Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬರೋಬ್ಬರಿ 195 ಬಾರಿ ಪ್ರವಾಸ! ರಾಜ್ಯದಲ್ಲೇ ‘ನಂ.1 ಜನಸ್ನೇಹಿ ಸಚಿವ ರಾಮಲಿಂಗಾರೆಡ್ಡಿ’! | Minister Ramalingareddy

BREAKING: ಮಂಡ್ಯದಲ್ಲಿ ಕೆಸ್ತೂರು ಪೊಲೀಸರ ಭರ್ಜರಿ ಬೇಟೆ: ಕಾರಿನಲ್ಲಿ ಸಾಗಿಸುತ್ತಿದ್ದ ಬರೋಬ್ಬರಿ 100 ಕೆಜಿ ಗಾಂಜಾ ವಶ!

BREAKING: ಆಫ್ಘಾನ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾಗೆ ಭರ್ಜರಿ ಗೆಲುವು | IND vs AFG

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿನ ಜನತೆಗೆ ಗುಡ್ ನ್ಯೂಸ್: ಕೆ.ಸಿ ಜನರಲ್ ಮಾದರಿಯಲ್ಲೇ ಇನ್ನುಳಿದ ಆಸ್ಪತ್ರೆಗಳಲ್ಲೂ ರೋಗ ನಿರ್ಣಯ ಸೇವೆ ಲಭ್ಯ.!
KARNATAKA

ಬೆಂಗಳೂರಿನ ಜನತೆಗೆ ಗುಡ್ ನ್ಯೂಸ್: ಕೆ.ಸಿ ಜನರಲ್ ಮಾದರಿಯಲ್ಲೇ ಇನ್ನುಳಿದ ಆಸ್ಪತ್ರೆಗಳಲ್ಲೂ ರೋಗ ನಿರ್ಣಯ ಸೇವೆ ಲಭ್ಯ.!

By kannadanewsnow57

ಬೆಂಗಳೂರು: ರಾಜಧಾನಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ರೋಗ ನಿರ್ಣಯ ಸೇವೆಗಳನ್ನು ಮತ್ತಷ್ಟು ಬಲಪಡಿಸಲು ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ‘ಹಿಂದ್‌ಲ್ಯಾಬ್ಸ್’ ಮಾದರಿಯನ್ನು ಈಗ ನಗರದ ಇತರ ಪ್ರಮುಖ ಆಸ್ಪತ್ರೆಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ.

ಪ್ರಸ್ತುತ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಎಚ್‌ಎಲ್‌ಎಲ್ ಲೈಫ್‌ಕೇರ್ ಲಿಮಿಟೆಡ್ (ಹಿಂದ್‌ಲ್ಯಾಬ್ಸ್) ಮೂಲಕ ನೀಡಲಾಗುತ್ತಿರುವ ರೋಗ ನಿರ್ಣಯ ಸೇವೆಗಳನ್ನು ಈಗ ಸರ್ ಸಿ.ವಿ. ರಾಮನ್ ಜನರಲ್ ಆಸ್ಪತ್ರೆ ಮತ್ತು ಜಯನಗರ ಜನರಲ್ ಆಸ್ಪತ್ರೆಗಳಿಗೂ ವಿಸ್ತರಿಸಲಾಗುತ್ತಿದೆ.

ವಾಕ್-ಇನ್ ರೋಗಿಗಳಿಗೆ ಅನುಕೂಲ: ಈ ಮೊದಲು ಪ್ರಯೋಗಾಲಯ ಸೇವೆಗಳು ಕೇವಲ ಒಳರೋಗಿಗಳಿಗೆ ಮತ್ತು ಆಯ್ದ ಹೊರರೋಗಿಗಳಿಗೆ ಮಾತ್ರ ಸೀಮಿತವಾಗಿದ್ದವು. ಇನ್ನು ಮುಂದೆ ವಾಕ್-ಇನ್ (ನೇರವಾಗಿ ಬರುವ) ರೋಗಿಗಳಿಗೂ ಸಿ.ಜಿ.ಎಚ್.ಎಸ್ (CGHS) ದರಗಳಲ್ಲಿ ಗುಣಮಟ್ಟದ ಪ್ರಯೋಗಾಲಯ ಸೇವೆಗಳು ದೊರೆಯಲಿವೆ.

