Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

108 ಅರೋಗ್ಯ ಕವಚ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರ ಸಿಎಂ ಸಿದ್ಧರಾಮಯ್ಯ ಉದ್ಘಾಟನೆ

ಮರಣಕ್ಕೂ 24 ಗಂಟೆಗಳ ಮುನ್ನ ಕಾಣಿಸಿಕೊಳ್ಳುವ 3 ಪ್ರಮುಖ ಲಕ್ಷಣಗಳಿವು

BREAKING : ಬಿಟ್ ಕಾಯಿನ್ ಬಹುಕೋಟಿ ಹಗರಣ ಕೇಸ್ : ಮೂವರು ಆರೋಪಿಗಳಿಂದ ಲಕ್ಷಾಂತರ ಮೌಲ್ಯದ ಬಿಟ್ ಕಾಯಿನ್ ವಶಕ್ಕೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ಬಿಸಿ ನೀರಿಗಾಗಿ `ಹೀಟಿಂಗ್ ರಾಡ್’ ಬಳಸುವವರೇ ಎಚ್ಚರ : ಕರೆಂಟ್ ಶಾಕ್ ನಿಂದ ಮಹಿಳೆ ಸಾವು.!
KARNATAKA

ALERT : ಬಿಸಿ ನೀರಿಗಾಗಿ `ಹೀಟಿಂಗ್ ರಾಡ್’ ಬಳಸುವವರೇ ಎಚ್ಚರ : ಕರೆಂಟ್ ಶಾಕ್ ನಿಂದ ಮಹಿಳೆ ಸಾವು.!

By kannadanewsnow57

ಧಾರವಾಡ: ಮನೆಯಲ್ಲಿ ನೀರು ಕಾಯಿಸಲು ಬಳಸುವ ಎಲೆಕ್ಟ್ರಿಕ್ ಹೀಟಿಂಗ್ ಸ್ಟಿಕ್ (ಇಮ್ಮರ್ಶನ್ ರಾಡ್) ಮಹಿಳೆಯೊಬ್ಬಳ ಪ್ರಾಣವನ್ನೇ ಬಲಿಪಡೆದ ಘಟನೆ ಜಿಲ್ಲೆಯ ದೇವಗಿರಿಯ ಹತ್ತಿರದ ದೇವರಹುಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು 25 ವರ್ಷದ ನಿವೇದಿತಾ ಎಂದು ಗುರುತಿಸಲಾಗಿದೆ. ಪ್ರತಿದಿನದಂತೆ ನಿವೇದಿತಾ ಸ್ನಾನಕ್ಕಾಗಿ ಬಕೆಟ್‌ನಲ್ಲಿ ನೀರು ಕಾಯಿಸಲು ಇಮ್ಮರ್ಶನ್ ರಾಡ್ ಹಾಕಿದ್ದರು. ನೀರು ಕಾದ ನಂತರ, ಸ್ವಿಚ್ ಆಫ್ ಮಾಡದೆಯೇ ಅಥವಾ ಮುನ್ನೆಚ್ಚರಿಕೆ ವಹಿಸದೆಯೇ ರಾಡ್ ಹೊರತೆಗೆಯಲು ಹೋದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಬಕೆಟ್‌ ನಲ್ಲಿದ್ದ ವಿದ್ಯುತ್ ಪ್ರವಾಹವು ನಿವೇದಿತಾ ಅವರ ದೇಹಕ್ಕೆ ತಗುಲಿದ್ದು, ತೀವ್ರವಾಗಿ ಶಾಕ್ ಹೊಡೆದ ರಭಸಕ್ಕೆ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಕುಟುಂಬಸ್ಥರು ಮತ್ತು ನೆರೆಹೊರೆಯವರು ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಸಹ, ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.

ಮಹಿಳೆ ಅಕಾಲಿಕ ಮರಣಕ್ಕೀಡಾಗಿದ್ದು ದೇವರಹುಬ್ಬಳ್ಳಿ ಗ್ರಾಮದಲ್ಲಿ ಮೌನ ಆವರಿಸುವಂತೆ ಮಾಡಿದೆ. ಮಗಳ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೀಟಿಂಗ್ ರಾಡ್ ಬಳಸುವಾಗ ಈ ಎಚ್ಚರಿಕೆ ಇರಲಿ:
ಸಾಮಾನ್ಯವಾಗಿ ಚಳಿಗಾಲ ಮತ್ತು ಮಳೆಗಾಲದಲ್ಲಿ ಈ ಸಾಧನವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಸಣ್ಣ ನಿರ್ಲಕ್ಷ್ಯವೂ ಅಪಾಯಕಾರಿ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಕೆಳಗಿನ ಕ್ರಮಗಳನ್ನು ಪಾಲಿಸಿ:

ಪ್ಲಾಸ್ಟಿಕ್ ಬಕೆಟ್ ಬಳಸಿ: ನೀರು ಕಾಯಿಸುವಾಗ ಲೋಹದ (ಸ್ಟೀಲ್ ಅಥವಾ ಅಲ್ಯೂಮಿನಿಯಂ) ಬಕೆಟ್ ಬಳಸಬೇಡಿ, ಪ್ಲಾಸ್ಟಿಕ್ ಬಕೆಟ್ ಮಾತ್ರ ಬಳಸಿ.

ಸ್ವಿಚ್ ಆಫ್ ಮಾಡುವುದು ಕಡ್ಡಾಯ: ನೀರು ಕಾದ ಮೇಲೆ ಮೊದಲು ಪ್ಲಗ್ ಪಾಯಿಂಟ್‌ನಿಂದ ಸ್ವಿಚ್ ಆಫ್ ಮಾಡಿ, ವೈರ್ ಬೇರ್ಪಡಿಸಿ. ಆನಂತರವೇ ರಾಡ್ ಅನ್ನು ಹೊರತೆಗೆಯಿರಿ.

