Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬರೋಬ್ಬರಿ 195 ಬಾರಿ ಪ್ರವಾಸ! ರಾಜ್ಯದಲ್ಲೇ ‘ನಂ.1 ಜನಸ್ನೇಹಿ ಸಚಿವ ರಾಮಲಿಂಗಾರೆಡ್ಡಿ’! | Minister Ramalingareddy

BREAKING: ಮಂಡ್ಯದಲ್ಲಿ ಕೆಸ್ತೂರು ಪೊಲೀಸರ ಭರ್ಜರಿ ಬೇಟೆ: ಕಾರಿನಲ್ಲಿ ಸಾಗಿಸುತ್ತಿದ್ದ ಬರೋಬ್ಬರಿ 100 ಕೆಜಿ ಗಾಂಜಾ ವಶ!

BREAKING: ಆಫ್ಘಾನ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾಗೆ ಭರ್ಜರಿ ಗೆಲುವು | IND vs AFG

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಮಂಡ್ಯದಲ್ಲಿ ಕೆಸ್ತೂರು ಪೊಲೀಸರ ಭರ್ಜರಿ ಬೇಟೆ: ಕಾರಿನಲ್ಲಿ ಸಾಗಿಸುತ್ತಿದ್ದ ಬರೋಬ್ಬರಿ 100 ಕೆಜಿ ಗಾಂಜಾ ವಶ!
KARNATAKA

BREAKING: ಮಂಡ್ಯದಲ್ಲಿ ಕೆಸ್ತೂರು ಪೊಲೀಸರ ಭರ್ಜರಿ ಬೇಟೆ: ಕಾರಿನಲ್ಲಿ ಸಾಗಿಸುತ್ತಿದ್ದ ಬರೋಬ್ಬರಿ 100 ಕೆಜಿ ಗಾಂಜಾ ವಶ!

By ವಸಂತ ಬಿ ಈಶ್ವರಗೆರೆ

ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಪೊಲೀಸರು ಬುಧವಾರ ರಾತ್ರಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 100 ಕೆಜಿ ತೂಕದ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ: ಕಾರು ಜಪ್ತಿ

ಒರಿಸ್ಸಾದಿಂದ ತುಮಕೂರು ಮಾರ್ಗವಾಗಿ ಮಂಡ್ಯ ಜಿಲ್ಲೆಗೆ ಕಾರೊಂದರಲ್ಲಿ ಅಪಾರ ಪ್ರಮಾಣದ ಗಾಂಜಾ ತರಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಮಾಹಿತಿಯನ್ನಾಧರಿಸಿ ತಕ್ಷಣ ಕಾರ್ಯಪ್ರವೃತ್ತರಾದ ಕೆಸ್ತೂರು ಪೊಲೀಸರು, ಗ್ರಾಮದ ಬಳಿ ಶಂಕಿತ ಕಾರನ್ನು ಅಡ್ಡಗಟ್ಟಿ ತೀವ್ರ ತಪಾಸಣೆ ನಡೆಸಿದ್ದಾರೆ. ಈ ವೇಳೆ ಕಾರಿನಲ್ಲಿ ಗಾಂಜಾ ಸೊಪ್ಪು ಇರುವುದು ಪತ್ತೆಯಾಗಿದ್ದು, ತಕ್ಷಣವೇ ಪೊಲೀಸರು ಗಾಂಜಾ ಸಹಿತ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ, ವಿಚಾರಣೆ ಚುರುಕು

ಬೃಹತ್ ಪ್ರಮಾಣದ ಗಾಂಜಾ ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಮಂಡ್ಯ ಎಸ್ಪಿ ಶೋಭಾ ರಾಣಿ, ಮಳವಳ್ಳಿ ಡಿವೈಎಸ್ಪಿ ಯಶವಂತ್ ಕುಮಾರ್, ಸಿಪಿಐ ನಾರಾಯಣಿ ಹಾಗೂ ಕೆಸ್ತೂರು ಪಿಎಸ್ಐ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿತು. ಸದ್ಯ ಪೊಲೀಸರು ಕಾರನ್ನು ವಶಪಡಿಸಿಕೊಂಡು, ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಈ ಗಾಂಜಾ ಸೊಪ್ಪನ್ನು ಯಾರು, ಎಲ್ಲಿಂದ, ಯಾರಿಗೆ ತಲುಪಿಸಲು ಕೊಂಡೊಯ್ಯುತ್ತಿದ್ದರು ಎಂಬ ಜಾಲದ ಸತ್ಯಾಸತ್ಯತೆ ಪೊಲೀಸರ ಸಂಪೂರ್ಣ ತನಿಖೆಯ ಬಳಿಕವಷ್ಟೇ ಬೆಳಕಿಗೆ ಬರಬೇಕಿದೆ.