ಮನೆ ಬಾಗಿಲಿಗೆ ರೋಗ ನಿರ್ಣಯ ಸೇವೆ: ಆಸ್ಪತ್ರೆಗೆ ಬರಲು ಸಾಧ್ಯವಾಗದ ಹಿರಿಯ ನಾಗರಿಕರು ಮತ್ತು ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗಾಗಿ ‘ಮನೆ ಮಾದರಿ ಸಂಗ್ರಹ’ (Home Sample Collection) ಯೋಜನೆಯನ್ನು ಆರಂಭಿಸಲಾಗುತ್ತಿದೆ. ತರಬೇತಿ ಪಡೆದ ಸಿಬ್ಬಂದಿಗಳು ಮನೆಗೆ ಬಂದು ಮಾದರಿಗಳನ್ನು ಸಂಗ್ರಹಿಸಲಿದ್ದು, ಇದಕ್ಕೆ ನಿಗದಿತ ಶುಲ್ಕವಿರಲಿದೆ.

ಹೈ-ಎಂಡ್ ಪರೀಕ್ಷೆಗಳಿಗೆ ಹಬ್ ಸ್ಥಾಪನೆ: ದುಬಾರಿ ಮತ್ತು ಅತ್ಯಾಧುನಿಕ ರೋಗ ನಿರ್ಣಯ ಪರೀಕ್ಷೆಗಳಿಗಾಗಿ ಖಾಸಗಿ ಪ್ರಯೋಗಾಲಯಗಳನ್ನು ಅವಲಂಬಿಸುವುದನ್ನು ತಪ್ಪಿಸಲು, ಬಿಎಂಸಿಆರ್‌ಐ (BMCRI) / ವಿಕ್ಟೋರಿಯಾ ಆಸ್ಪತ್ರೆಯನ್ನು ‘ಹಬ್ ಪ್ರಯೋಗಾಲಯ’ವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

ಎಪಿಎಲ್ (APL) ವರ್ಗದವರಿಗೂ ಸೇವೆ: ಬಡತನ ರೇಖೆಗಿಂತ ಮೇಲಿರುವ (APL) ಕುಟುಂಬದವರಿಗೂ ಸರ್ಕಾರದ ಪ್ರಯೋಗಾಲಯಗಳ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ರಿಯಾಯಿತಿ ದರದಲ್ಲಿ ಸೇವೆ ನೀಡಲು ಅನುಮತಿ ನೀಡಲಾಗಿದೆ.

ಗುಣಮಟ್ಟಕ್ಕೆ ಆದ್ಯತೆ:
ಈ ಎಲ್ಲಾ ಪ್ರಯೋಗಾಲಯಗಳು ಕಡ್ಡಾಯವಾಗಿ ರಾಷ್ಟ್ರೀಯ ಮಾನ್ಯತೆ ಮಂಡಳಿ (NABL) ಇಂದ ಮಾನ್ಯತೆ ಪಡೆಯಬೇಕು ಎಂದು ಸರ್ಕಾರ ಸೂಚಿಸಿದೆ. ಇದರಿಂದ ಸಾರ್ವಜನಿಕರಿಗೆ ನಿಖರ ಮತ್ತು ಗುಣಮಟ್ಟದ ವರದಿಗಳು ಸಿಗಲಿವೆ.

ಈ ಕ್ರಮದಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಖಾಸಗಿ ಲ್ಯಾಬ್‌ಗಳ ದುಬಾರಿ ವೆಚ್ಚ ತಪ್ಪಲಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲೇ ಕೈಗೆಟಕುವ ದರದಲ್ಲಿ ರೋಗ ನಿರ್ಣಯ ಪರೀಕ್ಷೆಗಳು ಲಭ್ಯವಾಗಲಿವೆ.

Good news for the people of Bengaluru: Diagnostic services are now available in other hospitals similar to KC General!
Share. Facebook Twitter LinkedIn WhatsApp Email

Related Posts

ಬರೋಬ್ಬರಿ 195 ಬಾರಿ ಪ್ರವಾಸ! ರಾಜ್ಯದಲ್ಲೇ ‘ನಂ.1 ಜನಸ್ನೇಹಿ ಸಚಿವ ರಾಮಲಿಂಗಾರೆಡ್ಡಿ’! | Minister Ramalingareddy

2 Mins Read

BREAKING: ಮಂಡ್ಯದಲ್ಲಿ ಕೆಸ್ತೂರು ಪೊಲೀಸರ ಭರ್ಜರಿ ಬೇಟೆ: ಕಾರಿನಲ್ಲಿ ಸಾಗಿಸುತ್ತಿದ್ದ ಬರೋಬ್ಬರಿ 100 ಕೆಜಿ ಗಾಂಜಾ ವಶ!

