ತೆಲಂಗಾಣ : ತೆಲಂಗಾಣದಲ್ಲಿ ಹೊಸ ರಾಜಕೀಯ ಪಕ್ಷ ಘೋಷಣೆ ಆಗಿದ್ದು ಮಾಜಿ ಮುಖ್ಯಮಂತ್ರಿ ಕೆ ಸಿ ಆರ್ ಪುತ್ರಿ ಕೆ.ಕವಿತಾ ಅವರು ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ಹೊಸ ಪಕ್ಷಕ್ಕೆ ತೆಲಂಗಾಣ ರಾಷ್ಟ್ರ ಸೇನಾ (ಟಿಆರ್ಎಸ್) ಪಕ್ಷ ಎಂದು ಘೋಷಣೆ ಮಾಡಿದ್ದಾರೆ.
ತೆಲಂಗಾಣದ ಮಾಜಿ ಮುಖ್ಯಮಂತ್ರಿ ಚಂದ್ರಶೇಖರ ಪುತ್ರಿ ಕವಿತಾ ಅವರು ಇಂದು ಹೊಸ ಪಕ್ಷ ಘೋಷಣೆ ಮಾಡಿದರು ಮೇಡ್ಚಲ ಜಿಲ್ಲೆಯ ಮುನಿರಾಬಾದ್ ನಲ್ಲಿ ಬೃಹತ್ ಸಮಾವೇಶದಲ್ಲಿ ಹೊಸ ಪಕ್ಷ ಘೋಷಣೆ ಮಾಡಿದರು. ಮಾಜಿ ಎಂಎಲ್ಸಿ ತೆಲಂಗಾಣ ಜಾಗೃತಿ ಸಂಘಟನೆ ಅಧ್ಯಕ್ಷರಾಗಿರುವ ಕೆ ಕವಿತಾ ಅವರು ಸಾವಿರ ಜನರನ್ನು ಸೇರಿಸಿ ಹೊಸ ಪಕ್ಷದ ಹೆಸರು ಘೋಷಿಸಿದ್ದಾರೆ. ಸದ್ಯ ತೆಲಂಗಾಣ ಜಾಗೃತಿ ಸಂಘಟನೆ ಅಧ್ಯಕ್ಷರಾಗಿದ್ದಾರೆ.
ತಂದೆ ಕೆಸಿಆರ್ ಹಾಗೂ ಸೋದರ ಕೆಟಿ ರಾಮರಾವ್ಗೆ ಸೆಡ್ಡು ಹೊಡೆದು ಕವಿತಾ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ ದೆಹಲಿ ಅಬಕಾರಿ ನೀತಿ ಹಗರಣದ ಆರೋಪದ ಅಡಿ ಕವಿತಾ ಅವರು ಜೈಲು ಸೇರಿದ್ದರು. ಅಬಕಾರಿ ಹಗರಣದಿಂದ ಕ್ಲೀನ್ ಚಿಟ್ ಪಡೆದು ಹೊರಗಡೆ ಬಂದ ಕವಿತಾ, ಪಕ್ಷದ ವಿಚಾರದ ಬಗ್ಗೆ ತಂದೆ ಮತ್ತು ಸೋದರನ ಜೊತೆಗೆ ಕಲಹ ಉಂಟಾಗಿತ್ತು. ಹಾಗಾಗಿ ಅದರಿಂದ ಬೇಸತ್ತು ಕವಿತಾ ಬಿ ಆರ್ ಎಸ್ ಪಕ್ಷದಿಂದ ಹೊರ ಬಂದಿದ್ದರು ಬಿ ಆರ್ ಎಸ್ ಪಕ್ಷದಿಂದ ಹೊರಬಂದು ಇದೀಗ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ.