ವೈರ್ ಪರೀಕ್ಷಿಸಿ: ಕತ್ತರಿಸಿದ ಅಥವಾ ಸುಟ್ಟ ಹಳೆಯ ವೈರ್ ಇರುವ ರಾಡ್‌ಗಳನ್ನು ಬಳಸಬೇಡಿ.

ನೀರಿನ ಸಂಪರ್ಕ: ರಾಡ್ ನೀರಿನಲ್ಲಿರುವಾಗ ಬಕೆಟ್ ಒಳಗೆ ಕೈ ಹಾಕಿ ಬಿಸಿ ನೋಡುವ ಸಾಹಸಕ್ಕೆ ಹೋಗಬೇಡಿ.

ಒಂದು ಕ್ಷಣದ ಅಜಾಗರೂಕತೆ ಇಡೀ ಕುಟುಂಬವನ್ನೇ ಸಂಕಷ್ಟಕ್ಕೆ ತಳ್ಳಬಹುದು. ವಿದ್ಯುತ್ ಉಪಕರಣಗಳ ಬಳಕೆಯಲ್ಲಿ ಸದಾ ಜಾಗೃತರಾಗಿರಿ.

ALERT: Those who use `heating rods' for hot water beware: Woman dies from electric shock!
Share. Facebook Twitter LinkedIn WhatsApp Email

Related Posts

108 ಅರೋಗ್ಯ ಕವಚ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರ ಸಿಎಂ ಸಿದ್ಧರಾಮಯ್ಯ ಉದ್ಘಾಟನೆ

2 Mins Read

BREAKING : ಬಿಟ್ ಕಾಯಿನ್ ಬಹುಕೋಟಿ ಹಗರಣ ಕೇಸ್ : ಮೂವರು ಆರೋಪಿಗಳಿಂದ ಲಕ್ಷಾಂತರ ಮೌಲ್ಯದ ಬಿಟ್ ಕಾಯಿನ್ ವಶಕ್ಕೆ!

1 Min Read

ವೃದ್ದೆಯನ್ನ ಡಿಜಿಟಲ್ ಅರೆಸ್ಟ್ ಮಾಡಿ 24 ಕೋಟಿ ವಂಚನೆ ಕೇಸ್ : ಆರೋಪಿಗಳ ಹಿನ್ನೆಲೆ ತಿಳಿದು ಪೊಲೀಸರೆ ಶಾಕ್!

2 Mins Read
Recent News

108 ಅರೋಗ್ಯ ಕವಚ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರ ಸಿಎಂ ಸಿದ್ಧರಾಮಯ್ಯ ಉದ್ಘಾಟನೆ

ಮರಣಕ್ಕೂ 24 ಗಂಟೆಗಳ ಮುನ್ನ ಕಾಣಿಸಿಕೊಳ್ಳುವ 3 ಪ್ರಮುಖ ಲಕ್ಷಣಗಳಿವು

BREAKING : ಬಿಟ್ ಕಾಯಿನ್ ಬಹುಕೋಟಿ ಹಗರಣ ಕೇಸ್ : ಮೂವರು ಆರೋಪಿಗಳಿಂದ ಲಕ್ಷಾಂತರ ಮೌಲ್ಯದ ಬಿಟ್ ಕಾಯಿನ್ ವಶಕ್ಕೆ!

ವೃದ್ದೆಯನ್ನ ಡಿಜಿಟಲ್ ಅರೆಸ್ಟ್ ಮಾಡಿ 24 ಕೋಟಿ ವಂಚನೆ ಕೇಸ್ : ಆರೋಪಿಗಳ ಹಿನ್ನೆಲೆ ತಿಳಿದು ಪೊಲೀಸರೆ ಶಾಕ್!

State News
KARNATAKA

108 ಅರೋಗ್ಯ ಕವಚ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರ ಸಿಎಂ ಸಿದ್ಧರಾಮಯ್ಯ ಉದ್ಘಾಟನೆ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಇಂದಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆ್ಯಂಬುಲೆನ್ಸ್ ಸೇವೆ ಲಭ್ಯವಾಗಲಿದ್ದು, ಈ ಸೇವೆ ಪರಿಣಾಮಕಾರಿಯಾಗಿ ಜನರಿಗೆ ತಲುಪಬೇಕು…

BREAKING : ಬಿಟ್ ಕಾಯಿನ್ ಬಹುಕೋಟಿ ಹಗರಣ ಕೇಸ್ : ಮೂವರು ಆರೋಪಿಗಳಿಂದ ಲಕ್ಷಾಂತರ ಮೌಲ್ಯದ ಬಿಟ್ ಕಾಯಿನ್ ವಶಕ್ಕೆ!

ವೃದ್ದೆಯನ್ನ ಡಿಜಿಟಲ್ ಅರೆಸ್ಟ್ ಮಾಡಿ 24 ಕೋಟಿ ವಂಚನೆ ಕೇಸ್ : ಆರೋಪಿಗಳ ಹಿನ್ನೆಲೆ ತಿಳಿದು ಪೊಲೀಸರೆ ಶಾಕ್!

ವಿಶೇಷಚೇತನರ ಅಗತ್ಯ ಸಾಧನಗಳ ಮೇಲಿನ GST ಕೈಬಿಡಿ: ಪತ್ರದಲ್ಲಿ ನಿರ್ಮಲಾ ಸೀತಾರಾಮನ್ ಆಗ್ರಹಿಸಿದ ಸಚಿವ ಸಂತೋಷ್ ಲಾಡ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.