ಕೊಪ್ಪಳ : ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಮಧ್ಯ ಜಟಾಪಟಿ ನಡೆದಿತ್ತು. ಬಳಿಕ ಬ್ರೇಕ್ ಫಾಸ್ಟ್ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಇದೀಗ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ನಾಲಿಗೆ ಹರಿಬಿಟ್ಟಿದ್ದಾರೆ.ಕೊಪ್ಪಳದಲ್ಲಿ ಮಾಧ್ಯಮಗಳು ಸಿದ್ದರಾಮಯ್ಯ ಸ್ಥಾನ ಭದ್ರ ಇದೆಯಾ ಎಂದು ಕೇಳಿದಕ್ಕೆ ಸಿಎಂ ಸಿದ್ದರಾಮಯ್ಯ ನೆಗೆದುಬಿದ್ದು ಹೋಗ್ತಿದಾರೆ. ಇನ್ನು ಬೇರೆ ಪದ ಹೇಳಬೆಕಾ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ನೆಗೆದುಬಿದ್ದು ಹೋಗ್ತಿದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.