ವರದಿ: ಗಿರೀಶ್ ರಾಜ್, ಮಂಡ್ಯ

ರಾಜ್ಯದ ‘232 ತಹಶೀಲ್ದಾರ್‌’ಗಳಿಗೆ ಗ್ರೇಡ್-1 ಹುದ್ದೆಗೆ ಬಡ್ತಿ ನೀಡಿ ಸರ್ಕಾರ ಆದೇಶ

‘ಸಾಗರ ತಹಶೀಲ್ದಾರ್ ಡಾ.ಪ್ರತಿಭಾ’ಗೆ ಗ್ರೇಡ್-2 ಹುದ್ದೆಯಿಂದ ಗ್ರೇಡ್-1 ಹುದ್ದೆಗೆ ಮುಂಬಡ್ತಿ ನೀಡಿ ಸರ್ಕಾರ ಆದೇಶ

Share. Facebook Twitter LinkedIn WhatsApp Email

Related Posts

ಬರೋಬ್ಬರಿ 195 ಬಾರಿ ಪ್ರವಾಸ! ರಾಜ್ಯದಲ್ಲೇ ‘ನಂ.1 ಜನಸ್ನೇಹಿ ಸಚಿವ ರಾಮಲಿಂಗಾರೆಡ್ಡಿ’! | Minister Ramalingareddy

2 Mins Read

BIG NEWS: ರಾಜ್ಯದ ‘KSRP’ಯಲ್ಲಿ ಹೆಚ್ಚಾದ ‘ಕುಡುಕ ಪೊಲೀಸ’ರ ಸಂಖ್ಯೆ; ಮದ್ಯ ವ್ಯಸನ ಮುಕ್ತ ಚಿಕಿತ್ಸೆ, ಕೌನ್ಸೆಲಿಂಗ್‌ಗೆ ಸರ್ಕಾರ ಆದೇಶ!

2 Mins Read

ಶೀಘ್ರವೇ ರಾಜ್ಯದ ಗ್ರಾಮೀಣ ಪತ್ರಕರ್ತರ ಬಸ್ ಪಾಸ್, ಮಾಧ್ಯಮ ಸಂಜೀವಿನಿ ಯೋಜನೆ ಜಾರಿಗೆ KUWJ ಆಗ್ರಹ

1 Min Read
Recent News

ಬರೋಬ್ಬರಿ 195 ಬಾರಿ ಪ್ರವಾಸ! ರಾಜ್ಯದಲ್ಲೇ ‘ನಂ.1 ಜನಸ್ನೇಹಿ ಸಚಿವ ರಾಮಲಿಂಗಾರೆಡ್ಡಿ’! | Minister Ramalingareddy

BREAKING: ಮಂಡ್ಯದಲ್ಲಿ ಕೆಸ್ತೂರು ಪೊಲೀಸರ ಭರ್ಜರಿ ಬೇಟೆ: ಕಾರಿನಲ್ಲಿ ಸಾಗಿಸುತ್ತಿದ್ದ ಬರೋಬ್ಬರಿ 100 ಕೆಜಿ ಗಾಂಜಾ ವಶ!

BREAKING: ಆಫ್ಘಾನ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾಗೆ ಭರ್ಜರಿ ಗೆಲುವು | IND vs AFG

​ಇರಾನ್ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತ್ಯಕ್ರಿಯೆ: ಇರಾಕ್ ಮೂಲಕ ಸಾಗಲಿದೆ ಇತಿಹಾಸದ ಅತಿ ದೊಡ್ಡ ಶೋಕಯಾತ್ರೆ!

State News
KARNATAKA

ಬರೋಬ್ಬರಿ 195 ಬಾರಿ ಪ್ರವಾಸ! ರಾಜ್ಯದಲ್ಲೇ ‘ನಂ.1 ಜನಸ್ನೇಹಿ ಸಚಿವ ರಾಮಲಿಂಗಾರೆಡ್ಡಿ’! | Minister Ramalingareddy

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ರಾಜ್ಯದ ಹಿರಿಯ ಮುಖಂಡರು, ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರ ದಕ್ಷ ಕಾರ್ಯವೈಖರಿ ಮತ್ತು ಜನಸ್ನೇಹಿ…

BREAKING: ಮಂಡ್ಯದಲ್ಲಿ ಕೆಸ್ತೂರು ಪೊಲೀಸರ ಭರ್ಜರಿ ಬೇಟೆ: ಕಾರಿನಲ್ಲಿ ಸಾಗಿಸುತ್ತಿದ್ದ ಬರೋಬ್ಬರಿ 100 ಕೆಜಿ ಗಾಂಜಾ ವಶ!

BIG NEWS: ರಾಜ್ಯದ ‘KSRP’ಯಲ್ಲಿ ಹೆಚ್ಚಾದ ‘ಕುಡುಕ ಪೊಲೀಸ’ರ ಸಂಖ್ಯೆ; ಮದ್ಯ ವ್ಯಸನ ಮುಕ್ತ ಚಿಕಿತ್ಸೆ, ಕೌನ್ಸೆಲಿಂಗ್‌ಗೆ ಸರ್ಕಾರ ಆದೇಶ!

ಶೀಘ್ರವೇ ರಾಜ್ಯದ ಗ್ರಾಮೀಣ ಪತ್ರಕರ್ತರ ಬಸ್ ಪಾಸ್, ಮಾಧ್ಯಮ ಸಂಜೀವಿನಿ ಯೋಜನೆ ಜಾರಿಗೆ KUWJ ಆಗ್ರಹ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.