ಬೆಂಗಳೂರು : ಬೆಂಗಳೂರಿನಲ್ಲಿ ಕುಡಿದ ನಶೆಯಲ್ಲಿ ವ್ಯಕ್ತಿಗೆ ಕಾರ್ ಶೋರೂಮ್ ಸಿಬ್ಬಂದಿಗಳು ಕಾರನ್ನು ಟೆಸ್ಟ್ ಡ್ರೈವ್ ಮಾಡಲು ಕೊಟ್ಟಿದ್ದಾರೆ. ಈ ವೇಳೆ ಕುಡಿದ ಅಮಲಿನಲ್ಲಿ ಸುಮಾರು ನಾಲ್ಕು ವಾಹನಗಳಿಗೆ ಗುದ್ದಿ ವ್ಯಕ್ತಿ ಅಪಘಾತ ಮಾಡಿದ್ದಾನೆ.
ಮಹಿಂದ್ರಾ ಶೋರೂಮ್ ಸಿಬ್ಬಂದಿ ಎಡವಟ್ಟಿನಿಂದ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಅಭಿಲಾಶ್ ಎನ್ನುವ ವ್ಯಕ್ತಿ ಕುಡಿದ ಅಮಲಿನಲ್ಲಿ ನಾಲ್ಕೈದು ವಾಹನಗಳಿಗೆ ಗುದ್ದಿದ್ದಾನೆ ಏಪ್ರಿಲ್ 12ರಂದು ಬೆಂಗಳೂರಿನ ಮಹದೇವಪುರದಲ್ಲಿ ಈ ಒಂದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕುಡಿದ ನಶೆಯಲ್ಲಿ ಅಭಿಲಾಷ್ ನಾಲ್ಕು ವಾಹನಗಳಿಗೆ ಗುದ್ದಿ ಜಖಂಗೊಳಿಸಿದ್ದಾನೆ. ಕಾರು ಗುದ್ದಿದ ರಭಸಕ್ಕೆ ರಮೇಶ್ ಎಂಬುವರ ಕಾಲು ಸಹ ಮುರಿತವಾಗಿದೆ. ಘಟನೆ ನಡೆದ ಸ್ಥಳದಲ್ಲಿ ಇದ್ದಂತಹ ಕೆಲವು ವ್ಯಕ್ತಿಗಳು ಅಭಿಲಾಶ್ ನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದು ಮಾದೇವಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








