ನವದೆಹಲಿ: ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ICAI) ಗುರುವಾರ ಪ್ರಕಟಿಸಿರುವ ಸಿಎ ಫೈನಲ್ ಮೇ 2026ರ ಪರೀಕ್ಷಾ ಫಲಿತಾಂಶದಲ್ಲಿ ಪಟಿಯಾಲದ ನೂರ್ ಸಿಂಗ್ಲಾ ಅವರು ಇಡೀ ದೇಶಕ್ಕೇ ಪ್ರಥಮ ರ‍್ಯಾಂಕ್ (AIR 1) ಪಡೆದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ನೂರ್ ಸಿಂಗ್ಲಾ ಅವರು ಒಟ್ಟು 600 ಅಂಕಗಳಿಗೆ 499 ಅಂಕಗಳನ್ನು (ಶೇಕಡಾ 83.17) ಗಳಿಸುವ ಮೂಲಕ ಅಗ್ರಸ್ಥಾನಕ್ಕೇರಿದ್ದಾರೆ. ಹೌರಾದ ರಿತಿಜ್ ಸರಾಫ್ 475 ಅಂಕಗಳೊಂದಿಗೆ (ಶೇಕಡಾ 79.17) ದ್ವಿತೀಯ ರ‍್ಯಾಂಕ್ ಪಡೆದರೆ, ಡೊಂಬಿವ್ಲಿಯ (ಪೂರ್ವ) ಸೋಹನ್ ಅನಿಲ್ ಮಾಂಜ್ರೇಕರ್ 473 ಅಂಕಗಳನ್ನು (ಶೇಕಡಾ 78.83) ಪಡೆದು ತೃತೀಯ ರ‍್ಯಾಂಕ್‌ಗೆ ಭಾಜನರಾಗಿದ್ದಾರೆ.
7,931 ಅಭ್ಯರ್ಥಿಗಳು ಇನ್ನು ಮುಂದೆ ಚಾರ್ಟರ್ಡ್ ಅಕೌಂಟೆಂಟ್ಸ್!
ಐಸಿಎಐ ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿ ಪ್ರಕಾರ, ಈ ಬಾರಿಯ ಕಠಿಣ ಪರೀಕ್ಷೆಯಲ್ಲಿ ದೇಶಾದ್ಯಂತ ಒಟ್ಟು 7,931 ಅಭ್ಯರ್ಥಿಗಳು ಯಶಸ್ವಿಯಾಗಿ ತೇರ್ಗಡೆ ಹೊಂದುವ ಮೂಲಕ ‘ಚಾರ್ಟರ್ಡ್ ಅಕೌಂಟೆಂಟ್’ (CA) ಪದವಿಗೆ ಅರ್ಹತೆ ಪಡೆದಿದ್ದಾರೆ.
ಗ್ರೂಪ್‌ವಾರು ತೇರ್ಗಡೆ ಶೇಕಡಾವಾರು ವಿವರ ಇಲ್ಲಿದೆ:








