Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಎಷ್ಟೇ ಡಿಮ್ಯಾಂಡ್‌‌ ಇದ್ರು ಭಾರತ ‘ಮಾವಿನ ಹಣ್ಣ’ನ್ನು ರಫ್ತು ಮಾಡಲ್ಲ ಯಾಕೆ ಗೊತ್ತಾ? ಇಲ್ಲಿದೆ ಮಾಹಿತಿ

20/04/2026 4:31 AM

ಇನ್ಮುಂದೆ ‘ಹಣ ವರ್ಗಾವಣೆ’ ತಕ್ಷಣ ಆಗಲ್ಲ; ದೊಡ್ಡ ಮೊತ್ತದ ಪಾವತಿಗೆ ಹೊಸ ‘ಬ್ರೇಕ್’ ಹಾಕಿದ RBI

20/04/2026 4:20 AM

ಬ್ಯಾಂಕ್ FD ಮರೆತುಬಿಡಿ; ಪೋಸ್ಟ್ ಆಫೀಸ್‌ನ ಈ 5 ಸ್ಕೀಮ್‌ಗಳಲ್ಲಿ ಹಣ ಇಟ್ಟರೆ ಸಿಗುತ್ತೆ ಬಂಪರ್ ಲಾಭ!

20/04/2026 4:10 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯದಲ್ಲಿ `ಒಳಮೀಸಲಾತಿ’ ಜಾರಿ ಬಗ್ಗೆ CM ಸಿದ್ದರಾಮಯ್ಯ ಮಹತ್ವದ ಹೇಳಿಕೆ!
KARNATAKA

BREAKING : ರಾಜ್ಯದಲ್ಲಿ `ಒಳಮೀಸಲಾತಿ’ ಜಾರಿ ಬಗ್ಗೆ CM ಸಿದ್ದರಾಮಯ್ಯ ಮಹತ್ವದ ಹೇಳಿಕೆ!

By kannadanewsnow5705/10/2024 1:14 PM

ರಾಯಚೂರು : ಒಳಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ, ಒಳ ಮೀಸಲಾತಿಗೆ ನಮ್ಮ ಸರ್ಕಾರದ ವಿರೋಧವಿಲ್ಲ. ಆದರೆ ಇದರ ಬಗ್ಗೆಯೂ ವರಿಷ್ಠರೊಂದಿಗೆ ಹಾಗೂ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ, ಶೈಕ್ಷಣಿಕ ಗಣತಿ ವರದಿಯನ್ನು ಈಗಾಗಲೇ ಸ್ವೀಕರಿಸಲಾಗಿದ್ದು, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ವರದಿಯಲ್ಲಿ ಸಣ್ಣಪುಟ್ಟ ದೋಷಗಳಿದ್ದರೆ ಅದನ್ನು ಸರಿಪಡಿಸುವ ಬಗ್ಗೆಯೂ ಪರಿಶೀಲಿಸಲಾಗುವುದು. ಪಕ್ಷದ ರಾಜ್ಯ ಮಟ್ಟದ ವಿವಿಧ ನಾಯಕರು ವರಿಷ್ಠರೊಂದಿಗೆ ಚರ್ಚೆ ಮಾಡುವುದು ಸಹಜ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಊಹಾಪೋಹಗಳು ಅಗತ್ಯವಿಲ್ಲ. ವಿರೋಧಪಕ್ಷಗಳು ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ರಾಜೀನಾಮೆ ಬೇಡಿದರೆ, ರಾಜೀನಾಮೆ ಕೊಡಲು ಸಾಧ್ಯವಿಲ್ಲ. ಸುಳ್ಳು ಆರೋಪಗಳನ್ನು ಮಾಡಿದರೆ, ವಸ್ತುಸ್ಥಿತಿಯನ್ನು ಜನರ ಮುಂದಿಡುವ ಕೆಲಸ ಮಾಡುತ್ತೇವೆ ಎಂದರು.

