ಬೆಂಗಳೂರು : ರಾಜ್ಯದ ಹಲವಡೆ ಸಿಇಟಿ ಪರೀಕ್ಷಾ ವೇಳೆ ವಿದ್ಯಾರ್ಥಿಗಳಿಂದ ಸಿಬ್ಬಂದಿಗಳು ಜನಿವಾರ ತೆಗಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃಪಾ ನಿಧಿ ಕಾಲೇಜಿನಲ್ಲಿ ನಡೆದ ಘಟನೆ ಯ ಬಗ್ಗೆ ಮಾಹಿತಿ ಬಂದಿದೆ. ಸೀಟಿ ಪರೀಕ್ಷೆಗೆ ಬಂದಾಗ ವಿದ್ಯಾರ್ಥಿಯ ಜನಿವಾರ ತಗಿಸಿದ ಮಾಹಿತಿ ಬಂದಿದ್ದು ಪೊಲೀಸರು ಈಗಾಗಲೇ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳು ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ಕೃಪಾನಿಧಿ ಕಾಲೇಜಿನಲ್ಲಿ ಕೆಸಿಇಟಿ ಪರೀಕ್ಷೆಯ ಸಂದರ್ಭದಲ್ಲಿ ನಡೆದ ಘಟನೆ ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಪಾರದರ್ಶಕವಾಗಿ ಕ್ರಮ ಜರುಗಿಸಲಾಗುವುದು. ಈ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ.
ಪರೀಕ್ಷೆಗೆ ಬರುವ ವಿದ್ಯಾರ್ಥಿಗಳ ಕಿವಿ ಓಲೆ, ಬಳೆ, ಹಿಜಾಬ್ ಅಥವಾ ಜನಿವಾರ ತೆಗೆಸುವುದು, ಹಾಗೂ ಉದ್ದನೆಯ ತೋಳಿಗೆ ಕತ್ತರಿ ಹಾಕುವ ಮೂಲಕ ಅವರ ಮನೋಸ್ಥೈರ್ಯ ಕುಗ್ಗಿಸುವ ಅಮಾನವೀಯ ನಡೆ ಅಕ್ಷಮ್ಯ ಮತ್ತು ಖಂಡನೀಯ.
ಪರೀಕ್ಷಾ ಕೇಂದ್ರಗಳು ವಿದ್ಯಾರ್ಥಿಗಳ ಜ್ಞಾನವನ್ನು ಒರೆಗೆ ಹಚ್ಚುವ ತಾಣಗಳಾಗಬೇಕೇ ಹೊರತು, ಅವರ ಆತ್ಮಗೌರವಕ್ಕೆ ಧಕ್ಕೆ ತರುವ ಸ್ಥಳಗಳಲ್ಲ. ಮತ್ತೆಂದು ನಮ್ಮ ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಅತ್ಯಂತ ಗಂಭೀರ ಕ್ರಮ ವಹಿಸಲಿದೆ. ಈ ಘಟನೆಯಿಂದ ವಿದ್ಯಾರ್ಥಿಯು ಧೃತಿಗೆಡಬಾರದು ಎಂದು ವಿನಂತಿಸುತ್ತೇನೆ. ಪರೀಕ್ಷೆ ಮತ್ತು ಬದುಕಿನ ಗೆಲುವಿನ ದಾರಿಯತ್ತ ಶ್ರದ್ಧೆ ಮತ್ತು ನಿಶ್ಚಿಂತೆಯಿಂದ ಸಾಗಿ. ವಿದ್ಯಾರ್ಥಿ ಜೀವನದಲ್ಲಿ ಓದು ಮತ್ತು ನಿರಂತರ ಪರಿಶ್ರಮವೇ ಪೂಜೆ ಹಾಗೂ ತಪಸ್ಸು. ಇಡೀ ಸರ್ಕಾರ ನಿಮ್ಮ ಬೆನ್ನಿಗಿದೆ, ಧೈರ್ಯವಾಗಿ ಪರೀಕ್ಷೆ ಎದುರಿಸಿ ಯಶಸ್ವಿಯಾಗಿ.
ಕೃಪಾನಿಧಿ ಕಾಲೇಜಿನಲ್ಲಿ ಕೆಸಿಇಟಿ ಪರೀಕ್ಷೆಯ ಸಂದರ್ಭದಲ್ಲಿ ನಡೆದ ಘಟನೆ ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಪಾರದರ್ಶಕವಾಗಿ ಕ್ರಮ ಜರುಗಿಸಲಾಗುವುದು. ಈ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ.
ಪರೀಕ್ಷೆಗೆ ಬರುವ… pic.twitter.com/or07GDAIw5
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 25, 2026