ಬೆಳಗಾವಿ : ಕಳೆದ 2023 ಡಿಸೆಂಬರ್ 10 ರಂದು ಬೆಳಗಾವಿ ತಾಲೂಕಿನ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು 12 ಆರೋಪಿಗಳಿಗೆ ಬೆಳಗಾವಿ ಕೋರ್ಟ್ ಶಿಕ್ಷೆ ಪ್ರಕಟಿಸಲಿದೆ.
ಹೌದು 2023 ಡಿಸೆಂಬರ್ 10ರಂದು ಬೆಳಗಾವಿ ತಾಲೂಕಿನ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿಲಾಗಿತ್ತು. ಒಟ್ಟು 13 ಆರೋಪಿಗಳ ವಿರುದ್ಧ ಪೊಲೀಸರು ಜಾರ್ಜ್ ಫಿಟ್ ಸಲ್ಲಿಸಿದರು. ಓರ್ವ ಬಾಲಾಪರಾಧಿಗೆ ಸೇರಿದಂತೆ 13 ಆರೋಪಿಗಳ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು.
ಎರಡು ವರ್ಷಗಳ ವಿಚಾರಣೆ ಬಳಿಕ 12 ಜನ ತಪ್ಪಿತಸ್ಥರು ಎಂದು ಇದೀಗ ಸಾಬೀತು ಆಗಿದ್ದು, ಇಂದು 12 ಆರೋಪಿಗಳಿಗೆ ಬೆಳಗಾವಿ ಕೋರ್ಟ್ ಶಿಕ್ಷೆ ಪ್ರಕಟಿಸಲಿದೆ. ಶನಿವಾರ 12 ಮಂದಿ ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿತ್ತು. ಬೆಳಗಾವಿ 10ನೇ ಹೆಚ್ಚುವರಿ ಜಿಲ್ಲಾಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿತು.








