Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭದ್ರತಾ ಕಾರಣ: ಪಾಕಿಸ್ತಾನಕ್ಕೆ ತೆರಳುವ ಅಮೆರಿಕ ನಿಯೋಗದಲ್ಲಿ ಜೆ.ಡಿ. ವ್ಯಾನ್ಸ್ ಭಾಗಿ ಇಲ್ಲ; ಸ್ಪಷ್ಟನೆ ನೀಡಿದ ಡೊನಾಲ್ಡ್ ಟ್ರಂಪ್

19/04/2026 8:21 PM

ಸಾಗರದಲ್ಲಿ ‘ಕಾಗೋಡು ಚಳುವಳಿ’ಗೆ 75ರ ಸಂಭ್ರಮ: ‘ಬದುಕಿಗಾಗಿ ಭೂಮಿ’ ಹೋರಾಟ ಎಂದಿಗೂ ಪ್ರಸ್ತುತವೆಂದ ಬಿ.ಆರ್.ಜಯಂತ್

19/04/2026 8:16 PM

ಬಂಗಾಳದಲ್ಲಿ ‘ಝಲ್ಮುರಿ’ ಸವಿದ ಪ್ರಧಾನಿ ಮೋದಿ; “ನೀವು ಈರುಳ್ಳಿ ತಿಂತೀರಾ?” ಎಂದು ಕೇಳಿದ ವ್ಯಾಪಾರಿ! ವಿಡಿಯೋ ವೈರಲ್ | Watch video

19/04/2026 8:12 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಡಿಸೆಂಬರ್ 5 ರಂದು ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳಿಂದ ‘ಬೃಹತ್ ಸಮಾವೇಶ’
KARNATAKA

BREAKING : ಡಿಸೆಂಬರ್ 5 ರಂದು ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳಿಂದ ‘ಬೃಹತ್ ಸಮಾವೇಶ’

By kannadanewsnow0524/11/2024 12:49 PM

ಹಾಸನ : ವಾಲ್ಮೀಕಿ ಹಗರಣ, ಮುಡಾ ಹಗರಣ ಸೇರಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಾಲು ಸಾಲು ಹಗರಣಗಳಿಂದ ಮುಜುಗರಕ್ಕೆ ಈಡಾಗಿತ್ತು. ಈ ಬಾರಿಯ 3 ವಿಧಾನಸಭಾ ಉಪಚುನಾವಣೆಯಲ್ಲಿ ಗೆಲ್ಲುವುದು ಕಷ್ಟ ಅಂತ ಅಂದಾಜಿಸಲಾಗಿತ್ತು. ಆದರೆ ನಿನ್ನೆ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ಹಾಸನದಲ್ಲಿ ಡಿಸೆಂಬರ್ 5 ರಂದು ಸಿಎಂ ಸಿದ್ದರಾಮಯ್ಯ ಅವರ ಅಭಿಮಾನಿಗಳು ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ.

