ಹುಬ್ಬಳ್ಳಿ : ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್ ಅನುಮತಿ ನೀಡಿದ ಹಿನ್ನೆಲೆ ಹಿಂದೂ ಪರ ಸಂಘಟನೆಗಳು ಸರಳವಾಗಿ ಗಣೇಶನ ಮೂರ್ತಿಯನ್ನು ತಂದು ಬೆಳಗ್ಗೆ 7.30ಕ್ಕೆ ಪ್ರತಿಷ್ಠಾಪನೆ ಮಾಡಲಾಗಿದೆ.
BIGG NEWS : ಹಾವೇರಿಯಲ್ಲಿ ನಾಳೆಯಿಂದ ಅಗ್ನಿಪಥ್ ನೇಮಕಾತಿ : ಅಭ್ಯರ್ಥಿಗಳ ತಾತ್ಕಾಲಿಕ ವಸತಿಗೆ ಸಂಪರ್ಕ ಅಧಿಕಾರಿ ನೇಮಕ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿವಾದವನ್ನು ಇತ್ಯರ್ಥಪಡಿಸಿದ ಹೈಕೋರ್ಟ್, ರಾಣಿ ಚೆನ್ನಮ್ಮ ಗಣೇಶೋತ್ಸವ ಮಹಾಮಂಡಳಿ ಸಮಿತಿಗೆ ಗಣೇಶೋತ್ಸವದ ಜವಾಬ್ದಾರಿಯನ್ನು ನೀಡಿದೆ. ಈ ನಿಟ್ಟಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಮೈದಾನದಲ್ಲಿ ಗಣೇಶನನ್ನು ಪ್ರತಿಷ್ಠಾನ ಮಾಡಲಿರುವ ಮಹಾಮಂಡಳಿ ಸಮಿತಿಯು ಎಲ್ಲ ಸಿದ್ಧತೆಗಳನ್ನು ನಡೆಸಿಕೊಂಡಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮೈದಾನದ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಭಕ್ತಾದಿಗಳ ಗಮನಕ್ಕೆ : ಕೊಪ್ಪಳದ ʼಅಂಜನಾದ್ರಿ ಬೆಟ್ಟದಲ್ಲಿ ಇನ್ನೂ ಪತ್ತೆಯಾಗದ ಚಿರತೆ ʼ : ಭಕ್ತರ ಆಗಮನಕ್ಕೆ ನಿರ್ಬಂಧ
ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಪಾಲಿಕೆ ನೀಡಿದ್ದಂತ ಅನುಮತಿ ಪ್ರಶ್ನಿಸಿ, ಅಂಜುಮಾನ್ ಇಸ್ಲಾಂ ಸಂಸ್ಥೆ ಸಲ್ಲಿಸಿದ್ದಂತ ಆಕ್ಷೇಪಣೆಯನ್ನು ವಜಾಗೊಳಿಸಿರುವಂತ ಹೈಕೋರ್ಟ್, ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿದೆ.