ಬಳ್ಳಾರಿ : ವಿವಾಹಿತ ಮಹಿಳೆಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಯುವಕನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಮಹಿಳೆ ಮತ್ತು ಆಕೆಯ ಪತಿ ಮತ್ತು ಸಹೋದರನಿಂದ ಬಸವನಗೌಡನ ಎನ್ನುವ ಯುವಕನ ಭೀಕರ ಕೊಲೆಯಾಗಿದೆ. ಶ್ವೇತಾ ಆಕೆಯ ಪತಿ ದೊಡ್ಡ ಬಸವನಗೌಡ ಮತ್ತು ಸೋದರ ವಿಜಯ್ ನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. Nಜೂನ್ 7ರಂದು ರಾತ್ರಿ ಬಸವನಗೌಡನ ಕೊಲೆ ಮಾಡಿದ್ದಾರೆ. ಬಳಿಕ LLC ಕಾಲುವೆ ಹತ್ತಿರ ಶವಕ್ಕೆ ಬೆಂಕಿ ಹಚ್ಚಿದ್ದರು.
ಪ್ರಕರಣದ ದಾಖಲಿಸಿಕೊಂಡು ಸದ್ಯ ಮೋಕಾ ಪೋಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ಬಸವನಗೌಡ ಮದುವೆಯಾದ ಮಹಿಳೆ ಹಿಂದೆ ಬಿದ್ದಿರುವುದು ಪತ್ತೆಯಾಗಿದೆ. 2 ವರ್ಷದ ಹಿಂದೆ ಮದುವೆ ಒಂದರಲ್ಲಿ ಶ್ವೇತಗೆ ಬಸವನಗೌಡ ಪರಿಚಯವಾಗಿದ್ದ ಸಂಬಂಧದಲ್ಲಿ ಅತ್ತಿಗೆಯಾಗುವ ಶ್ವೇತಾಗೆ ಮೆಸೇಜ್ ಕಳುಹಿಸಿ ಬಸವನಗೌಡ ಕಿರುಕುಳ ನೀಡಿದ್ದಾನೆ. ಹಾಗಾಗಿ ಆಕೆ ಹಲವು ಬಾರಿ ಬುದ್ದಿವಾದ ಹೇಳಿದರೂ ಕೂಡ ಮಹಿಳೆಗೆ ಕಿರುಕುಳ ನೀಡಿದ್ದಾನೆ.
ಇದರಿಂದ ಬೇಸತ್ತು ಈ ವಿಚಾರ ಪತಿ ಮತ್ತು ಸಹೋದರನಿಗೆ ಶ್ವೇತಾ ತಿಳಿಸಿದ್ದಾಳೆ. ಬಳಿಕ 3 ಸೇರಿ ಬಸವನಗೌಡ ಕೊಲೆಗೆ ಸಂಚು ರೂಪಿಸಿದ್ದಾರೆ. ಜೂನ್ 7ರಂದು ಬಸವನ ಗೌಡಗೆ ಕರೆ ಮಾಡಿ ಬರುವಂತೆ ಶ್ವೇತ ಹೇಳಿದ್ದಾಳೆ. ಸ್ಥಳಕ್ಕೆ ಬಂದ ಬಸವನ ಗೌಡನ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾರೆ. ಬಳಿಕ ನಿರ್ಜನ ಪ್ರದೇಶದಲ್ಲಿ ಶವಕ್ಕೆ ಬೆಂಕಿ ಹಚ್ಚಿದ್ದಾರೆ ಅರೇಬೆಂದ ಸ್ಥಿತಿಯಲ್ಲಿದ್ದ ಶವ ಪತ್ತೆಯಾಗಿದೆ. ಈ ಬಗ್ಗೆ ಕೇಸ್ ದಾಖಲಾಗಿತ್ತು. ಪೊಲೀಸನಿಗೆ ತನಿಖೆ ವೇಳೆ ಮೂವರು ಕೃತ್ಯ ಎಸಗಿರುವುದು ಪತ್ತೆಯಾಗಿದೆ. ಸದ್ಯ ಮೂವರನ್ನು ಮೋಕಾ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.