ಹೌದು ಸಾಲು ಸಾಲು ಆರೋಪ, ವಿಪಕ್ಷಗಳ ಹೋರಾಟದಿಂದ ಬೆಂಡಾಗಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಈಗ ಚುನಾವಣೆ ಫಲಿತಾಂಶ ಹೊಸ ಭರವಸೆ ನೀಡಿದೆ. ಪಕ್ಷಕ್ಕೆ ಹೊಸ ಉತ್ಸಾಹ ದೊರೆತಿರುವ ಈ ಸಂದರ್ಭದಲ್ಲೇ ಸಿದ್ದರಾಮಯ್ಯ ಅಭಿಮಾನಿಗಳ ಹೆಸರಿನಲ್ಲಿ ಅವರ ಬೆಂಬಲಿಗ ಸಚಿವರು ಹಾಸನದಲ್ಲಿ ಬೃಹತ್ ಸಮಾವೇಶ ನಡೆಸಲು ಸಜ್ಜಾಗಿದ್ದಾರೆ. ಡಿಸೆಂಬರ್ 5 ರಂದು ಸರ್ಕಾರ ಹೊರತುಪಡಿಸಿ, ಅಭಿಮಾನಿಗಳಿಂದಲೇ ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಸಾಲು ಸಾಲು ಆರೋಪ ಮಾಡಿ ಜೆಡಿಎಸ್, ಬಿಜೆಪಿ ನಡೆಸಿದ ಹೋರಾಟಕ್ಕೆ ತಮ್ಮ ಬೆಂಬಲಿಗರ ಮೂಲಕ ಸೆಡ್ಡು ಹೊಡೆಯಲು ಮುಂದಾಗಿರುವ ಸಿದ್ದರಾಮಯ್ಯ, ಅದಕ್ಕಾಗಿ ಜೆಡಿಎಸ್ ಭದ್ರಕೋಟೆ ಎಂದು ಕರೆಸಿಕೊಳ್ಳುತ್ತಿದ್ದ ಮಾಜಿ ಪ್ರದಾನಿ ದೇವೇಗೌಡರ ಕರ್ಮಭೂಮಿ, ತವರು ಜಿಲ್ಲೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಲಕ್ಷ ಲಕ್ಷ ಬೆಂಬಲಿಗರ ಸಮಾವೇಶ ನಡೆಸುವ ಮೂಲಕ ವಿರೋಧಿಗಳಿಗೆ ಸೆಡ್ಡು ಹೊಡೆಯುವುದರ ಜೊತೆಗೆ, ಪಕ್ಷದೊಳಗಿನ ತಮ್ಮ ವಿರೋಧಿಗಳಿಗೂ ಪರೋಕ್ಷವಾಗಿ ಎಚ್ಚರಿಕೆ ನೀಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ.

ಹಾಸನದಲ್ಲಿ ಇಂದು ಸಚಿವರಾದ ಎಚ್​ಸಿ ಮಹದೇವಪ್ಪ, ಕೆಎನ್ ರಾಜಣ್ಣ, ಪಿರಿಯಾಪಟ್ಟಣ ವೆಂಕಟೇಶ, ಬೋಸರಾಜು, ಶಾಸಕರಾದ ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಸಿದ್ದು ಪುತ್ರ ಯತೀಂದ್ರ ಸಭೆ ನಡೆಸಿ ಸಮಾವೇಶದ ಬಗ್ಗೆ ಘೋಷಣೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಅಭಿಮಾನಿಗಳು ಬಂದು ಕೇಳಿಕೊಂಡರು. ಹಾಗಾಗಿ ನಾವು ಅವರಿಗೆ ಸಹಾಯ ಮಾಡುತ್ತೇವೆ, 40 ವರ್ಷ ಅತ್ಯಂತ ಕ್ಲೀನ್ ಇಮೆಜ್​ನಿಂದ ರಾಜಕೀಯ ನಡೆಸಿದ ಸಿದ್ದರಾಮಯ್ಯ ಅವರ ಹೆಸರಿಗೆ ಕುಂದು ತರುವ ಕೆಲಸ ನಡೆದಿದ್ದು, ಇದರ ವಿರುದ್ಧ ಅವರ ಅಭಿಮಾನಿಗಳೇ‌ ಸಮಾವೇಶ ನಡೆಸಲು ಮುಂದಾಗಿದ್ದಾರೆ ಎಂದು ಸಚಿವ HC ಮಹದೇವಪ್ಪ ತಿಳಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ಸಾಗರದಲ್ಲಿ ‘ಕಾಗೋಡು ಚಳುವಳಿ’ಗೆ 75ರ ಸಂಭ್ರಮ: ‘ಬದುಕಿಗಾಗಿ ಭೂಮಿ’ ಹೋರಾಟ ಎಂದಿಗೂ ಪ್ರಸ್ತುತವೆಂದ ಬಿ.ಆರ್.ಜಯಂತ್

