ನವದೆಹಲಿ : ಈ ವರ್ಷದ ಸೆಪ್ಟೆಂಬರ್’ನಲ್ಲಿ ನಡೆಯಲಿರುವ ಏಷ್ಯಾಕಪ್ 2023ರಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ ಎಂದು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ ಗುರುವಾರ ಘೋಷಿಸಿದ್ದಾರೆ.
ಏಷ್ಯಾಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನದೊಂದಿಗೆ ಹಾಲಿ ಚಾಂಪಿಯನ್ ಶ್ರೀಲಂಕಾ ಒಂದು ಗುಂಪಿನಲ್ಲಿದ್ದು, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಅರ್ಹತಾ ತಂಡಗಳಿವೆ. ಏಷ್ಯಾಕಪ್ 2023 ವಿಶ್ವಕಪ್ ನಿರ್ಮಾಣದ ಭಾಗವಾಗಿ 50 ಓವರ್’ಗಳ ಮಾದರಿಯಲ್ಲಿ ನಡೆಯಲಿದೆ. ಆದ್ರೆ, ಈ ಏಷ್ಯಾಕಲ್ ಪಂದ್ಯಾವಳಿ ಎಲ್ಲಿ ನಡಯಲಿದೆ.? ಯಾವಾಗ ನಡೆಯಲಿದೆ ಅನ್ನೋದನ್ನ ಬಹಿರಂಗ ಪಡೆಸಿಲ್ಲ.
ಈ ಕುರಿತು ಟ್ವೀಟ್ ಮಾಡಿದ ಜಯ್ ಶಾ, “2023 ಮತ್ತು 2024 ರ @ACCMedia1 ಮಾರ್ಗ ರಚನೆ ಮತ್ತು ಕ್ರಿಕೆಟ್ ಕ್ಯಾಲೆಂಡರ್ ಪ್ರಸ್ತುತ ಪಡಿಸುತ್ತಿದ್ದೇನೆ. ಇದು ಈ ಆಟವನ್ನ ಹೊಸ ಎತ್ತರಕ್ಕೆ ಕೊಂಡೊಯ್ಯುವ ನಮ್ಮ ಸಾಟಿಯಿಲ್ಲದ ಪ್ರಯತ್ನಗಳು ಮತ್ತು ಉತ್ಸಾಹವನ್ನ ಸಂಕೇತಿಸುತ್ತದೆ. ದೇಶಾದ್ಯಂತದ ಕ್ರಿಕೆಟಿಗರು ಅದ್ಭುತ ಪ್ರದರ್ಶನಗಳಿಗೆ ಸಜ್ಜಾಗುತ್ತಿರುವುದರಿಂದ, ಇದು ಕ್ರಿಕೆಟ್’ಗೆ ಉತ್ತಮ ಸಮಯವಾಗಿದೆ ಎಂದು ಭರವಸೆ ನೀಡುತ್ತದೆ” ಎಂದಿದ್ದಾರೆ.
ಇದಕ್ಕೂ ಮುನ್ನ ದುಬೈನಲ್ಲಿ ನಡೆದ ಟಿ20 ಏಷ್ಯಾ ಕಪ್ 2022 ಫೈನಲ್’ನಲ್ಲಿ ಶ್ರೀಲಂಕಾ ಪಾಕಿಸ್ತಾನವನ್ನ ಸೋಲಿಸಿತ್ತು. ಪಾಕಿಸ್ತಾನ ನಂತ್ರ ಶ್ರೀಲಂಕಾ ವಿರುದ್ಧದ ಪಂದ್ಯಗಳನ್ನ ಸೋತಾದ್ಮೇಲೆ ಭಾರತವು ಸ್ಪರ್ಧೆಯ ಫೈನಲ್ ತಲುಪಲು ವಿಫಲವಾಯಿತು.
2023ರಲ್ಲಿ ನಡೆಯುವ ಪಂದ್ಯಾವಳಿಗಳ ಪಟ್ಟಿ ಇಲ್ಲಿದೆ.!
ಫೆಬ್ರವರಿಯಲ್ಲಿ ಪುರುಷರ ಚಾಲೆಂಜರ್ ಕಪ್
ಮಾರ್ಚ್’ನಲ್ಲಿ ಪುರುಷರ ಅಂಡರ್-16 ಪ್ರಾದೇಶಿಕ
ಏಪ್ರಿಲ್’ನಲ್ಲಿ ಪುರುಷರ ಪ್ರೀಮಿಯರ್ ಕಪ್
ಜೂನ್’ನಲ್ಲಿ ಮಹಿಳಾ ಟಿ 20 ಉದಯೋನ್ಮುಖ ಏಷ್ಯಾ ಕಪ್
ಜುಲೈನಲ್ಲಿ ಪುರುಷರ ಉದಯೋನ್ಮುಖ ಏಷ್ಯಾ ಕಪ್
ಸೆಪ್ಟೆಂಬರ್’ನಲ್ಲಿ ಪುರುಷರ ಏಕದಿನ ಏಷ್ಯಾ ಕಪ್
ಅಕ್ಟೋಬರ್’ನಲ್ಲಿ ಪುರುಷರ ಅಂಡರ್-19 ಚಾಲೆಂಜರ್ ಕಪ್
ನವೆಂಬರ್’ನಲ್ಲಿ ಪುರುಷರ ಅಂಡರ್-19 ಪ್ರೀಮಿಯರ್ ಕಪ್
ಡಿಸೆಂಬರ್’ನಲ್ಲಿ ಪುರುಷರ ಅಂಡರ್ 19 ಏಷ್ಯಾ ಕಪ್
Presenting the @ACCMedia1 pathway structure & cricket calendars for 2023 & 2024! This signals our unparalleled efforts & passion to take this game to new heights. With cricketers across countries gearing up for spectacular performances, it promises to be a good time for cricket! pic.twitter.com/atzBO4XjIn
— Jay Shah (@JayShah) January 5, 2023
ಹಾವೇರಿ ಸಾಹಿತ್ಯ ಸಮ್ಮೇಳನ: ಜೋಶಿಯಿಂದ ಲೇಖಕಿಯರಿಗೆ ಅವಮಾನ – ಡಾ. ಎಚ್.ಎಲ್. ಪುಷ್ಪಾ ಕಿಡಿ
SHOCKING NEWS: 4 ಅರಿವಳಿಕೆ ಡೋಸ್ ಚುಚ್ಚಿಕೊಂಡು ವೈದ್ಯೆ ಸಾವಿಗೆ ಶರಣು… ಆತ್ಮಹತ್ಯೆ ಪತ್ರದಲ್ಲಿತ್ತು ಸಾವಿನ ರಹಸ್ಯ