ಹಾಸನ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ, ಪತಿ ಪತ್ನಿ ದೂರವಾಗಿದ್ದರು. ಈ ವೇಳೆ, ಪತಿ ಪತ್ನಿಯ ನಡುವೆ ಗಲಾಟೆ ನಡೆದು ವಿಕೋಪಕ್ಕೆ ತಿರುಗಿದಾಗ, ಪತಿಯಾದವನು ತನ್ನ ಸ್ನೇಹಿತನಿಗೆ ಸುಪಾರಿ ಕೊಟ್ಟು ತನ್ನ ಹೆಂಡತಿಯನ್ನೇ ಕೊಲ್ಲಿಸಿರುವ ಅಮಾನವೀಯ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಯಕಶೆಟ್ಟಿಹಳ್ಳಿಯಲ್ಲಿ ನಡೆದಿದೆ.
ಹೌದು ಪತಿ ಜಗದೀಶ್ ತನ್ನ ಸ್ನೇಹಿತ ರಾಜಶೇಖರನಿಗೆ ಪತ್ನಿ ಶೀಲಳನ್ನು ಕೊಲ್ಲುವಂತೆ ಸುಪಾರಿ ನೀಡಿದ್ದ. ಈ ಹಿನ್ನೆಲೆಯಲ್ಲಿ, ಕಳೆದ ಶನಿವಾರ ಮನೆಯ ಬಳಿ ಬಂದು ಪತಿ ಜಗದೀಶ್ ಜಗಳ ಮಾಡಿದ್ದ. ಸ್ನೇಹಿತನ ಮೂಲಕ ಜಗದೀಶ್ ಹೊರಗೆ ಕರೆಸಿದ್ದ. ಮನೆಯ ಮುಂದೆ ಬಟ್ಟೆಯಿಂದ ಕುತ್ತಿಗೆಗೆ ಬಿಗಿದು ಶೀಲಾಳನ್ನು ರಾಜಶೇಖರ್ ಎನ್ನುವ ಹತ್ಯೆಗೆದಿದ್ದಾನೆ. ನಂತರ ಕಲ್ಲುಕಟ್ಟಿ ಶವವನ್ನು ಪಕ್ಕದಲ್ಲಿರುವ ಹಳ್ಳಕ್ಕೆ ಎಸೆದಿದ್ದಾನೆ.
ಜಗದೀಶ್ ಸ್ನೇಹಿತನಿಂದಲೆ ಹಾಡು ಹಗಲೇ ಪತ್ನಿಯನ್ನು ಕೊಲೆ ಮಾಡಿರುವ ದೃಶ್ಯ ಇದೀಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೆಲ ವರ್ಷಗಳಿಂದ ಪತಿ ಜಗದೀಶ್ ಮತ್ತು ಕೊಲೆಯಾದ ಪತ್ನಿ ಶೀಲಾ ದೂರವಾಗಿದ್ದರು. ಅಲ್ಲದೆ ಪ್ರತ್ಯೇಕವಾಗಿ ವಾಸವಾಗಿದ್ದರು. ಇದಲ್ಲದೆ ತನ್ನ ತಾಯಿ ಕಾಣೆಯಾಗಿರುವುದರ ಕುರಿತಾಗಿ ಶೀಲಾ ಮಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
ಶನಿವಾರ ಕೊಲೆಯಾದ ನಂತರ ಭಾನುವಾರ ಶೀಲಾ ಪುತ್ರಿ, ತನ್ನ ತಾಯಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದಾಳೆ. ನಾಪತ್ತೆ ಕೇಸು ದಾಖಲಿಸಿಕೊಂಡ ಪೊಲೀಸರು ತನಿಖೆಯ ವೇಳೆ ಈ ಒಂದು ಕೊಲೆಯ ರಹಸ್ಯ ಬಯಲಾಗಿದೆ. ಹಂತಕ ರಾಜಶೇಖರ್ ಪತಿ ಜಗದೀಶನ್ನು ಇದೀಗ ಪೊಲೀಸರುಬಂಧಿಸಿದ್ದು, ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.