19/04/2026 8:16 PM2 Mins Read

ಸಾಗರದ ಮಾರಿಕಾಂಬಾ ರುದ್ರಭೂಮಿಯಲ್ಲಿ ವಿವಿಧ ಸಂಘಟನೆಗಳಿಂದ ಶ್ರಮದಾನ: ಸ್ವಚ್ಛತೆಗೆ ಸಾರ್ವಜನಿಕರಿಗೆ ಮನವಿ

19/04/2026 8:07 PM2 Mins Read

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

19/04/2026 8:05 PM2 Mins Read
Recent News

ಭದ್ರತಾ ಕಾರಣ: ಪಾಕಿಸ್ತಾನಕ್ಕೆ ತೆರಳುವ ಅಮೆರಿಕ ನಿಯೋಗದಲ್ಲಿ ಜೆ.ಡಿ. ವ್ಯಾನ್ಸ್ ಭಾಗಿ ಇಲ್ಲ; ಸ್ಪಷ್ಟನೆ ನೀಡಿದ ಡೊನಾಲ್ಡ್ ಟ್ರಂಪ್

19/04/2026 8:21 PM

ಸಾಗರದಲ್ಲಿ ‘ಕಾಗೋಡು ಚಳುವಳಿ’ಗೆ 75ರ ಸಂಭ್ರಮ: ‘ಬದುಕಿಗಾಗಿ ಭೂಮಿ’ ಹೋರಾಟ ಎಂದಿಗೂ ಪ್ರಸ್ತುತವೆಂದ ಬಿ.ಆರ್.ಜಯಂತ್

19/04/2026 8:16 PM

ಬಂಗಾಳದಲ್ಲಿ ‘ಝಲ್ಮುರಿ’ ಸವಿದ ಪ್ರಧಾನಿ ಮೋದಿ; “ನೀವು ಈರುಳ್ಳಿ ತಿಂತೀರಾ?” ಎಂದು ಕೇಳಿದ ವ್ಯಾಪಾರಿ! ವಿಡಿಯೋ ವೈರಲ್ | Watch video

19/04/2026 8:12 PM

ಸಾಗರದ ಮಾರಿಕಾಂಬಾ ರುದ್ರಭೂಮಿಯಲ್ಲಿ ವಿವಿಧ ಸಂಘಟನೆಗಳಿಂದ ಶ್ರಮದಾನ: ಸ್ವಚ್ಛತೆಗೆ ಸಾರ್ವಜನಿಕರಿಗೆ ಮನವಿ

19/04/2026 8:07 PM
State News
KARNATAKA

ಸಾಗರದಲ್ಲಿ ‘ಕಾಗೋಡು ಚಳುವಳಿ’ಗೆ 75ರ ಸಂಭ್ರಮ: ‘ಬದುಕಿಗಾಗಿ ಭೂಮಿ’ ಹೋರಾಟ ಎಂದಿಗೂ ಪ್ರಸ್ತುತವೆಂದ ಬಿ.ಆರ್.ಜಯಂತ್

By kannadanewsnow0919/04/2026 8:16 PM KARNATAKA 2 Mins Read

ಶಿವಮೊಗ್ಗ: “ಮಾನವನ ಬದುಕನ್ನು ಸುಧಾರಿಸುವಲ್ಲಿ ಮತ್ತು ಸಾಮಾಜಿಕ ನ್ಯಾಯ ದೊರಕಿಸಿಕೊಡುವಲ್ಲಿ ಹೋರಾಟಗಳು ಪ್ರಮುಖ ಪಾತ್ರ ವಹಿಸುತ್ತವೆ. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಭೂಹೀನ…

ಸಾಗರದ ಮಾರಿಕಾಂಬಾ ರುದ್ರಭೂಮಿಯಲ್ಲಿ ವಿವಿಧ ಸಂಘಟನೆಗಳಿಂದ ಶ್ರಮದಾನ: ಸ್ವಚ್ಛತೆಗೆ ಸಾರ್ವಜನಿಕರಿಗೆ ಮನವಿ

19/04/2026 8:07 PM

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

19/04/2026 8:05 PM

BREAKING: ಕಾವೇರಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 6 ಮಂದಿ ದುರ್ಮರಣ

19/04/2026 5:55 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.