ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಹೈಕೋರ್ಟ್ ನಲ್ಲಿ ನಟ ದರ್ಶನ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ಮುಂದೂಡಿ ಆದೇಶ ಹೊರಡಿಸಿದರು.
ವಿಚಾರಣೆ ಸಂದರ್ಭದಲ್ಲಿ ಈಗಾಗಲೇ ನಟ ದರ್ಶನ್ ಪರ ವಕೀಲ ಸಿ ವಿ ನಾಗೇಶ್ ಅವರು ನಿನ್ನೆ ಸುದೀರ್ಘ ವಾದಂತಹ ವಾದ ಮಂಡನೆ ಮಾಡಿದ್ದರು. ನಿನ್ನೆ ನ್ಯಾಯಾಧೀಶರಾದಂತಹ ವಿಶ್ವಜಿತ್ ಶೆಟ್ಟಿ ಅವರು ವಿಚಾರಣೆಯನ್ನು ನಾಳೆಗೆ ಮುಂದೂಡಿ ಆದೇಶಿಸಿದ್ದರು. ಇಂದು ಕೂಡ ವಿಚಾರಣೆ ನಡೆಸಿದ ಅವರು ಡಿಸೆಂಬರ್ 3ಕ್ಕೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿ ಆದೇಶಿಸಿದರು.
ಈ ಸಂದರ್ಭದಲ್ಲಿ ಆರೋಪಿ ನಾಗರಾಜು ಪರ ವಕೀಲರ ವಾದ ಮಂಡನೆ ಅಂತ್ಯವಾಯಿತು. ಹಾಗಾಗಿ ವಿಚಾರಣೆ ಡಿಸೆಂಬರ್ 3ಕ್ಕೆ ಹೈಕೋರ್ಟ್ ಮುಂದೂಡಿತು. ಇನ್ನೂ ಪವಿತ್ರಗೌಡ ಸೇರಿದಂತೆ ಉಳಿದವರ ಪರ ವಾದ ಮಂಡನೆ ಬಾಕಿ ಇದ್ದು, ಡಿಸೆಂಬರ್ 3ರಂದು ಸರ್ಕಾರದ ಪರವಾಗಿ ಎಸ್.ಪಿ.ಪಿ ವಾದಮಂಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.