ಬಳ್ಳಾರಿ : ಈಗಾಗಲೇ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಡಿ ಸಂಕಷ್ಟ ಎದುರಾಗಿದ್ದು ಇದರ ಮಧ್ಯೆ ಶಾಸಕ ಜನಾರ್ಧನ ರೆಡ್ಡಿ ಅವರು ಸಿಎಂ ಸಿದ್ಧರಾಮಯ್ಯ ವಿರುದ್ಧ ಮತ್ತೊಂದು ಸ್ಪೋಟಕವಾದ ಆರೋಪ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ 5,000 ಕೋಟಿ ರೂಪಾಯಿಯ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಬೇನಾಮಿ ಆಸ್ತಿಯ ಬಾಂಬ್ ಸಿಡಿಸಿದ್ದಾರೆ.
ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿ ಜಿಲ್ಲಾ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಅವರು ಬಹಳ ವರ್ಷಗಳ ಬಳಿಕ ಬಳ್ಳಾರಿಗೆ ಆಗಮಿಸಿದ್ದಾರೆ. ಜಿಲ್ಲೆಗೆ ಪ್ರವೇಶ ಮಾಡುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ 5 ಸಾವಿರ ಕೋಟಿ ರೂ. ಬೇನಾಮಿ ಆಸ್ತಿಯ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಜನಾರ್ದನ ರೆಡ್ಡಿ ಅವರು,ಸಿದ್ದರಾಮಯ್ಯ ಹಿಂದೆ ಮಾಡಿದ್ದಕ್ಕೆ ಈಗ ಅನುಭವಿಸುತ್ತಿದ್ದಾರೆ. ಮುಡಾ ಪ್ರಕರಣದಲ್ಲಿ 14 ಸೈಟು 62 ಕೋಟಿ ರೂಪಾಯಿ ಈ ವಿಚಾರ ಅಲ್ಲ ಸಿದ್ದರಾಮಯ್ಯ, ಅವರ ಕುಟುಂಬಸ್ಥರು ಮತ್ತು ಸಂಬಂಧಿಕರ ಮೂಲಕ 5,000 ಕೋಟಿ ರೂಪಾಯಿ ಆಸ್ತಿ ಬೆನಾಮಿಯಾಗಿ ಮಾಡಿದ್ದಾರೆ. ಇದೆಲ್ಲಾ ತನಿಖೆ ಆಗಬೇಕು. ರಾಜೀನಾಮೆ ಕೇಳಿ ಕೇಳಿ ಸಾಕಾಗಿದೆ. ಹಿಂದೆ ಅಡ್ವಾಣಿ ಅವರ ಒಂದೇ ಮಾತಿಗೆ ರಾಜೀನಾಮೆ ಕೊಟ್ಟೇವು ಬಿ ಎಸ್ ಯಡಿಯೂರಪ್ಪ ನಾವು ರಾಜೀನಾಮೆ ಕೊಟ್ಟು ಸರ್ಕಾರವನ್ನು ವಿಸರ್ಜಿಸಿದ್ದೆವು. ಈಗ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ವಾಗ್ದಾಳಿ ನಡೆಸಿದರು.
ಬಳ್ಳಾರಿಯಲ್ಲಿ ಹಲವು ಸ್ಟೀಲ್ ಕಂಪನಿಗಳು ಬರಬೇಕಿತ್ತು. ಆದ್ರೆ ಸಿದ್ದರಾಮಯ್ಯ ಅದಕ್ಕೆ ಕಲ್ಲು ಹಾಕಿ, ಜನರ ಉದ್ಯೋಗ ಕಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟಿ ಕೋಟಿ ಹಣ ಲೂಟಿ ಆಗಿದೆ. ಸಿದ್ದರಾಮಯ್ಯ ಸದನದಲ್ಲಿ 180 ಕೊಟಿ ಅಲ್ಲ 82 ಕೋಟಿ ರೂ. ಎಂದು ಒಪ್ಪಿಕೊಂಡಿದ್ದಾರೆ.. ಇಲ್ಲಿ ಕೇವಲ ನಾಗೇಂದ್ರ ಮಾತ್ರ ಅಲ್ಲ, ಇಡೀ ಸರ್ಕಾರ ಭಾಗಿಯಾಗಿದೆ ಎಂದು ಆರೋಪಸಿದರು.