ಜಿ.ಟಿ.ದೇವೇಗೌಡ ಅವರು ಜೆಡಿಎಸ್ ಪಕ್ಷದ ಕೋರ್ ಕಮಿಟಿಯ ಅಧ್ಯಕ್ಷ ಸ್ಥಾನದಲ್ಲಿದ್ದು, ಮುಡಾದ ಸದಸ್ಯರೂ ಆಗಿದ್ದಾರೆ. ಅವರು ಸತ್ಯ ಹೇಳಿರುವುದರಲ್ಲಿ ತಪ್ಪಿಲ್ಲ. ಈ ಪ್ರಕರಣದ ವಿರುದ್ಧ ವಿರೋಧ ಪಕ್ಷದವರು ಪಾದಯಾತ್ರೆಯನ್ನು ನಡೆಸುವುದು ಬೇಡ ಎಂದವರಲ್ಲಿ ಜಿ.ಟಿ ದೇವೇಗೌಡರು ಒಬ್ಬರು. ವಿರೋಧಪಕ್ಷದ ನಾಯಕರಾದ ಆರ್. ಅಶೋಕ್ ಅವರ ಮೇಲೆ ಎಫ್.ಐ.ಆರ್ ಆಗಿರುವುದರಿಂದ ಮೊದಲು ಅವರು ರಾಜೀನಾಮೆ ನೀಡಲಿ, ಜಮೀನು ಖರೀದಿ ಹಗರಣದಲ್ಲಿ ಅವರು ಈ ಹಿಂದೆ ಭಾಗಿಯಾಗಿದ್ದರು ಎಂದು ತಿರುಗೇಟು ನೀಡಿದರು.

ಕರ್ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. 1973 ರಲ್ಲಿ ಮೈಸೂರು ರಾಜ್ಯಕ್ಕೆ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ಎಂದು ನಾಮಕರಣ ಮಾಡಿದ್ದಕ್ಕೆ 50 ವರ್ಷಗಳು ತುಂಬಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸಂಭ್ರಮವನ್ನು ಇಂದು ಆಚರಿಸಲಾಗುತ್ತಿದೆ. ಈ ಪ್ರಯುಕ್ತ ವಿಧಾನಸೌಧದಲ್ಲಿ ಭುವನೇಶ್ವರಿ ಪ್ರತಿಮೆಯನ್ನೂ ಸಹ ಪ್ರತಿಷ್ಠಾಪಿಸಲಾಗುತ್ತಿದೆ. ಗೋಕಾಕ್ ಚಳವಳಿ ಮತ್ತು ಕನ್ನಡ ಸಂಭ್ರಮಕ್ಕೆ ಸಂಬಂಧಪಟ್ಟಂತೆ ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ಮಾಡುತ್ತಿರುವ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

BREAKING : ರಾಜ್ಯದಲ್ಲಿ `ಒಳಮೀಸಲಾತಿ' ಜಾರಿ ಬಗ್ಗೆ CM ಸಿದ್ದರಾಮಯ್ಯ ಮಹತ್ವದ ಹೇಳಿಕೆ! BREAKING: CM Siddaramaiah makes crucial statement on implementation of 'internal reservation' in the state
Share. Facebook Twitter LinkedIn WhatsApp Email

Related Posts

ಶಿವಮೊಗ್ಗ: ನಾಳೆ ಸೊರಬದ ದೂಗೂರು ಗ್ರಾಮದಲ್ಲಿ ಶ್ರೀ ಪಾರ್ವತಿ ದೇವಿಯ ಪ್ರಾಣ ಪ್ರತಿಷ್ಠಾಪನೆ, ನೂತನ ದೇವಾಲಯ ಲೋಕಾರ್ಪಣೆ

19/04/2026 9:28 PM1 Min Read

BREAKING: ಮೈಸೂರಿನ ಕಾವೇರಿ ನದಿ ದುರಂತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯ

