ಚೈನ್ನೈ : ತಮಿಳುನಾಡಿನಲ್ಲಿ ಸರ್ಕಾರ ರಚನೆ ಮಾಡಲು ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಕಸರತ್ತು ನಡೆಸಿದ್ದು, ಇದೀಗ ವಿಜಯ ಅವರು ಎಡಪಕ್ಷಗಳ ಮನವೊಲಿಸುವಲ್ಲಿ ಸಕ್ಸಸ್ ಆಗಿದ್ದಾರೆ, ವಿಜಯ ಪಟ್ಟಾಭಿಷೇಕಕ್ಕೆ ಇನ್ನೊಂದೇ ಹೆಜ್ಜೆ ಬಾಕಿ ಇದ್ದು, ಇದೀಗ ಎಡ ಪಕ್ಷಗಳು ಅಧಿಕೃತವಾಗಿ ವಿಜಯ ನೇತೃತ್ವದ ಟಿ ವಿ ಕೆ ಪಕ್ಷಕ್ಕೆ ಬೆಂಬಲ ಘೋಷಣೆ ಮಾಡಿವೆ ಹಾಗಾಗಿ ನಟ ವಿಜಯ್ ತಮಿಳುನಾಡಲ್ಲಿ ಸರ್ಕಾರ ರಚನೆ ಮಾಡುವುದು ನಿಶ್ಚಿತ ಎಂದೇ ಹೇಳಲಾಗಿದೆ.
ಎಲ್ಲವು ಅಂದುಕೊಂಡಂತೆ ಆದರೆ ನಾಳೆ ಅಥವಾ ನಾಡಿದ್ದು ತಮಿಳುನಾಡಿನ ನೂತನ ಮುಖ್ಯಮಂತ್ರಿ ಆಗಿ ವಿಜಯ್ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ತಮಿಳುನಾಡಿನಲ್ಲಿ ವಿಜಯ್ ಸರ್ಕಾರ ರಚಿಸುವುದು ಬಹುತೇಕ ಫಿಕ್ಸ್ ಎಂಬಂತಾಗಿದೆ. 234 ಕ್ಷೇತ್ರಗಳ ಪೈಕಿ 108 ಕ್ಷೇತ್ರಗಳಲ್ಲಿ ಟಿವಿಕೆ ಪಕ್ಷ ಗೆದ್ದಿದ್ದು ಎರಡು ಕ್ಷೇತ್ರಗಳಲ್ಲಿ ವಿಜಯ್ ಗೆಲುವು ಸಾಧಿಸಿದ್ದಾರೆ.
ಶಾಸಕರ ಎಣಿಕೆ ಸಮಯದಲ್ಲಿ ಒಂದು ಕ್ಷೇತ್ರ ಮಾತ್ರ ಎಣಿಕೆ ಮಾಡಿದ್ದು,ಹಾಗಾಗಿ ಟಿ ವಿ ಕೆ ಸ್ಥಾನಗಳ ಸಂಖ್ಯೆ 107 ಕಾಂಗ್ರೆಸ್ ಸಂಖ್ಯೆ 5 ವಿಸಿಕೆ 2 ಸಿಪಿಐ 2 ಸಿಪಿಐ (M) 2 ಸ್ಥಾನ ಸೇರಿ ಒಟ್ಟು 118 ಸ್ಥಾನಗಳಾಗಿದ್ದು ಕೊನೆಗೂ ವಿಜಯ್ ಮ್ಯಾಜಿಕ್ ನಂಬರನ್ನು ಹೊಂದಿಸಿದ್ದಾರೆ. ಹಾಗಾಗಿ ಇಂದು ವಿಜಯ್ ಕೆಲವೇ ಕ್ಷಣಗಳಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಬಹುಮತ ಸಾಬೀತು ಪಡಿಸಲಿದ್ದಾರೆ ಎಂದು ಹೇಳಲಾಗುತ್ತದೆ.






