ದಕ್ಷಿಣಕನ್ನಡ : ಧರ್ಮಸ್ಥಳ ವಿರುದ್ಧ ಷಡ್ಯಂತರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಳೆದ ನವೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕೋರ್ಟಿಗೆ ಎಸ್ಐಟಿ ಅಧಿಕಾರಿಗಳು ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿವೆ. ಇಂದು ಬೆಳತಂಗಡಿ ಕೋರ್ಟ್ ನಲ್ಲಿ ಎಸ್ಐಟಿ ಅಧಿಕಾರಿಗಳು ಸಲ್ಲಿಸಿದ ಪ್ರಾಥಮಿಕ ವರದಿಯ ಕುರಿತು ವಿಚಾರಣೆ ನಡೆಯಿತು. ವಿಚಾರಣೆಯ ಬಳಿಕ ಜಡ್ಜ್ ವಿಜಯೇಂದ್ರ ಡಿಸೆಂಬರ್ 26 ಕ್ಕೆ ಆದೇಶ ಕಯ್ದಿರಿಸಿದರು.
ಕೋರ್ಟ್ ಸಲ್ಲಿಸಿರುವ ತನಿಖಾ ವರದಿಯಲ್ಲಿ ಕ್ರಮಕ್ಕೆ ಮನವಿ ಸಲ್ಲಿಸಲಾಗಿದೆ. ಎಸ್ಐಟಿ ವರದಿ ಆಧಾರದಲ್ಲಿ ಕ್ರಮಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕೋರ್ಟಿಗೆ ಎಸ್ಐಟಿ ವರದಿ ಸಲ್ಲಿಸಿದ್ದು, ಎಸ್ಐಟಿ ವರದಿಯನ್ನು ಸ್ವೀಕರಿಸಿ ಬೆಳತಂಗಡಿ ಕೋರ್ಟ್ ವಾದ ಆಲಿಸಿತು. ಎಸ್ಐಟಿ ಪರ ವಕೀಲ ದಿವ್ಯರಾಜ ಹೆಗಡೆ ವಾದ ಮಂಡಿಸಿದರು.
ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಕಷ್ಟು ಸಾಕ್ಷಿ ಆಧಾರಗಳಿವೆ. ಹೀಗಾಗಿ ಆರೋಪಿಗಳು ವಿರುದ್ಧ ಕ್ರಮ ಕೈಗೊಳಲು ನಿರ್ದೇಶನ ನೀಡಿ, ಚಿನ್ನಯ್ಯ ಜೊತೆಗೆ ಷಡ್ಯಂತರದಲ್ಲಿ ಉಳಿದ ಐವರು ಸಹ ಭಾಗಿಯಾಗಿದ್ದಾರೆ. ಈ ಬಗ್ಗೆ ಎಸ್ಐಟಿ ಉಲ್ಲೇಖಿಸಿದೆ ವಾದ ಆಲಿಸಿ ಡಿಸೆಂಬರ್ 26 ಕ್ಕೆ ಕೋರ್ಟ್ ಆದೇಶ ಕಾಯ್ದೆರಿಸಿತು ಡಿಸೆಂಬರ್ 26ರಂದು ಜಡ್ಜ ವಿಜಯೇಂದ್ರ ಆದೇಶ ಪ್ರಕಟಿಸಲಿದ್ದಾರೆ.