19/04/2026 9:15 PM1 Min Read

ಶಿವಮೊಗ್ಗ: ಸಾಗರದ ಸಿರಿವಂತೆಯ ‘ಚಿತ್ರಸಿರಿ ಪ್ರಶಸ್ತಿ’ ಹೃದಯವಂತಿಕೆಯ ಪ್ರತೀಕ: ಬಿ.ಆರ್. ಜಯಂತ್

19/04/2026 9:08 PM2 Mins Read
Recent News

ಎಷ್ಟೇ ಡಿಮ್ಯಾಂಡ್‌‌ ಇದ್ರು ಭಾರತ ‘ಮಾವಿನ ಹಣ್ಣ’ನ್ನು ರಫ್ತು ಮಾಡಲ್ಲ ಯಾಕೆ ಗೊತ್ತಾ? ಇಲ್ಲಿದೆ ಮಾಹಿತಿ

20/04/2026 4:31 AM

ಇನ್ಮುಂದೆ ‘ಹಣ ವರ್ಗಾವಣೆ’ ತಕ್ಷಣ ಆಗಲ್ಲ; ದೊಡ್ಡ ಮೊತ್ತದ ಪಾವತಿಗೆ ಹೊಸ ‘ಬ್ರೇಕ್’ ಹಾಕಿದ RBI

20/04/2026 4:20 AM

ಬ್ಯಾಂಕ್ FD ಮರೆತುಬಿಡಿ; ಪೋಸ್ಟ್ ಆಫೀಸ್‌ನ ಈ 5 ಸ್ಕೀಮ್‌ಗಳಲ್ಲಿ ಹಣ ಇಟ್ಟರೆ ಸಿಗುತ್ತೆ ಬಂಪರ್ ಲಾಭ!

20/04/2026 4:10 AM

ಶಿವಮೊಗ್ಗ: ನಾಳೆ ಸೊರಬದ ದೂಗೂರು ಗ್ರಾಮದಲ್ಲಿ ಶ್ರೀ ಪಾರ್ವತಿ ದೇವಿಯ ಪ್ರಾಣ ಪ್ರತಿಷ್ಠಾಪನೆ, ನೂತನ ದೇವಾಲಯ ಲೋಕಾರ್ಪಣೆ

19/04/2026 9:28 PM
State News
KARNATAKA

ಶಿವಮೊಗ್ಗ: ನಾಳೆ ಸೊರಬದ ದೂಗೂರು ಗ್ರಾಮದಲ್ಲಿ ಶ್ರೀ ಪಾರ್ವತಿ ದೇವಿಯ ಪ್ರಾಣ ಪ್ರತಿಷ್ಠಾಪನೆ, ನೂತನ ದೇವಾಲಯ ಲೋಕಾರ್ಪಣೆ

By kannadanewsnow0919/04/2026 9:28 PM KARNATAKA 1 Min Read

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ದೂಗೂರು ಗ್ರಾಮದಲ್ಲಿ ಶ್ರೀ ಪಾರ್ವತೀ ದೇವಿಯ ಪುನರ್ ಪ್ರಾಣಪ್ರತಿಷ್ಠಾಪನೆ, ದೇವಾಲಯ ಪ್ರವೇಶೋತ್ಸವ ಹಾಗೂ ಕಳಶಾರೋಹಣ…

BREAKING: ಮೈಸೂರಿನ ಕಾವೇರಿ ನದಿ ದುರಂತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯ

19/04/2026 9:15 PM

ಶಿವಮೊಗ್ಗ: ಸಾಗರದ ಸಿರಿವಂತೆಯ ‘ಚಿತ್ರಸಿರಿ ಪ್ರಶಸ್ತಿ’ ಹೃದಯವಂತಿಕೆಯ ಪ್ರತೀಕ: ಬಿ.ಆರ್. ಜಯಂತ್

19/04/2026 9:08 PM

ಸಾಗರದ ಅದರಂತೆ ಗ್ರಾಮದಲ್ಲಿ ಕಲ್ಲೇಶ್ವರ ದೇವಸ್ಥಾನ ಪುನರ್ ಪ್ರತಿಷ್ಠಾಪನೆ: ನಾಳೆ ನೂತನ ಆಲಯ ಲೋಕಾರ್ಪಣೆ

19/04/2026 8:58 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.