನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ರಾಜೀವ್ ಶುಕ್ಲಾ ಉಪಾಧ್ಯಕ್ಷರಾಗಿ, ಆಶಿಶ್ ಶೆಲಾರ್ ಅವರನ್ನ ಮಂಡಳಿಯ ಖಜಾಂಚಿಯಾಗಿ ನೇಮಕ ಮಾಡಲಾಗಿದೆ. ದೇವಜಿತ್ ಸೈಕಿಯಾ ಈಗ ಬಿಸಿಸಿಐನ ಹೊಸ ಜಂಟಿ ಕಾರ್ಯದರ್ಶಿಯಾಗಿದ್ದಾರೆ.
ಬಹುನಿರೀಕ್ಷಿತ ಮಹಿಳಾ ಐಪಿಎಲ್ ಉದ್ಘಾಟನಾ ಆವೃತ್ತಿಯು ಐದು ತಂಡಗಳನ್ನು ಹೊಂದಿರುತ್ತದೆ ಮತ್ತು ಪುರುಷರ ಐಪಿಎಲ್ ಪ್ರಾರಂಭವಾಗುವ ಮೊದಲು 2023ರ ಮಾರ್ಚ್ನಲ್ಲಿ ನಡೆಯಲಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ಈ ಹಿಂದೆ ವರದಿ ಮಾಡಿತ್ತು.
ಪಂದ್ಯಾವಳಿಯಲ್ಲಿ 20 ಲೀಗ್ ಪಂದ್ಯಗಳು ನಡೆಯಲಿದ್ದು, ತಂಡಗಳು ಎರಡು ಬಾರಿ ಪರಸ್ಪರ ಆಡಬೇಕು. ಟೇಬಲ್ ಟಾಪರ್’ಗಳು ಫೈನಲ್’ಗೆ ನೇರ ಪ್ರವೇಶ ಪಡೆಯುತ್ತಾರೆ, ಎರಡನೇ ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್’ನಲ್ಲಿ ಸೆಣಸಾಡಲಿವೆ. ಪ್ರತಿ ತಂಡವು ಆಡುವ ಹನ್ನೊಂದರಲ್ಲಿ ಐದಕ್ಕಿಂತ ಹೆಚ್ಚು ವಿದೇಶಿ ಕ್ರಿಕೆಟಿಗರನ್ನ ಹೊಂದಲು ಸಾಧ್ಯವಿಲ್ಲ.