1 Min Read

BIG NEWS: ರಾಜ್ಯದ ‘KSRP’ಯಲ್ಲಿ ಹೆಚ್ಚಾದ ‘ಕುಡುಕ ಪೊಲೀಸ’ರ ಸಂಖ್ಯೆ; ಮದ್ಯ ವ್ಯಸನ ಮುಕ್ತ ಚಿಕಿತ್ಸೆ, ಕೌನ್ಸೆಲಿಂಗ್‌ಗೆ ಸರ್ಕಾರ ಆದೇಶ!

2 Mins Read
Recent News

ಬರೋಬ್ಬರಿ 195 ಬಾರಿ ಪ್ರವಾಸ! ರಾಜ್ಯದಲ್ಲೇ ‘ನಂ.1 ಜನಸ್ನೇಹಿ ಸಚಿವ ರಾಮಲಿಂಗಾರೆಡ್ಡಿ’! | Minister Ramalingareddy

BREAKING: ಮಂಡ್ಯದಲ್ಲಿ ಕೆಸ್ತೂರು ಪೊಲೀಸರ ಭರ್ಜರಿ ಬೇಟೆ: ಕಾರಿನಲ್ಲಿ ಸಾಗಿಸುತ್ತಿದ್ದ ಬರೋಬ್ಬರಿ 100 ಕೆಜಿ ಗಾಂಜಾ ವಶ!

BREAKING: ಆಫ್ಘಾನ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾಗೆ ಭರ್ಜರಿ ಗೆಲುವು | IND vs AFG

​ಇರಾನ್ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತ್ಯಕ್ರಿಯೆ: ಇರಾಕ್ ಮೂಲಕ ಸಾಗಲಿದೆ ಇತಿಹಾಸದ ಅತಿ ದೊಡ್ಡ ಶೋಕಯಾತ್ರೆ!

State News
KARNATAKA

ಬರೋಬ್ಬರಿ 195 ಬಾರಿ ಪ್ರವಾಸ! ರಾಜ್ಯದಲ್ಲೇ ‘ನಂ.1 ಜನಸ್ನೇಹಿ ಸಚಿವ ರಾಮಲಿಂಗಾರೆಡ್ಡಿ’! | Minister Ramalingareddy

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ರಾಜ್ಯದ ಹಿರಿಯ ಮುಖಂಡರು, ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರ ದಕ್ಷ ಕಾರ್ಯವೈಖರಿ ಮತ್ತು ಜನಸ್ನೇಹಿ…

BREAKING: ಮಂಡ್ಯದಲ್ಲಿ ಕೆಸ್ತೂರು ಪೊಲೀಸರ ಭರ್ಜರಿ ಬೇಟೆ: ಕಾರಿನಲ್ಲಿ ಸಾಗಿಸುತ್ತಿದ್ದ ಬರೋಬ್ಬರಿ 100 ಕೆಜಿ ಗಾಂಜಾ ವಶ!

BIG NEWS: ರಾಜ್ಯದ ‘KSRP’ಯಲ್ಲಿ ಹೆಚ್ಚಾದ ‘ಕುಡುಕ ಪೊಲೀಸ’ರ ಸಂಖ್ಯೆ; ಮದ್ಯ ವ್ಯಸನ ಮುಕ್ತ ಚಿಕಿತ್ಸೆ, ಕೌನ್ಸೆಲಿಂಗ್‌ಗೆ ಸರ್ಕಾರ ಆದೇಶ!

ಶೀಘ್ರವೇ ರಾಜ್ಯದ ಗ್ರಾಮೀಣ ಪತ್ರಕರ್ತರ ಬಸ್ ಪಾಸ್, ಮಾಧ್ಯಮ ಸಂಜೀವಿನಿ ಯೋಜನೆ ಜಾರಿಗೆ KUWJ ಆಗ್ರಹ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.