ಬೆಂಗಳೂರು : ಬೆಂಗಳೂರಿನಲ್ಲಿ ವಿಚ್ಛೇದನದ ಬಳಿಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, ನಿವೇದಿತಾ ಯಾವುದೇ ಜೀವನಾಂಶ ಪಡೆದುಕೊಂಡಿಲ್ಲ ನಿವೇದಿತಾ ಇಂಡಿಪೆಂಡೆಂಟ್ ಮಹಿಳೆಯಾಗಿದ್ದಾರೆ ಜೊತೆ ಇದಾಗಲೂ ತಮ್ಮ ಕೆಲಸ ತಾವು ನೋಡ್ಕೋತಿದ್ದರು. ಮೂರನೇ ವ್ಯಕ್ತಿ ಜೊತೆ ನಿವೇದಿತಾ ಸಂಬಂಧ ಕಲ್ಪಿಸುವುದು ಬೇಸರ ತರಿಸಿದೆ ಎಂದು ತಿಳಿಸಿದರು.
ಇತ್ತೀಚಿಗೆ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವೈಯಕ್ತಿಕ ಕಾರಣಗಳಿಂದ ವಿಚ್ಛೇದನ ಪಡೆದಿದ್ದರು ಇ ವಿಚಾರಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವದಂತಿಗಳು ಹರಡಿದ್ದವು. ಇದೀಗ ಈ ಒಂದು ವದಂತಿಗೆ ಚಂದನ್ ಶೆಟ್ಟಿ ತೆರೆ ಎಳೆದಿದ್ದು,ನಿವೇದಿತಾ ಯಾವುದೇ ಜೀವನಾಂಶ ಪಡೆದುಕೊಂಡಿಲ್ಲ ನಿವೇದಿತಾ ಇಂಡಿಪೆಂಡೆಂಟ್ ಮಹಿಳೆಯಾಗಿದ್ದಾರೆ ಜೊತೆ ಇದಾಗಲೂ ತಮ್ಮ ಕೆಲಸ ತಾವು ನೋಡ್ಕೋತಿದ್ದರು. ಮೂರನೇ ವ್ಯಕ್ತಿ ಜೊತೆ ನಿವೇದಿತಾ ಸಂಬಂಧ ಕಲ್ಪಿಸುವುದು ಬೇಸರ ತರಿಸಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮಿಬ್ಬರ ಆಲೋಚನೆ ಜೀವನಶೈಲಿ ಬೇರೆ ಬೇರೆಯಾಗಿದ್ದವು. ನಿತ್ಯ ಮನಸ್ತಾಪ ಬರುತ್ತಿತ್ತು. ಒಟ್ಟಿಗೆ ಇರುವುದು ಸರಿಯಲ್ಲ ಅನಿಸಿತು. ಹಾಗಾಗಿ ಪರಸ್ಪರ ವಿಚ್ಛೇದನ ಪಡೆಯಲು ನಿರ್ಧಾರ ಮಾಡಿದ್ವಿ ಎಂದು ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದರು.
ಕೋಟ್ಯಾಂತರ ರೂಪಾಯಿ ನನ್ನಿಂದ ನಿವೇದಿತ ಡಿಮ್ಯಾಂಡ್ ಮಾಡಿದ್ದಾರೆಂದು ಸಮಾಜದ ಜಾಲತಾಣದಲ್ಲಿ ಹರಿದಾಡುತ್ತಿದೆ ಆದರೆ ನಿವೇದಿತಾ ಜೀವನಾಂಶ ಕೇಳಿಲ್ಲ ಹಾಗೂ ಇನ್ಯಾವುದೇ ಆಗಲಿ ಅವರು ನನ್ನ ಬಳಿ ಕೇಳಿಲ್ಲ. ಇನ್ನು ಮಕ್ಕಳ ವಿಚಾರಕ್ಕೆ ಸಂಬಂಧಿಸಿದಂತೆ ಮಕ್ಕಳು ಮಾಡಿಕೊಳ್ಳುವುದು ಬೇಡ ಎನ್ನುವುದಕ್ಕೆ ವಿಚ್ಛೇದನ ಪಡೆದುಕೊಳ್ಳುತ್ತಿದ್ದೇವೆ ಅದು ಕೂಡ ಸುಳ್ಳು ಎಂದು ಚಂದನ್ ಶೆಟ್ಟಿ ಸ್ಪಷ್ಟಪಡಿಸಿದರು.
ಬೇಡದಿರುವ ವಿಚಾರಗಳನ್ನು ಸೃಷ್ಟಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ ನನ್ನ ಮತ್ತು ನಿವೇದಿತ ಆಲೋಚನೆಗಳೇ ಬೇರೆ ಬೇರೆಯಾಗಿವೆ ಇಬ್ಬರು ಹೊಂದಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದೆವು. ಆದರೆ ನಮ್ಮಿಬ್ಬರ ಮಧ್ಯೆ ಹೊಂದಾಣಿಕೆ ಆಗಲಿಲ್ಲ ಹಾಗಾಗಿ ನಾವು ಕಾನೂನಿಪ್ರಕಾರವಾಗಿ ವಿಚ್ಛೇದನ ಪಡೆದಿದ್ದೇವೆ ಎಂದು ತಿಳಿಸಿದರು.