ತಮಿಳುನಾಡು : ತಮಿಳುನಾಡಲ್ಲಿ ಸರ್ಕಾರ ರಚನೆ ಮಾಡಲು ದಳಪತಿ ವಿಜಯ್ ನೇತ್ರತ್ವದ ಟಿವಿಕೆ ಪಕ್ಷ ಕಸರತ್ತು ನಡೆಸುತ್ತಿದೆ. ಇದರ ಬೆನ್ನಲ್ಲೇ ಎಡಪಕ್ಷಗಳು ಹಾಗೂ ವಿಸಿಕೆ ಅಧಿಕೃತವಾಗಿ ಟಿವಿಕೆ ಪಕ್ಷಕ್ಕೆ ಬೆಂಬಲ ನೀಡಿದ್ದು, ಈ ಒಂದು ಪಕ್ಷಗಳ ಬೆಂಬಲದಿಂದ ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರ ರಚನೆ ಮಾಡುವುದು ಬಹುತೇಕ ಫಿಕ್ಸ್ ಎಂದೇ ಇದೀಗ ಹೇಳಲಾಗುತ್ತಿದೆ.
ಹೌದು ಇಂದು 3ನೇ ಬಾರಿಗೆ ರಾಜ್ಯಪಾಲರ ಭೇಟಿಯಾಗಲಿರುವ ಟಿವಿಕೆ ಸಂಸ್ಥಾಪಕ ವಿಜಯ್. 118 ಶಾಸಕರ ಸಹಿ ಉಳ್ಳ ಬೆಂಬಲ ಪತ್ರ ರಾಜಪಾಲರಿಗೆ ಸಲ್ಲಿಸಲಿದ್ದಾರೆ. ಈಗಾಗಲೇ ರಾಜ್ಯಪಾಲರ ಭೇಟಿಗೆ ಸಮಯ ಕೋರಿದ್ದಾರೆ. ಅಲ್ಲದೇ ವಿಜಯ್ ಗೆ ಕಾಂಗ್ರೆಸ್ ಬೆಂಬಲ ಘೋಷಿಸಿದೆ. ಎಡಪಕ್ಷಗಳು ವಿಸಿಕೆ ಬೆಂಬಲದೊಂದಿಗೆ ಟಿವಿಕೆ ಸರ್ಕಾರ ರಚನೆ ಬಹುತೇಕ ಫಿಕ್ಸ್ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಂಜೆ 4:30ಕ್ಕೆ ಎಡ ಪಕ್ಷಗಳು ಹಾಗೂ ವಿಸಿಕೆ ಅಧಿಕೃತ ನಿರ್ಧಾರ ಪ್ರಕಟಿಸಲಿದೆ.








