ಧಾರವಾಡ : ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡಿದರು ಕೂಡ ಯಾವುದೇ ಭಯವಿಲ್ಲದೆ ಸಾಲ ನೀಡಿದವರಿಗೆ ಕಿರುಕುಳ ನೀಡಲು ಮುಂದುವರಿಸಿದ್ದಾರೆ. ಇದೀಗ ಧಾರವಾಡದಲ್ಲಿ ಬಡ್ಡಿ ದಂಧೆ ಕೋರರ ಕಿರುಕುಳಕ್ಕೆ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆನಿಸಿರುವ ಘಟನೆ ವರದಿಯಾಗಿದೆ.
ಬಡ್ಡಿ ದಂಧೆ ಕೊರರ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ಸುನಿಲ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಸುನಿಲ್ ಎನ್ನುವ ವ್ಯಕ್ತಿ ಇದೀಗ ಆತ್ಮಹತ್ಯೆಗೆ ಯತ್ನಿಸಿದ್ದಾನೆ. 30,000 ಪಡೆದು 2.50 ಲಕ್ಷ ರೂಪಾಯಿ ಬಡ್ಡಿ ಕಟ್ಟಿದರು ಕೂಡ ಸಂತು ಮತ್ತು ಶಿವು ಎನ್ನುವವರು ಕಿರುಕುಳ ನೀಡುತ್ತಿದ್ದರು.
ಮತ್ತೆ ಬಡ್ಡಿ ಕಟ್ಟುವಂತೆ ಸುನಿಲಗೆ ಸಂತು ಮತ್ತು ಶಿವು ಎನ್ನುವವರು ಕಿರುಕುಳ ನೀಡುತ್ತಿದ್ದರು.ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು ಸಹ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಮಾನಸಿಕವಾಗಿ ಬೆಸತ್ತು ವಿಷ ಸೇವಿಸಿ ಸುನಿಲ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಸ್ವಸ್ಥ ಸುನಿಲನ್ನು ತಕ್ಷಣ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹುಬ್ಬಳ್ಳಿ ಧಾರವಾಡ ಕುಂದಗೋಳ ಠಾಣೆಗೆ ಅಲೆದಾಡಿದರು ಕೂಡ ನ್ಯಾಯ ಸಿಕ್ಕಿರಲಿಲ್ಲ. ಬಡವರಿಗೆ ನ್ಯಾಯ ಕೊಡಲು ಆಗದಿದ್ದರೆ ಪೊಲೀಸರು ಯಾಕೆ ಬೇಕು? ಎಂದು ಪೊಲೀಸರ ವಿರುದ್ಧ ಆತ್ಮಹತ್ಯೆಗೆ ಯತ್ನಿsiದ ಸುನಿಲ್ ಪತ್ನಿ ಇದೀಗ ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರ ನಿರ್ಲಕ್ಷದ ವಿರುದ್ಧ ಪತ್ನಿ ದೇವಕ್ಕ ಕಿಡಿ ಕಾರಿದ್ದಾರೆ.